ಉಡುಪಿ ಜಿಲ್ಲಾಧಿಕಾರಿ ಆದೇಶ ಪ್ರತಿಯಲ್ಲಿ ಕ್ಯೂಆರ್ ಕೋಡ್ ಅಳವಡಿಕೆ!
Update: 2022-07-06 20:31 IST
ಉಡುಪಿ : ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸುವ ಜಿಲ್ಲಾಧಿಕಾರಿಗಳ ಆದೇಶ ಪ್ರತಿಯನ್ನು ಕಿಡಿಗೇಡಿಗಳು ನಕಲಿ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಆದೇಶ ಪ್ರತಿಗೆ ಕ್ಯೂಆರ್ ಕೋಡ್ ಅಳವಡಿಸಲಾಗಿದೆ.
ಆದೇಶ ಪ್ರತಿಯಲ್ಲಿರುವ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದಾಗ ಮೂಲಪ್ರತಿಯನ್ನು ಕಾಣಬಹುದಾಗಿದೆ. ಇನ್ನು ಮುಂದೆ ಜಿಲ್ಲಾಧಿಕಾರಿಗಳ ಆದೇಶ ಪ್ರತಿಯಲ್ಲಿ ಈ ಕ್ಯೂರ್‌ಕೋಡ್ ಇಲ್ಲದಿದ್ದರೆ ಅದು ನಕಲಿ ಎಂಬುದೆಂದು ಪರಿಗಣಿಸಬಹುದಾಗಿದೆ.