ಶರಫುಲ್‌ ಉಲಮಾ ಅಬ್ಬಾಸ್ ಉಸ್ತಾದ್ 3ನೇ ಆಂಡ್ ನೇರ್ಚೆ, ನೂತನ ಕಮಿಟಿ‌ ರಚನೆ‌

Update: 2022-07-10 16:35 GMT

ಮಂಜನಾಡಿ : ಅಲ್‌ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥಾಪಕ ಶರಫುಲ್‌ ಉಲಮಾ ಅಬ್ಬಾಸ್ ಉಸ್ತಾದ್ ಅವರ ಮೂರನೇ ಆಂಡ್ ನೇರ್ಚೆ ಹಾಗೂ ನೂತನ ಕಮಿಟಿ‌ ರಚನೆ ಮದೀನಾ ಮುನವ್ವರದಲ್ಲಿ ಶನಿವಾರ ರಾತ್ರಿ ನಡೆಯಿತು.

ಅಲ್ ಮದೀನ ರಾಷ್ಟ್ರೀಯ ಕಮಿಟಿ ಜೊತೆ ಕಾರ್ಯದರ್ಶಿ ಮುಸ್ತಫ ಲತೀಫಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. 

ಅಲ್ ಮದೀನ ರಾಷ್ಟ್ರೀಯ ಕಮಿಟಿ ಅಧ್ಯಕ್ಷರಾದ ಎಆರ್ ಅಬ್ದುರಹ್ಮಾನ್ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕೆಸಿಎಫ್ ಜಿದ್ದಾ ಝೋನ್ ಶರಫಿಯ್ಯಾ ಸೆಕ್ಟರ್ ಅಧ್ಯಕ್ಷ  ಅಬ್ದುಲ್ ರಹ್ಮಾನ್ ಬುಖಾರಿ ತಂಙಳ್ ಅವರು ದುವಾ‌ ನೆರೆವೇರಿಸಿದರು.‌

ಕೆಸಿಎಫ್‌ ಅಲ್ ಕಸೀಮ್ ದಾಯಿ ಯಾಕೋಬ್ ಸಖಾಫಿ‌‌ ಮಾತನಾಡಿದರು. ಕೆಸಿಎಫ್‌ ಸೌದಿ ಅರೇಬಿಯಾ ಸಂಘಟನೆ ಇಲಾಖೆ ಅಧ್ಯಕ್ಷರಾದ ರಶೀದ್ ಸಖಾಫಿ ಅನುಸ್ಮರಣಾ ಭಾಷಣ‌ ಮಾಡಿದರು.

ಅಲ್ ಮದೀನ ರಾಷ್ಟ್ರೀಯ ಕಮಿಟಿ ಕೆಎಸ್‌ಎ ಉಪಾಧ್ಯಕ್ಷ ಸ್ವಾಲಿಹ್ ಬೆಳ್ಳಾರೆ ಅವರ ನೇತೃತ್ವದಲ್ಲಿ ನೂತನ ಕಮಿಟಿ ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಉಮರ್ ಹಾಜಿ ಬಾಳೆಪುಣಿ, ಅಧ್ಯಕ್ಷರಾಗಿ ಉಮರ್ ಫಾರೂಕ್‌ ಉಸ್ತಾದ್ ಎಮ್ಮೆಮಾಡ್, ಉಪಾಧ್ಯಕ್ಷರಾಗಿ ತಾಜುದ್ದೀನ್ ಸುಳ್ಯ, ಉಮರ್ ಕಯ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಕೀಂ ಬೋಳಾರ್, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ನ್ಯಾಷನಲ್, ಅಶ್ರಫ್ ಉಜಿರೆ, ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಕಿನ್ಯಾ, ಖಜಾಂಚಿಯಾಗಿ ಹುಸೈನಾರ್ ಮಾಪಲ್, ಸಲಹೆಗಾರರಾಗಿ ಹಮೀದ್ ಹಾಜಿ ಪಂಜಲ, ಸದಸ್ಯರುಗಳಾಗಿ ಮುಸ್ತಫಾ ಕುಂದಾಪುರ, ಶರೀಫ್ ಕಬಕ, ಜಬ್ಬಾರ್ ಕಾವಲಕಟ್ಟೆ, ಸಿದ್ದೀಕ್ ಕನ್ಯಾನ, ಹಂಝ ಮುಸ್ಲಿಯಾರ್, ಶಹನಾವಾಝ್‌ ಕೊಲ್ಲಂ, ಸಾಹುಲ್ ನ್ಯಾಷನಲ್ ಅವರನ್ನು ಆಯ್ಕೆ ಮಾಡಲಾಯಿತು.

ಅಲ್ ಮದೀನಾ ರಾಷ್ಟ್ರೀಯ ಕಮಿಟಿ ಕಾರ್ಯದರ್ಶಿ ಇಬ್ರಾಹಿಂ ಪಡಿಕಲ್ ಅವರು ನೂತನ ಕಮಿಟಿ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಅಲ್ ಮದೀನ ಆರ್ಗನೈಸರ್ ಹೈದರ್ ನ ಈಮಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News