×
Ad

ಉಡುಪಿ; ಜು.9ರಂದು ‘ಫಿಸಿಯೋ ಸೆಂಟರ್ ಶುಭಾರಂಭ

Update: 2022-07-08 20:54 IST

ಉಡುಪಿ : ಗಿರಿಜಾ ಗ್ರೂಪ್ ಆಫ್ ಕನ್‌ಸರ್ನ್ಸ್ ವತಿಯಿಂದ ಉಡುಪಿ ನಗರದ ಮಿತ್ರಾ ಆಸ್ಪತ್ರೆ ಬಳಿಯ ವಾದಿರಾಜ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಿಸಲಾದ ಫಿಸಿಯೋ ಥೆರಪಿ ಮತ್ತು ಪುನರ್ವಸತಿ ಕೇಂದ್ರ ‘ಫಿಸಿಯೋ ಸೆಂಟರ್’ನ ಉದ್ಘಾಟನೆಯು ಜು.9ರಂದು ಸಂಜೆ 5 ಗಂಟೆಗೆ ನಡೆಯಲಿದೆ.‌

ಈ ಫಿಸಿಯೋ ಸೆಂಟರ್‌ನಲ್ಲಿ ಸಂಧಿವಾತ, ದೀರ್ಘಕಾಲದ ಸಂಧಿಗಳ ನೋವು, ನರ ಹಾಗೂ ಸ್ನಾಯುಗಳಲ್ಲಿ ನೋವು, ಹೃದ್ರೋಗ, ಮೂಳೆ ಮುರಿತದ ಪುನರ್ವಸತಿ, ಸಂಧಿಗಳ ಮರುಜೋಡಣೆಯ ಪುನರ್ವಸತಿ, ಪಾರ್ಕಿನ್ಸನ್ ಸಿಂಡ್ರೋಮ್, ಆಸ್ಟಿಯೋಪೊರೋಸಿಸ್, ಪಾಶ್ರ್ವವಾಯು ಪುನರ್ವಸತಿ, ಅಲ್ಟ್ರಾ ಸೌಂಡ್, ವಿದ್ಯುತ್ ಪ್ರಚೋದನೆ, ಯಾಂತ್ರಿಕ ಎಳೆತ, ತೇವಾಂಶದ ಶಖ ಚಿಕಿತ್ಸೆ, ಕ್ರೈ ಥೆರಪಿ, ಬ್ಯಾಲೆನ್ಸ್ ಬೋರ್ಡ್, ಸ್ಟೆಪ್ಪರ್, ಥೆರಾಬ್ಯಾಂಡ್ ವ್ಯಾಯಾಮಗಳನ್ನು ನೀಡಲಾಗುವುದು.

ಸೀನಿಯರ್ ಕನ್ಸಲ್ಟೆಂಟ್ ಫಿಸಿಯೋಥೆರಪಿಸ್ಟ್ ಡಾ.ದೀಪಾ ನಾಯಕ್ ಮತ್ತು ತಂಡ ಇಲ್ಲಿ ಕಾರ್ಯನಿರ್ವಹಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೬೮೬೨೯೧೬೮೫ನ್ನು ಸಂಪರ್ಕಿಸಬಹುದು ಎಂದು ಗಿರಿಜಾ ಗ್ರೂಪ್‌ನ ರವೀಂದ್ರ ಕೆ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News