ಎಐಎಡಿಎಂಕೆ ನಾಯಕತ್ವ ತಿಕ್ಕಾಟ: ಪಳನಿಸ್ವಾಮಿ ಹೊಸ ಬಾಸ್, ಪ್ರತಿಸ್ಪರ್ಧಿ ಪನ್ನೀರ ಸೆಲ್ವಂ ಉಚ್ಚಾಟನೆ

Update: 2022-07-11 08:07 GMT
ಪನ್ನೀರಸೆಲ್ವಂ ಹಾಗೂ  ಪಳನಿಸ್ವಾಮಿ Photo:PTI

ಚೆನ್ನೈ: ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆಯಲ್ಲಿ ನಾಯಕತ್ವಕ್ಕಾಗಿ  ತಿಕ್ಕಾಟ ತಾರಕಕ್ಕೇರಿದ್ದು  ಪ್ರಸ್ತುತ ಉಭಯ ನಾಯಕತ್ವದ ಮಾದರಿಯನ್ನು ಕೊನೆಗೊಳಿಸಿ, ಇಪಿಎಸ್ ಎಂದೂ ಕರೆಯಲ್ಪಡುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಇಂದು ಭಡ್ತಿ ನೀಡಲಾಗಿದೆ.

2,500 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಜನರಲ್ ಕೌನ್ಸಿಲ್ ಪಕ್ಷವನ್ನು ಒಬ್ಬ ಸರ್ವೋಚ್ಚ ನಾಯಕನಾಗಿ ಮುನ್ನಡೆಸಲು ಇಪಿಎಸ್‌ಗೆ ಅಧಿಕಾರ ನೀಡಿತು. ಆದರೆ ಪ್ರತಿಸ್ಪರ್ಧಿ ನಾಯಕ   ಪನ್ನೀರಸೆಲ್ವಂ ಅಥವಾ ಒಪಿಎಸ್ ಅವರನ್ನು "ಪಕ್ಷ ವಿರೋಧಿ" ಚಟುವಟಿಕೆಗಳಿಗಾಗಿ ಉಚ್ಚಾಟಿಸಲಾಯಿತು. ಸೆಲ್ವಂ ಅವರ ಬೆಂಬಲಿಗರಾದ ಆರ್.  ವೈತಿಲಿಂಗಂ ಮತ್ತು ಪಿ.ಎಚ್. ಮನೋಜ್ ಪಾಂಡಿಯನ್ ಅವರನ್ನೂ ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು.

ಪನ್ನೀರ ಸೆಲ್ವಂ  ಡಿಎಂಕೆ ಆಡಳಿತಕ್ಕೆ ಒಲವು ತೋರುತ್ತಿದ್ದಾರೆ ಹಾಗೂ  ಎಐಎಡಿಎಂಕೆಯನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಎಡಪ್ಪಾಡಿ ಪಳನಿಸ್ವಾಮಿ ಹಾಗೂ  ಕೆ.ಪಿ. ಮುನುಸಾಮಿ ಸೇರಿದಂತೆ ಪಕ್ಷದ ಕೆಲವು ಹಿರಿಯ ನಾಯಕರು ಆರೋಪಿಸಿದರು.

ತನ್ನ ಉಚ್ಛಾಟನೆಗೆ ಪ್ರತಿಕ್ರಿಯಿಸಿದ ಓ.ಪನ್ನೀರಸೆಲ್ವಂ ಅವರು " ನಾನು  ಪಕ್ಷದ 1.5 ಕೋಟಿ ಕಾರ್ಯಕರ್ತರಿಂದ ಸಂಯೋಜಕರಾಗಿ ಆಯ್ಕೆಯಾಗಿದ್ದೇನೆ. ಪಳನಿಸ್ವಾಮಿ  ಅಥವಾ ಇನ್ನೊಬ್ಬ ನಾಯಕನಿಗೆ ತನ್ನನ್ನು  ಉಚ್ಚಾಟಿಸುವ ಹಕ್ಕು ಇಲ್ಲ' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News