×
Ad

ದಿಲ್ಲಿ ಬಿಜೆಪಿ ವಕ್ತಾರೆಗೆ ಲೈಂಗಿಕ ಕಿರುಕುಳದ ಆರೋಪ; ಎಫ್‌ಐಆರ್ ದಾಖಲು

Update: 2022-07-12 21:03 IST

ಹೊಸದಿಲ್ಲಿ, ಜು. 12: ದಿಲ್ಲಿಯ ಬಿಜೆಪಿ ವಕ್ತಾರೆಯೊಬ್ಬರು ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿದ ಬಳಿಕ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಕ್ತಾರೆಯ ವಿರುದ್ಧ ಪೋಸ್ಟ್ ಮಾಡಲಾದ ವೀಡಿಯೊ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಆರೋಪಿಸಿ ಬಿಜೆಪಿಯ ದಿಲ್ಲಿ ಘಟಕ ದೂರು ಸಲ್ಲಿಸಿದ ಬಳಿಕ ಈ ಎಫ್‌ಐಆರ್ ದಾಖಲಿಸಲಾಗಿದೆ.

ಈ ವೀಡಿಯೊ ವಕ್ತಾರೆಯ ವರ್ಚಸ್ಸಿಗೆ ಸಾರ್ವಜನಿಕವಾಗಿ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ ಎಂದು ದೂರಿನಲ್ಲಿ ಹೇಳಲಾಗಿದೆ. 

ಹೊಸದಿಲ್ಲಿ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 354ಎ (ಲೈಂಗಿಕ ಕಿರುಕುಳ), 509(ಮಹಿಳೆಯ ಗೌರವಕ್ಕೆ ಧಕ್ಕೆ) ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News