ಜು.10ರಂದು ವೈದ್ಯಸಿರಿ ಪ್ರಶಸ್ತಿ ಪ್ರದಾನ ಸಮಾರಂಭ
ಉಡುಪಿ: ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ವೈದ್ಯರ ದಿನಾಚರಣೆ ಪ್ರಯುಕ್ತ ಕುಟುಂಬೋತ್ಸವ ಹಾಗೂ ವೈದ್ಯಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು.10ರಂದು ಅಪರಾಹ್ನ ೩ಗಂಟೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಸಚಿವ ಸುನೀಲ್ ಕುಮಾರ್ ಉದ್ಘಾಟಿಸಲಿರುವರು. ನ್ಯಾಯವಾದಿ ವಿವೇಕಾನಂದ ಪನಿಯಾಲ ವೈದ್ಯರಾದ ಡಾ.ಜಿ.ಎಂ.ಕಂಠಿ, ಡಾ. ಭರತೇಶ್, ಡಾ.ಸುರೇಶ್ ಶೆಟ್ಟಿ ಅವರಿಗೆ ವೈದ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಜಿಲ್ಲಾಧ್ಯಕ್ಷ ಡಾ.ಎನ್.ಟಿ.ಅಂಚನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ನಟ ಅರವಿಂದ ಬೋಳಾರ್, ಫೆಡರೇಶನ್ ರಾಜ್ಯ ಕಾರ್ಯದರ್ಶಿ ಡಾ.ಸೋಮಶೇಖರ್ ಹುದ್ದಾರ್, ಗಿರಿಜ ಸರ್ಜಿಕಲ್ಸ್ ಮಾಲಕ ರವೀಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿರುವರು. ಈ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆ, ರಸಮಂಜರಿ ಕಾರ್ಯಕ್ರಮ ನಡೆಯಿತು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ.ಸತೀಶ್ ರಾವ್, ಕೋಶಾಧಿಕಾರಿ ಡಾ.ಶಿವಶಂಕರ್ ಕೆ., ಉಪಾಧ್ಯಕ್ಷ ಡಾ.ಯು.ಕೆ.ಶೆಟ್ಟಿ ಉಪಸ್ಥಿತರಿದ್ದರು.