‘ಸ್ಪಿರಿಟ್ ಆಫ್ ಸ್ಪಿರಿಚ್ವಾಲಿಟಿ’ ಚಿತ್ರಕಲಾ ಪ್ರದರ್ಶನ ಸಮಾರೋಪ
ಮಣಿಪಾಲ : ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದಲ್ಲಿ ಹಮ್ಮಿ ಕೊಳ್ಳಲಾದ ಮೂರು ದಿನಗಳ ‘ಸ್ಪಿರಿಟ್ ಆಫ್ ಸ್ಪಿರಿಚ್ವಾಲಿಟಿ’ ಚಿತ್ರಕಲಾಕಲಾಕೃತಿ ಗಳ ಪ್ರದರ್ಶನದ ಸಮಾರೋಪ ಸಮಾರಂಭವು ಸೋಮವಾರ ನಡೆಯಿತು.
ಮುಖ್ಯ ಅತಿಥಿಗಲಾಗಿ ಮಣಿಪಾಲ ದಾಟ್ ನೆಟ್‌ನ ಇಂಜಿನಿಯರಿಂಗ್ ನಿರ್ದೇಶಕ ನಾಗಾರಾಜ ಕಟೀಲ್ ಶೆಟ್ಟಿಗಾರ್, ಇಂದ್ರಾಳಿ ಸ್ವರ ಸರಸ್ವತಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ, ಮಾಹೆ ಫಿಸಿಯೋತೆರಫಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ರಾಜೇಶ್ ನಾವಡ ಉಪಸ್ಥಿತರಿದ್ದರು.
ಪೃಶಾ ಸೇವಾ ಟ್ರಸ್ಟ್ ಮಣಿಪಾಲ-ಉಡುಪಿ ವತಿಯಿಂದ ಪ್ರದರ್ಶನದ ಅತ್ಯುತ್ತಮ ಕಲಾಕೃತಿಗೆ ೧೦ಸಾವಿರ ರೂ. ನಗದು ಪುರಸ್ಕಾರವನ್ನು ಪ್ರಸಾದ್ ಆರ್. ಪಡೆದುಕೊಂಡರೆ, ವೀಕ್ಷಣೆಗೈದ ಸಾರ್ವಜನಿಕ ಆಯ್ಕೆಯ ಅತ್ಯುತ್ತಮ ಕಲಾಕೃತಿಗೆ ಪುರಸ್ಕಾರವನ್ನು ಅನೂಷಾ ಆಚಾರ್ಯ, ಹಿರಿಯರಾದ ಶ್ರೀನಿವಾಸ ರಾವ್ ಅವರಿಂದ ಸ್ವೀಕರಿಸಿದರು.
ಕೇಂದ್ರದ ನಿರ್ದೇಶಕ ಹರೀಶ್ ಸಾಗಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಿ.ಎಸ್.ಕೆ. ಭಟ್ ಸ್ವಾಗತಿಸಿದರು. ಚೇತನಾ ಗಣೇಶ್ ಕಾರ್ಯಕ್ರಮ ನಿರೂ ಪಿಸಿದರು. ಕೆರೋಲಿನ್ ಡಿಸೋಜಾ ವಂದಿಸಿದರು.