ಮುಹಮ್ಮದ್‌ ಝುಬೈರ್‌ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಲಖಿಂಪುರ ನ್ಯಾಯಾಲಯ

Update: 2022-07-11 09:35 GMT

ಹೊಸದಿಲ್ಲಿ: ಪತ್ರಕರ್ತ, ಸತ್ಯಶೋಧಕ ಹಾಗೂ ಆಲ್ಟ್‌ ನ್ಯೂಸ್‌ ಸಹ-ಸಂಸ್ಥಾಪಕ ಮುಹಮ್ಮದ್‌ ಝುಬೈರ್‌ರಿಗೆ ಲಖೀಂಪುರ ಖೇರಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು NationalHerald ವರದಿ ಮಾಡಿದೆ. 

ಜುಲೈ 13 ರಂದು ಮುಹಮ್ಮದ್‌ ಝುಬೈರ್‌ರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಆಲಿಸಲಿದೆ. ಖಾಸಗಿ ವಾಹಿನಿಯೊಂದರ ವಿರುದ್ಧ ಟ್ವೀಟ್‌ಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2021 ರಲ್ಲಿ ಲಖಿಂಪುರದಲ್ಲಿ ಝುಬೈರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂದರ್ಭದಲ್ಲಿ ಅದನ್ನು ಮತ್ತೆ ಮುನ್ನೆಲೆಗೆ ತರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News