×
Ad

​ಉಡುಪಿ ಜಿಲ್ಲೆಯಾದ್ಯಂತ 22 ಮನೆಗಳಿಗೆ ಹಾನಿ: 20 ಲಕ್ಷ ರೂ. ನಷ್ಟ

Update: 2022-07-09 20:51 IST

ಉಡುಪಿ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಗಾಳಿಮಳೆಯಿಂದ ಜಿಲ್ಲೆಯ ಒಟ್ಟು ೨೨ ಮನೆಗಳಿಗೆ ಹಾನಿಯಾ ಗಿದ್ದು, ಸುಮಾರು ೨೦.೭೫ಲಕ್ಷ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಭಾರೀ ಮಳೆಯಿಂದ ಬೈಂದೂರು ತಾಲೂಕಿನ ನಾವುಂದದ ಯೋಗೀಶ್ ಹಾಗೂ ಬಡಾಕೆರೆಯ ಫಾತಿಮಾ ಎಂಬವರ ಮನೆಗಳು ಸಂಪೂರ್ಣ ಹಾನಿ ಯಾಗಿದ್ದು, ಒಟ್ಟು ಎಂಟು ಲಕ್ಷ ರೂ. ನಷ್ಟವಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಬ್ರಹ್ಮಾವರ ತಾಲೂಕಿನ ಕಾರ್ಕಡ, ಕಾರ್ಕಳ ತಾಲೂಕಿನ ಇರ್ವತ್ತೂರು, ಕುಂದಾಪುರ ತಾಲೂಕಿನ ಶಂಕರನಾರಾಯಣ ದಲ್ಲಿ ನಾಲ್ಕು, ಕುಂದಾಪುರ, ಹಂಗಳೂರು ಎರಡು, ಆಲೂರು, ರಟ್ಟಾಡಿ, ಅಂಪಾರು, ಚಿತ್ತೂರು, ಯಡ್ಯಾಡಿ ಮತ್ಯಾಡಿ, ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ ೨ ಹಾಗೂ ಬೈಂದೂರು ತಾಲೂಕಿನ ಕಿರಿಮಂಜೇಶ್ವರದಲ್ಲಿ ಎರಡು ಹಾಗೂ ಶಿರೂರಿನಲ್ಲಿ ಎರಡು ಮನೆ ಗಳಿಗೆ ಹಾನಿಯಾಗಿದ್ದು, ಇದರಿಂದ ಒಟ್ಟು ೧೨.೭೫ಲಕ್ಷ ರೂ. ನಷ್ಟ ಉಂಟಾಗಿದೆ.

ಕುಂದಾಪುರ ತಾಲೂಕಿನ ಶಂಕರನಾರಾಯಣ ಜಲಜಮ್ಮ ಎಂಬವರ ಕೃಷಿ ಬೆಳೆ ಹಾಗೂ ಬೈಂದೂರು ತಾಲೂಕಿನ ಶಿರೂರಿನ ಮಂಜುನಾಥ ಮೇಸ್ತ ಎಂಬ ವರ ಭತ್ತದ ಕೃಷಿ ಬೆಳೆ ಹಾನಿಯಾಗಿ ೪೦,೦೦೦ರೂ. ನಷ್ಟ ಉಂಟಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ೧೨೨.೯ಮಿ.ಮೀ. ಮಳೆಯಾಗಿದ್ದು, ಉಡುಪಿ-೧೨೧.೧ಮಿ.ಮೀ., ಬ್ರಹ್ಮಾವರ-೧೨೫.೦ಮಿ.ಮೀ., ಕಾಪು- ೧೩೯.೫ಮಿ.ಮೀ., ಕುಂದಾಪುರ- ೧೨೭.೬ಮಿ.ಮೀ., ಬೈಂದೂರು-  ೯೬.೧ಮಿ.ಮೀ., ಕಾರ್ಕಳ-೧೩೭.೮ಮಿ.ಮೀ., ಹೆಬ್ರಿ-೧೬೧.೦ಮಿ.ಮೀ. ಮಳೆ ಯಾಗಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News