ಬ್ರಿಟನ್: ಬೋರಿಸ್ ಜಾನ್ಸನ್‌ ಸರಕಾರದ ಮತ್ತೆ ಮೂವರು ಸಚಿವರ ರಾಜೀನಾಮೆ

Update: 2022-07-06 17:19 GMT
Photo:twitter

ಲಂಡನ್: ಆರೋಗ್ಯ ಹಾಗೂ  ಹಣಕಾಸು ಮಂತ್ರಿಗಳ ನಿರ್ಗಮನದ ನಂತರ ಬ್ರಿಟನ್ ಸರಕಾರಕ್ಕೆ ಇನ್ನೂ ಇಬ್ಬರು ಸಚಿವರು ಬುಧವಾರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪ್ರಧಾನಿ ಬೋರಿಸ್ ಜಾನ್ಸನ್ ಮೇಲೆ ಮತ್ತಷ್ಟು ಒತ್ತಡವನ್ನು ಹೇರಿದ್ದಾರೆ

"ನನಗೆ ರಾಜೀನಾಮೆಯನ್ನು ನೀಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ" ಎಂದು ಮಕ್ಕಳು ಹಾಗೂ  ಕುಟುಂಬಗಳ ಸಚಿವರಾದ ವಿಲ್ ಕ್ವಿನ್ಸ್ ಅವರು ಹೇಳಿದ್ದಾರೆ.

 ಸರಕಾರದಲ್ಲಿ "ನಂಬಿಕೆ" ಕಳೆದುಕೊಂಡ ಕಾರಣ ನಾನು ಸಚಿವ ಸ್ಥಾನ ತ್ಯಜಿಸುತ್ತಿರುವೆ ಎಂದು ಜೂನಿಯರ್ ಟ್ರ್ಯಾನ್ಸ್ ಪೋರ್ಟ್ ಸಚಿವೆ ಲಾರಾ ಟ್ರಾಟ್  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News