×
Ad

ನನ್ನ ಆತ್ಮೀಯ ಸ್ನೇಹಿತ ಶಿಂಝೊ ಅಬೆ ಮೇಲಿನ ದಾಳಿಯಿಂದ ತೀವ್ರ ದುಃಖವಾಗಿದೆ: ಪ್ರಧಾನಿ ಮೋದಿ

Update: 2022-07-08 11:50 IST
Photo:PTI

ಹೊಸದಿಲ್ಲಿ: ನನ್ನ ಆತ್ಮೀಯ ಸ್ನೇಹಿತ ಶಿಂಝೋ ಅಬೆ ಮೇಲಿನ ದಾಳಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ನಮ್ಮ ಆಲೋಚನೆಗಳು ಹಾಗೂ  ಪ್ರಾರ್ಥನೆಗಳು ಅಬೆ, ಅವರ ಕುಟುಂಬ ಹಾಗೂ ಜಪಾನ್ ಜನರೊಂದಿಗೆ ಇವೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

"ಇಂತಹ ಅನಾಗರಿಕ ಕೃತ್ಯವನ್ನು ಸಹಿಸಲಾಗುವುದಿಲ್ಲ" ಎಂದು ಜಪಾನ್ ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಹಿರೋಕಾಜು ಮಾಟ್ಸುನೊ ಸುದ್ದಿಗಾರರಿಗೆ ತಿಳಿಸಿದರು,

ಶುಕ್ರವಾರ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಝೊ  ಅಬೆ ಭಾಷಣ ಮಾಡುತ್ತಿದ್ದಾಗ ಅವರ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮನೆಯಲ್ಲಿ ನಿರ್ಮಿತ ಬಂದೂಕಿನಿಂದ  ಎರಡು ಬಾರಿ ಗುಂಡು ಹಾರಿಸಿದ್ದಾನೆ  ಎಂದು ವರದಿಯಾಗಿದೆ. ಅಬೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಜೀವಂತವಿರುವ ಲಕ್ಷಣವನ್ನು ತೋರಿಸಿಲ್ಲ ಎಂದು ವರದಿಯಾಗಿದೆ.

ಶಂಕಿತ ಶೂಟರ್ ನನ್ನು ನಾರಾ ನಿವಾಸಿ ತೆತ್ಸುಯಾ ಯಮಗಾಮಿ ಎಂದು ಪೊಲೀಸರು ಗುರುತಿಸಿದ್ದಾರೆ. ಈತ  ಜಪಾನ್‌ನ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದ ಎಂದು ವರದಿಗಳು ಹೇಳಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News