ರಾಹುಲ್‌ ಗಾಂಧಿ ವೀಡಿಯೊ ತಿರುಚಿದ ಆರೋಪ: ಟಿವಿ ನಿರೂಪಕ, ಬಿಜೆಪಿಯ ರಾಜ್ಯವರ್ಧನ್‌ ಸಿಂಗ್‌ ವಿರುದ್ಧ ಪ್ರಕರಣ

Update: 2022-07-03 06:18 GMT

ಜೈಪುರ: ಕೇರಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉದಯ್‌ಪುರದ ಹೇಳಿಕೆಯಂತೆ ತಿರುಚುವ ಮೂಲಕ ಸುಳ್ಳು ಸುದ್ದಿಯನ್ನು ಹರಡಿದ ಆರೋಪದ ಮೇಲೆ ಟಿವಿ ಸುದ್ದಿ ನಿರೂಪಕ, ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜ್ಯವರ್ಧನ್ ರಾಥೋಡ್ ಮತ್ತು ಇತರರ ವಿರುದ್ಧ ಶನಿವಾರ ರಾತ್ರಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಐಪಿಸಿ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), 505 (ಅಪರಾಧ ಬೆದರಿಕೆ), 153 ಎ (ಧರ್ಮ, ಜನಾಂಗ, ಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು),  295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಆಕ್ರೋಶಗೊಳಿಸುವ ಉದ್ದೇಶ) ಮತ್ತು 120B ಅಡಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ರಾಮ್ ಸಿಂಗ್ ಅವರು ಬಾನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಚಾನೆಲ್ ಅನ್ನು ಟೀಕಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.

ಝೀ ನ್ಯೂಸ್‌ನ ನಿರೂಪಕ ರೋಹಿತ್ ರಂಜನ್ ತಮ್ಮ ಶೋನಲ್ಲಿ ತಮ್ಮ ವಯನಾಡ್ ಕಚೇರಿಯಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ನಡೆಸಿದ ದಾಂಧಲೆಯ ಕುರಿತು ಗಾಂಧಿಯವರ ಹೇಳಿಕೆಯನ್ನು ಪ್ರಸಾರ ಮಾಡಿ, ಅದು ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಭೀಕರ ಹತ್ಯೆ ವಿಚಾರದಲ್ಲಿ ನೀಡಿದ ಹೇಳಿಕೆ ಎಂದು ತೋರುವಂತೆ ತಿರುಚಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ರಾಥೋಡ್, ಮೇಜರ್ ಸುರೇಂದ್ರ ಪೂನಿಯಾ (ನಿವೃತ್ತ) ಮತ್ತು ಕಮಲೇಶ್ ಸೈನಿ ಜೊತೆಗೆ ಮಾಧ್ಯಮವೂ ಇದರಲ್ಲಿ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ. 

"ಗಾಂಧಿ ಹೇಳಿರುವುದು ವಯನಾಡಿನ ಯುವಕರಿಗಾಗಿಯೇ ಹೊರತು ಕನ್ಹಯ್ಯಾ ಲಾಲ್ ಹಂತಕರ ಕುರಿತಲ್ಲ ಎಂದು ಟಿವಿ ಚಾನೆಲ್‌ನ ಆಂಕರ್ ಮತ್ತು ಪ್ರವರ್ತಕರಿಗೆ ಸ್ಪಷ್ಟವಾಗಿ ತಿಳಿದಿತ್ತು" ಎಂದು ದೂರುದಾರರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಆದರೆ ಚಾನೆಲ್ ಕ್ಷಮೆಯಾಚಿಸಿದ್ದು, "ನಿನ್ನೆ ನಮ್ಮ ಡಿಎನ್‌ಎ ಶೋನಲ್ಲಿ ರಾಹುಲ್ ಗಾಂಧಿ ಹೇಳಿಕೆಯನ್ನು ಉದಯ್‌ಪುರ ಘಟನೆಗೆ ತಳುಕು ಹಾಕುವ ಮೂಲಕ, ತಪ್ಪು ಸಂದರ್ಭದಲ್ಲಿ ವೀಡಿಯೊವನ್ನು ತೆಗೆದುಕೊಳ್ಳಲಾಗಿದೆ, ಇದು ಮಾನವ ಸಹಜ ದೋಷವಾಗಿದ್ದು, ನಮ್ಮ ತಂಡ ಕ್ಷಮೆಯಾಚಿಸುತ್ತದೆ" ಎಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News