×
Ad

ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ 94ರ ವಯಸ್ಸಿನ ಭಗವಾನಿ ದೇವಿ

Update: 2022-07-11 17:28 IST
Photo:twitter

 ಟ್ಯಾಂಪರೇ(ಫಿನ್‌ಲ್ಯಾಂಡ್), ಜು.11: ಫಿನ್‌ಲ್ಯಾಂಡ್‌ನ ಟ್ಯಾಂಪರೇಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 94ರ ವಯಸ್ಸಿನ ಓಟಗಾರ್ತಿ ಭಗವಾನಿ ದೇವಿ 100 ಮೀ. ಓಟದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಭಗವಾನಿ ದೇವಿ ಅವರು 24.74 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಜಯಿಸಿದ್ದಾರೆ.
ಭಗವಾನಿ ಶಾಟ್‌ಪುಟ್‌ನಲ್ಲಿ ಕೂಡ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

 "ಭಾರತದ 94ರ ವಯಸ್ಸಿನ ಭಗವಾನಿದೇವಿ ಅವರು ಸಾಧನೆಗೆ ವಯಸ್ಸು ಒಂದು ತಡೆಯಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ದೇವಿ ಅವರು ಟ್ಯಾಂಪರೇಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ ಚಾಂಪಿಯನ್‌ಶಿಪ್‌ನ 100 ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಅವರು ಶಾಟ್‌ಪುಟ್‌ನಲ್ಲಿ ಕಂಚಿನ ಪದಕವನ್ನೂ ಜಯಿಸಿದ್ದಾರೆ. ಅವರದ್ದು ನಿಜವಾಗಿಯೂ ಶ್ಲಾಘನೀಯ ಪ್ರಯತ್ನ! ಎಂದು ಯುವಜನ ಹಾಗೂ ಕ್ರೀಡಾ ಸಚಿವಾಲಯದ ಕ್ರೀಡಾ ವಿಭಾಗವು ಟ್ವೀಟಿಸಿದೆ.

ವಿಶ್ವ ಮ್ಸಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜುಲೈ 29ರಿಂದ ಜುಲೈ 10ರ ತನಕ ನಡೆದಿದೆ. ಇದು 35 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್(ಟ್ರಾಕ್ ಆ್ಯಂಡ್ ಫೀಲ್ಡ್)ಕ್ರೀಡೆಗಾಗಿ ವಿಶ್ವ ಚಾಂಪಿಯನ್‌ಶಿಪ್ ಕ್ಯಾಲಿಬರ್ ಸ್ಪರ್ಧಾವಳಿ ಆಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News