×
Ad

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 24 ಕೋಟಿ ರೂ. ನಷ್ಟ: ಜಿಲ್ಲಾಧಿಕಾರಿ ಕೂರ್ಮಾರಾವ್

Update: 2022-07-08 21:44 IST

ಉಡುಪಿ: ಜಿಲ್ಲೆಯಲ್ಲಿ  ಜುಲೈ 1ರಿಂದ ಇದುವರೆಗಿನ ವಾಡಿಕೆ ಮಳೆ ೩೬೭ ಮಿ.ಮಿ. ಆಗಿದ್ದು, ಈ ಬಾರಿ ೮೩೨ ಮಿ.ಮಿ. ಮಳೆ ಬಿದ್ದಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯದ ಲೆಕ್ಕಾಚಾರದಂತೆ ೨೫೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಗೆ ಹಾನಿಯಾಗಿದೆ. ನಗರ ಪ್ರದೇಶದಲ್ಲಿ ೯೩ ಕಿ.ಮೀ ಹಾಗೂ ಗ್ರಾಮೀಣ ಭಾಗದ ೬೮೫ ಕಿ.ಮೀ.ನಷ್ಟು  ರಸ್ತೆ,  ಜಿಲ್ಲಾ ಹಾಗೂ ರಾಜ್ಯಮಟ್ಟದ ೭.೫ ಕಿಮೀ ಮುಖ್ಯ ರಸ್ತೆ ಹಾಳಾಗಿವೆ. ಇದುವರೆಗೆ ಜಿಲ್ಲೆಯ ೧೩ ಸೇತುವೆಗಳು ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ  ೧೫೧೫ ವಿದ್ಯುಚ್ಛಕ್ತಿ ಕಂಬಗಳು ಬಿದ್ದುಹೋಗಿವೆ, ೪೭ ಕಿ.ಮೀ.ಉದ್ದದ ವಿದ್ಯುತ್ ತಂತಿಗಳು ಹಾಳಾಗಿದ್ದು, ೬೪ ಮನೆಗಳಿಗೆ ಭಾಗಶಃ  ಹಾನಿಯಾಗಿದೆ.

ಹೀಗಾಗಿ ಜಿಲ್ಲೆಯಲ್ಲಿ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಈವರೆಗೆ ಒಟ್ಟು  ಅಂದಾಜು ೨೪.೭೩ ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇನ್ನೂ ಕೂಡ ನಿರಂತರವಾಗಿ ಮಳೆ ಮುಂದುವರೆದಿದ್ದು,  ನಷ್ಟದ ನಿಖರ ಮೊತ್ತ ಮೌಲ್ಯಮಾಪನ ಮಾಡಲು ಅಸಾಧ್ಯವಾಗಿದ್ದು,  ನಷ್ಟದ ಪ್ರಮಾಣ ಇನ್ನೂ ಹೆಚ್ಹುವ ಸಾಧ್ಯತೆಗಳಿವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News