ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳವು

Update: 2022-07-03 14:30 GMT

ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸಾವಿರಾರು ರೂ. ಮೌಲ್ಯದ ನಗನಗದು ಇದ್ದ ಬ್ಯಾಗ್‌ನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಜರಾತಿನ ಸ್ನೇಹ(೪೦) ಎಂಬವರು ತನ್ನ ಕುಟುಂಬದವರೊಂದಿಗೆ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಮೇ 9ರಂದು ನಸುಕಿನ ವೇಳೆ ರೈಲು, ಉಡುಪಿ ನಿಲ್ದಾಣ ಬಿಡುವಾಗ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಬಂದು  ಸ್ನೇಹ ಅವರ ಕೈಯಲ್ಲಿದ್ದ ವ್ಯಾನಿಟಿ  ಬ್ಯಾಗನ್ನು  ಕಿತ್ತುಕೊಂಡು  ಓಡಿಹೋಗಿದ್ದನು.

ಬ್ಯಾಗಿನಲ್ಲಿ ೨೫,೦೦೦ ರೂ. ಮೌಲ್ಯದ ಚಿನ್ನದ ರಿಂಗ್, ೨೦,೦೦೦ರೂ. ಮೌಲ್ಯದ ಚಿನ್ನದ ಕಿವಿ ಓಲೆ ಹಾಗೂ ೮೦೦೦ರೂ. ನಗದು ಇತ್ತೆನ್ನಲಾಗಿದೆ. ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ  ದಾಖಲಾಗಿದ್ದು, ಸ್ಥಳದ ಆಧಾರದ ಮೇರೆಗೆ ನ್ಯಾಯಾಲಯದ ಆದೇಶದಂತೆ ಪ್ರಕರಣವನ್ನು ಉಡುಪಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News