​ಕಾಸರಗೋಡು : ಮಹಿಳೆಗೆ ಕಿರುಕುಳ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2022-07-13 06:02 GMT

ಕಾಸರಗೋಡು : ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಿಜಿತ್ ಮತ್ತು ಮುಸ್ತಫಾ ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ಮಂಜೇಶ್ವರದ ಕಾಲೇಜೊಂದರ ಸಿಬ್ಬಂದಿಯೋರ್ವರನ್ನು ತಡೆದ ಮೂವರ ತಂಡ ಮಹಿಳೆಯ ಕೈ ಎಳೆದು ಕಿರುಕುಳ ನೀಡಿದ್ದರೆನ್ನಲಾಗಿದ್ದು, ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು.

ಪ್ರಕರಣದಲ್ಲಿ ಕೌಶಿಕ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಈ ಹಿಂದೆ ನಡೆದ ಇಂತಹ ಇನ್ನೊಂದು ಪ್ರಕರಣದಲ್ಲೂ ಇವರು ಶಾಮೀಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News