ಭಟ್ಕಳ: ಜು.31ರಂದು 'ರಾಬಿತಾ ಅವಾರ್ಡ್' ಪ್ರಶಸ್ತಿ ಪ್ರದಾನ ಸಮಾರಂಭ

Update: 2022-07-07 08:27 GMT

ಭಟ್ಕಳ, ಜು.7: ಇಲ್ಲಿನ ಅನಿವಾಸಿ ಭಾರತಿಯ ಸಂಸ್ಥೆ ರಾಬಿತಾ ಸೂಸೈಟಿಯು ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡುವ 'ರಾಬಿತಾ ಅವಾರ್ಡ್' ಪ್ರಶಸ್ತಿ ಪ್ರದಾನ ಸಮಾರಂಭವು ಜು.31ರಂದು ನಗರದ ನವಾಯತ್ ಕಾಲನಿಯಲ್ಲಿರುವ ವೈ.ಎಂ.ಎಸ್.ಎ. ತಾಲೂಕಾ ಕ್ರಿಡಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಅತಿಕುರ್ರಹ್ಮಾನ್ ಮುನೀರಿ ತಿಳಿಸಿದ್ದಾರೆ.

ಅವರು ರಾಬಿತಾ ಸೂಸೈಟಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಮಾಹಿತಿ ನೀಡಿದರು. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ರಾಬಿತಾ ಪ್ರಶಸ್ತಿ ಸಮಾರಂಭ ಆಯೋಜಿಸಲು ಸಾಧ್ಯವಾಗಲಿಲ್ಲ. ಈ ಬಾರಿ 2019, 2020 ಮತ್ತು 2021ನೇ ಸಾಲಿನಲ್ಲಿ ಎಸೆಸೆಲ್ಸಿ, ದ್ವಿತೀಯ ಪಿಯುಸಿ ಮತ್ತು ಪದವಿಯ ಟಾಪರ್‌ಗಳಿಗೆ ಮೊದಲಿನಂತೆಯೇ ರಾಬಿತಾ ಅವಾರ್ಡ್ ನೀಡಲಾಗುವುದು ಎಂದರು.

ಮೆಟ್ರಿಕ್ಯುಲೇಶನ್, ದ್ವಿತೀಯ ಪಿಯುಸಿ ಮತ್ತು ಪದವಿಯಲ್ಲಿ ಶೇ.85 ಅಥವಾ ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾದವರು ತಮ್ಮ ಫಲಿತಾಂಶದ ಪ್ರತಿಯನ್ನು ಜುಲೈ 15ರೊಳಗೆ ರಾಬಿತಾ ಕಚೇರಿಗೆ ಅಥವಾ ಕೆಳಗೆ ನೀಡಿರುವ ಸಂಚಾಲಕರ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾಡಬೇಕು.

ಈ ಬಾರಿ ವಿಶೇಷ ವಿಭಾಗದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಅಸಾಧಾರಣ ಯಶಸ್ಸು ಗಳಿಸಿದವರಿಗೂ ರಾಬಿತಾ ಪ್ರಶಸ್ತಿ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ರಾಬಿತಾ ಪ್ರಶಸ್ತಿ ಸಮಿತಿ ಕೈಗೊಳ್ಳಲಿದೆ ಎಂದವರು ವಿವರಿಸಿದರು.

ಈ ಸಂದರ್ಭ ರಾಬಿತಾ ಸೊಸೈಟಿಯ ಅಧ್ಯಕ್ಷ ಉಮರ್ ಫಾರೂಕ್ ಮಿಸ್ಬಾ, ಲೆಕ್ಕ ಪರಿಶೋಧಕ ಆಫಾಖ್ ನಾಯ್ತೆ, ಮಾಜಿ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ರುಕ್ನುದ್ದೀನ್, ಸದಸ್ಯರಾದ ಅಬ್ದುಲ್ ಸಮಿ ಕೋಲಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ರಾಬಿತಾ ಶೈಕ್ಷಣಿಕ ಪ್ರಶಸ್ತಿಗಳ ಸಂಚಾಲಕ ಜಿಲಾನಿ ಮೊಹ್ತೆಶಮ್, ಮೊಬೈಲ್ ಸಂಖ್ಯೆ : (+971505584203), ಉಪ ಸಂಚಾಲಕ ಯಾಸಿರ್ ಖಾಸಿಮ್ಜಿ (+971506251833) ಮಿಸ್ಬಾಹ್ ಮುಹಮ್ಮದ್ ಅಶ್ರಫ್ (971507098301) ರನ್ನು ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News