ಅಮೆರಿಕ: ಸ್ವಾತಂತ್ರ್ಯ ದಿನಾಚರಣೆ ಪರೇಡ್ ಮೇಲೆ ಗುಂಡಿನ ದಾಳಿ; 6 ಮಂದಿ ಮೃತ್ಯು

Update: 2022-07-05 16:58 GMT
photo : twitter

ವಾಷಿಂಗ್ಟನ್, ಜು.5: ಚಿಕಾಗೋದ ಉಪನಗರ ಇಲ್ಲಿನೋಯಿಸ್ನಲ್ಲಿ ಸೋಮವಾರ ನಡೆದ ಅಮೆರಿಕ ಸ್ವಾತಂತ್ರ್ಯ ದಿನಾಚರಣೆ ಪರೇಡ್ ಮೇಲೆ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗುಂಡಿನ ದಾಳಿಯಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಗಿದ್ದು ಭಾಗವಹಿಸಿದ್ದ ಜನರು ಆತಂಕಗೊಂಡು ದಿಕ್ಕಾಪಾಲಾಗಿ ಓಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ‌

ಮನೆಯ ಮೇಲ್ಛಾವಣಿಯಲ್ಲಿ ನಿಂತಿದ್ದ ಬಂದೂಕುಧಾರಿ, ಸ್ವಾತಂತ್ರ್ಯ ದಿನಾಚರಣೆಯ ಪರೇಡ್ನಲ್ಲಿ ಭಾಗವಹಿಸಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಜನ ಗೊಂದಲದಿಂದ ಓಡುತ್ತಿದ್ದಾಗ ಈತನೂ ಓಡಿ ತಪ್ಪಿಸಿಕೊಂಡಿದ್ದ. ಆದರೆ ಪ್ರದೇಶದಲ್ಲಿ ಮನೆಮನೆ ಶೋಧ ನಡೆಸಿ ಸೋಮವಾರ ಸಂಜೆ ವೇಳೆಗೆ 22 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಅಮೆರಿಕದ ಸಂಭ್ರಮಾಚರಣೆಯನ್ನು ಅಮೆರಿಕದ ವಿಶಿಷ್ಟ ಸಾಂಕ್ರಾಮಿಕ ಭಂಗಗೊಳಿಸಿದೆ. ಅಮೆರಿಕದಲ್ಲಿ ಗುಂಡಿನ ದಾಳಿ ಎಂಬುದು ಈಗ ವಾರದ ಸಂಪ್ರದಾಯವಾಗಿಬಿಟ್ಟಿದೆ . ಜುಲೈ 4ರ ಸಂಭ್ರಮ ವರ್ಷಕ್ಕೆ ಒಂದು ಬಾರಿ ಬರುವಂತದ್ದು. ಆದರೆ ಅಮೆರಿಕದಲ್ಲಿ ಗುಂಡಿನ ದಾಳಿ ವಾರದ ಸಂಪ್ರದಾಯವಾಗಿಬಿಟ್ಟಿದೆ. ಇದು ಅತ್ಯಂತದ ಆತಂಕಕಾರಿ ವಿಷಯವಾಗಿದೆ ಎಂದು ಇಲ್ಲಿನಾಯಿಸ್ ಗವರ್ನರ್ ಜೆ.ಬಿ ಪ್ರಿಝರ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News