ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2022-07-12 15:39 GMT

ಬ್ರಹ್ಮಾವರ: ಹಾವಂಜೆ ಗ್ರಾಮದ ಗೊಳಿಕಟ್ಟೆ ಎಂಬಲ್ಲಿರುವ ಮನೆಗೆ ಜು.೮ರ ಸಂಜೆಯಿಂದ ಜು.೧೨ರ ಬೆಳಗಿನ ಮಧ್ಯಾವಧಿಯಲ್ಲಿ ನುಗ್ಗಿದ ದುಷ್ಕರ್ಮಿಗಳು, ಸಾವಿರಾರು ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಥೋಮಸ್ ಡಿಸೋಜ ಎಂಬವರ ಮನೆಯ ಎದುರು ಬಾಗಿಲನ್ನು ಒಡೆದು ಒಳನುಗ್ಗಿ, ೬೦ ಸಾವಿರ ರೂ. ಮೌಲ್ಯದ ೧೫ಗ್ರಾಂ ತೂಕದ ೨ ಚಿನ್ನದ ಉಂಗುರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News