×
Ad

ಉಡುಪಿ; ಜುಲೈ 13ರಂದು ಮಿನಿ ಉದ್ಯೋಗ ಮೇಳ, ನೇರ ಸಂದರ್ಶನ

Update: 2022-07-08 20:50 IST

ಉಡುಪಿ, ಜು.೮: ಬಜಾಜ್ ಅಲಿಯಾನ್ಸ್ ಇನ್ಸೂರೆನ್ಸ್ ಪ್ರೈ.ಲಿ, ಇಂಪುಲ್ಸ್ ಕಂಪನಿ ಪ್ರೈ.ಲಿ, ಬಜ್‌ವರ್ಕ್ಸ್ ಅಡ್ವಾನ್ಸಿಂಗ್ ಹ್ಯೂಮನ್‌ಕ್ಯಾಪಿಟಲ್ ಪ್ರೈ.ಲಿ, ಶ್ರೀಸಾಯಿ ಎಂಟರ್‌ಪ್ರೈಸಸ್ ಪ್ರೈ.ಲಿ ಮತ್ತು ಅಮೆಜಾನ್ ಕಂಪೆನಿಗಳ ವತಿಯಿಂದ ಜುಲೈ ೧೩ರಂದು ಬೆಳಗ್ಗೆ ೧೦:೩೦ರಿಂದ ಅಪರಾಹ್ನ ೩:೦೦ರವರೆಗೆ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಎಸೆಸೆಲ್ಸಿ, ಪಿಯುಸಿ, ಡಿಗ್ರಿ, ಬಿಸಿಎ, ಬಿಸಿಎಸ್, ಬಿಕಾಂ, ಬಿಎಸ್ಸಿ, ಎಮ್‌ಎಸ್ಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್,  ಡಿಪ್ಲೋಮಾ ಇನ್ ಮೆಕ್ಯಾನಿಕಲ್, ಬಿ.ಇ ಇಂಜಿನಿಯರಿಂಗ್, ಡಿ.ಫಾರ್ಮ್, ಬಿ.ಫಾರ್ಮ್ ಹಾಗೂ ಇತರೆ ಪದವಿ  ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ- ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್‌ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ. ಮೊ.ನಂ:೮೧೯೭೪೪೦೧೫೫,  ೮೧೦೫೬೧೮೨೯೧, ೯೯೦೧೪೭೨೭೧೦ ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News