ಬ್ರಿಟನ್‌ನ ಹಿರಿಯ ರಂಗಭೂಮಿ ನಿರ್ದೇಶಕ, ಮಹಾ ನಾಟಕಕಾರ ಪೀಟರ್‌ಬ್ರೂಕ್ ಇನ್ನಿಲ್ಲ

Update: 2022-07-03 17:57 GMT
Photo: twitter

ಲಂಡನ್, ಜು.3:  ಬ್ರಿಟನ್‌ನ ಹಿರಿಯ ರಂಗಭೂಮಿ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಪೀಟರ್ ಬ್ರೂಕ್ ಶನಿವಾರ ಪ್ಯಾರಿಸ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.   ಮಹಾಕಾವ್ಯ ಮಹಾಭಾರತವನ್ನು ವಿಶ್ವ ರಂಗಭೂಮಿಗೆ ಪರಿಚಯಿಸುವ ಮೂಲಕ ಪೀಟರ್ ಭಾರತದಲ್ಲಿಯೂ ಗಮನಸೆಳೆದಿದ್ದರು.

ಬ್ರಿಟನ್‌ನ ಖ್ಯಾತ ರಂಗಭವನ ಬ್ರಾಡ್‌ವೇನ  ಇರ್ಮಾ ಲಾ ಡೌಸ್, ಮರಾಟ್/ಸ್ಯಾಡೆ ನಾಟಕಗಳಿಂದ ಹಿಡಿದು   ರಂಗಭೂಮಿಯಲ್ಲಿ ಹೊಸ ಪ್ರಯೋಗಗಳನ್ನು ನಡೆಸಿದ್ದರು.
ಫ್ರೆಂಚ್ ಭಾಷೆಯಲ್ಲಿ ನಿರ್ಮಾಣವಾದ ಮಹಾಭಾರತ ನಾಟಕದ ಮೂಲಕ ಪೀಟರ್‌ಬ್ರೂಕ್ ಭಾರತದಲ್ಲಿಯೂ ಹೆಸರುವಾಸಿಯಾಗಿದ್ದರು. 9 ತಾಸುಗಳ ದೀರ್ಘ ಅವಧಿಯ ಈ ನಾಟಕವು 1995ರಲ್ಲಿ ಚೊಚ್ಚಲ ಪ್ರದರ್ಶನವನ್ನು ಕಂಡಿತ್ತು. 1987ರಲ್ಲಿ ಅವರು ಅದನ್ನು ಇಂಗ್ಲೀಷ್‌ಗೆ ಭಾಷಾಂತರಿಸಿದ್ದರು.

ರಂಗಭೂಮಿಗೆ ಪೀಟರ್‌ಬ್ರೂಕ್ ಅವರ ಕೊಡುಗೆಯನ್ನು ಪರಿಗಣಿಸಿ ಭಾರತ ಸರಕಾರವು ಅವರಿಗೆ ಕಳೆದ ವರ್ಷ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿತ್ತು. ಲಂಡನ್‌ನಲ್ಲಿ ಜನಿಸಿದ ಬ್ರೂಕ್ ಅವರು ಸ್ಟಾಟ್‌ಫೋರ್ಡ್‌ನ ರಾಯಲ್ ಶೇಕ್ಸ್‌ಪಿಯರ್ ನಾಟಕ ಸಂಸ್ಥೆಯಲ್ಲಿ ನಿರ್ದೇಶಕರಾಗಿ, ರಂಗಕರ್ಮಿಯಾಗಿ ಅವರು 30 ವರ್ಷಗಳಿಗೂ ಅಧಿಕ ಸಮಯ ಕೆಲಸ ಮಾಡಿದ್ದರು. ಹಲವಾರು ಸಂಗೀತ ಪ್ರದಾನ ನಾಟಕಗಳನ್ನು ಕೂಡಾ ಬ್ರೂಕ್ ನಿರ್ದೇಶಿಸಿದ್ದರು.

1970ರಲ್ಲಿ ಬ್ರೂಕ್ ನಿರ್ದೇಶನದ ಶೇಕ್ಸ್‌ಪಿಯರ್ ವಿರಚಿತ ನಾಯಕ ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್ ಅವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟ್ತಿು. ಶೇಕ್ಸ್‌ಪಿಯರ್ ವಿರಚಿತ ನಾಟಕಗಳ ಜೊತೆ ಜಾನ್ ಗಿಲ್‌ಗುಡ್, ಲಾರೆನ್ಸ್ ಒಲಿವರ್, ಪೌಲ್ ಸ್ಕಾಟ್‌ಫೀಲ್ಡ್, ಆ್ಯಡ್ರಿಯಾನನ್ ಲೆಸ್ಟರ್ ಅವರ ನಾಟಕಗಳನ್ನು ಕೂಡಾ ರಂಗಭೂಮಿಗೆ ತಂದಿದ್ದರು. ಬ್ರಿಟನ್‌ನ ಖ್ಯಾತ ನಾಟಕ ಸಾಹಿತಿ  ನಟಾಶಾ ಪ್ಯಾರಿ ಅವರನ್ನು ಬ್ರೂಕ್ ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News