ನನಸಾಗುತ್ತಿರುವ ಭವ್ಯ ಭವಿಷ್ಯದ ಕನಸು ಮರ್ಕಝ್ ನಾಲೆಜ್ ಸಿಟಿ
ಶಿಕ್ಷಣ, ಸಂಸ್ಕೃತಿ, ಆರೋಗ್ಯ, ಕೃಷಿ, ವಾಣಿಜ್ಯಗಳೊಂದಿಗೆ ಬದುಕನ್ನು ಸಮ್ಮಿಳಿತಗೊಳಿಸಿದ ‘ಮರ್ಕಝ್ ನಾಲೆಜ್ ಸಿಟಿ’ ಎಂಬ ಕನಸಿನ ಯೋಜನೆಯ ನಿರ್ಮಾಣ ಕಾರ್ಯಭರದಿಂದ ಸಾಗಿದೆ. ಕೇರಳದ ಕಲ್ಲಿಕೋಟೆ ಯಿಂದ ವಯನಾಡ್ ಮಾರ್ಗದಲ್ಲಿ ನಲವತ್ತು ಕಿಲೋಮೀಟರ್ ಸಾಗಿದರೆ ಸಿಗುವ ಊರು ಕೈದಪೊಯಿಲ್. ಇಲ್ಲಿನ ನಿಸರ್ಗ ರಮಣೀಯವಾದ ಈ ತಾಣದಲ್ಲಿ ‘ಮರ್ಕಝ್ ನಾಲೆಜ್ ಸಿಟಿ’ಯ ಕಾಮಗಾರಿ ಮುಂದುವರಿದಿದ್ದು, ಈಗಾಗಲೇ ಹತ್ತಾರು ಯುನಿಟ್‌ಗಳು ಕಾರ್ಯಾರಂಭ ಮಾಡಿವೆ. ವಿವಿಧ ಕ್ಷೇತ್ರಗಳಲ್ಲಿ ಹೊಸತನಗಳನ್ನು ತಂದ ಖ್ಯಾತನಾಮರು ಈ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದು, ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್‌ರ ಮರ್ಕಝ್ ವಿದ್ಯಾಸಂಸ್ಥೆ ನಾಯಕತ್ವ ಕೊಡುತ್ತಿದೆ. ಅವರ ಸುಪುತ್ರ ಡಾ. ಅಬ್ದುಲ್ ಹಕೀಂ ಅಝ್‌ಹರಿಯವರೇ ಇದರ ರೂವಾರಿ.
ನವ ನಾಳೆಗಳಿಗೆ ನಾಂದಿ ಹಾಡುತ್ತಿರುವ ಭವಿಷ್ಯದ ಯೋಜನೆಯಾಗಿದೆ ಮರ್ಕಝ್ ನಾಲೆಜ್ ಸಿಟಿ. ಮಾನವನ ಬದುಕಿನ ಅತ್ಯಂತ ಅನಿವಾರ್ಯ ಅಗತ್ಯ
ಗಳಾದ ಶಿಕ್ಷಣ, ಸಂಸ್ಕೃತಿ, ಉದ್ಯಮಶೀಲತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸ್ವಪ್ರೇರಣೆ
ಯೊಂದಿಗೆ ಮಹತ್ತರ ಸಾಧನೆಗಳನ್ನು ಮಾಡಿದವರು ಈ ಯೋಜನೆಯ ಹಿಂದಿದ್ದಾರೆ. ಶಿಕ್ಷಣದ ಮೂಲಕವೇ ರಾಷ್ಟ್ರಾಭಿವೃದ್ಧಿ ಸಾಧ್ಯ ಎಂಬ ನಂಬಿಕೆಯನ್ನು ಮರ್ಕಝ್ ಹೊಂದಿದ್ದು ವೈದ್ಯಕೀಯ, ತಾಂತ್ರಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಇಂಬು ನೀಡುವ ವಿವಿಧ ಸಂಸ್ಥೆಗಳನ್ನು ಹುಟ್ಟುಹಾಕಿದೆ. ಇನ್ನೂ ಹಲವು ಯೋಜನೆಗಳು ಬೆಳವಣಿಗೆಯ ಹಂತದಲ್ಲಿದೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳ (UNSDG 2030) ಜಾಡು ಹಿಡಿದು ಸುಸ್ಥಿರವೂ ಅಭಿವೃದ್ಧಿಶೀಲವೂ ಆದ ನಗರಗಳನ್ನು ಮತ್ತು ಸಮುದಾಯಗಳನ್ನು ನಿರ್ಮಿಸುವ ಮೂಲಕ ಮಾನವಾಭಿವೃದ್ಧಿಯನ್ನು ಸಾಧಿಸುವುದು ಈ ಯೋಜನೆಯ ಉದ್ದೇಶ. ನವನವೀನ ಆಶಯಗಳನ್ನು ನೇಯ್ದು, ಹೊಸ ಅವಕಾಶಗಳನ್ನು ಸೃಷ್ಟಿಸಿ, ಮಾನವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತಾ ಯುಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸುತ್ತಿದೆ ಮರ್ಕಝ್. ಈ ಮೂಲಕ ಇತಿಹಾಸದಿಂದ ಸ್ಫೂರ್ತವಾದ ಭವ್ಯ ಭವಿಷ್ಯವನ್ನು ಆಧುನಿಕತೆಯ ಮೆರುಗಿನೊಂದಿಗೆ ಅಸ್ತಿತ್ವಕ್ಕೆ ತರುವ ಮೂಲಕ ಅಗತ್ಯ ತಾಂತ್ರಿಕ ಅಭಿವೃದ್ಧಿಯನ್ನು ಪಡೆದ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಬೆಳೆಸಿಕೊಳ್ಳಬಹುದು.
ಸುಸ್ಥಿರವಾದ ಅಭಿವೃದ್ಧಿಯ ಮಾದರಿಗಳು ಮಾತ್ರವೇ ಮಾನವರಿಗೆ ಎಂದೆಂದಿಗೂ ಉಪಕಾರಿಯಾಗಬಲ್ಲದು ಎನ್ನುವುದು ಮರ್ಕಝ್ ನಿಲುವು. ಪರಿಸರವಾದಿ ಆತಂಕಗಳನ್ನು ಗಾಳಿಗೆ ತೂರಿ ರೂಪಿಸಲಾಗುವ ಅಭಿವೃದ್ಧಿ ಯೋಜನೆಗಳು ಈ ಪ್ರಪಂಚಕ್ಕೆ ದೀರ್ಘಕಾಲೀನ ಒಳಿತನ್ನು ತರದು. ಈ ನಿಟ್ಟಿನಲ್ಲಿ ಜನರ ಜೀವನ ಗುಣಮಟ್ಟದ ವರ್ಧನೆಗಾಗಿ ರೂಪಿಸಲಾದ ಈ ಯೋಜನೆಯ ಪ್ರತಿಯೊಂದು ಹಂತದಲ್ಲೂ ಹಸಿರು ಪ್ರೊಟೊಕಾಲ್ ಗಳನ್ನು ಮರ್ಕಝ್ ಅಕ್ಷರಶಃ ಪಾಲಿಸುತ್ತಾ ಬಂದಿದೆ. ಉತ್ತಮ ಆರೋಗ್ಯ, ಜೀವನಶೈಲಿ ಮತ್ತು ಗುಣಮಟ್ಟದ ಶಿಕ್ಷಣವೆ ಮರ್ಕಝ್ ನಾಲೆಜ್ ಸಿಟಿ ಸಮಾಜಕ್ಕೆ ಸಲ್ಲಿಸುತ್ತಿರುವ ಮಹತ್ತರವಾದ ಸೇವೆ.
ತನ್ನ ಗುರಿಯಲ್ಲಿ ಕೇಂದ್ರೀಕರಿಸಿಕೊಂಡು ಸಮಾನಮನಸ್ಕರಾದ ವಿವಿಧ ಸಂಘಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಮರ್ಕಝ್ ನಾಲೆಜ್ ಸಿಟಿ ಸಹಯೋಗ ಮಾಡಿಕೊಳ್ಳುತ್ತಾ ಹೊಸ ಮಜಲುಗಳನ್ನು ಕ್ರಮಿಸುತ್ತಿದೆ. ಈ ಮೂಲಕ ಹೊಸ ಸಾಧ್ಯತೆಗಳ ಬಗ್ಗೆ ಅನ್ವೇಷಣೆಯ ಮತ್ತು ಪ್ರತಿಭೆ ಹಾಗೂ ತಂತ್ರಜ್ಞಾನದ ಜಾಗತಿಕ ವಿನಿಮಯದ ಗುರಿಯನ್ನು ಹೊಂದಿದೆ.
ಚಿಂತನಶೀಲತೆಯನ್ನು ಮೈಗೂಡಿಸಿಕೊಂಡು ಪರಂಪರೆಯ ಮೌಲ್ಯ ಗಳನ್ನು ಹಾಗೂ ಹೊಸತನದ ಚೈತನ್ಯವನ್ನು ಸಮ್ಮಿಳಿತಗೊಳಿಸಿದ ತಲೆಮಾರಿನ ಸೃಷ್ಟಿಯೇ ಈ ಯೋಜನೆಯ ಫಲಿತಾಂಶ. ಸಕಾಲಿಕ ಜಗತ್ತಿನಲ್ಲಿ ಸೃಜನಶೀಲ ಪರಿವರ್ತನೆಗಳನ್ನು ತರಲು ಹಪಹಪಿಸುವ ಯಾವುದೇ ಹಿನ್ನೆಲೆಯ ಜನರ ಸಹಭಾಗಿತ್ವವನ್ನು ಮರ್ಕಝ್ ನಿರೀಕ್ಷಿಸುತ್ತಿದೆ. ಇದು ಮರ್ಕಝ್ ಬಯಸುವ ಅಖಂಡತೆ ಮತ್ತು ಒಳಗೊಳ್ಳುವಿಕೆಯನ್ನು ಕಾರ್ಯಗತಗೊಳಿಸಲಿದೆ. ಪರಂಪರೆಯ ಶ್ರೀಮಂತಿಕೆ ಮತ್ತು ನಾಗರಿಕತೆಗಳ ನಡುವಿನ ಕೊಡು-ಕೊಳ್ಳುವಿಕೆಯ ಮೂಲಕ ಅಚ್ಚರಿಗಳನ್ನು ಸೃಷ್ಟಿಸಲು ಸಾಧ್ಯವಿದೆ ಎನ್ನುವುದು ಮರ್ಕಝಿನ ವಿಶ್ವಾಸ. ಮರ್ಕಝ್ ನಾಲೆಜ್ ಸಿಟಿಯಲ್ಲಿ ಸದ್ಯ ಕಾರ್ಯಾಚರಿಸುತ್ತಿರುವ ಹತ್ತಾರು ಸಂಸ್ಥೆಗಳನ್ನು ಸಣ್ಣಮಟ್ಟದಲ್ಲಿ ಪರಿಚಯಿಸಿಕೊಳ್ಳೋಣ:
ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜು
ಮಾನವನ ನೈಸರ್ಗಿಕತೆಗೆ ಯಾವುದೇ ತೊಡಕು ಬಾರದ ರೀತಿಯಲ್ಲಿ ಆರೋಗ್ಯವಂತ ಬದುಕನ್ನು ಖಚಿತಪಡಿಸುವ ಗುರಿಯನ್ನು ಇಟ್ಟುಕೊಂಡು ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಾರ್ಯಾ ಚರಿಸುತ್ತಿದೆ. ಕೇರಳದಲ್ಲಿ ಆರಂಭಿಸಲಾದ ಪ್ರಪ್ರಥಮ ಯುನಾನಿ ಮೆಡಿಕಲ್ ಕಾಲೇಜು ಇದಾಗಿದ್ದು, ದಕ್ಷ ವೈದ್ಯಕೀಯ ಉದ್ಯೋಗಿಗಳನ್ನು ಬೆಳೆಸುವ ಮೂಲಕ ಆರೋಗ್ಯ ರಂಗದ ಮೂಲಸೌಕರ್ಯದ ಅಭಿವೃದ್ಧಿ ಹಾಗೂ ನೂತನ ವಿಧಾನಗಳನ್ನು ಕಾರ್ಯ ರೂಪಕ್ಕೆ ತರುವ ಕಾರ್ಯವನ್ನು ಮಾಡುತ್ತಿದೆ. ಅರಿವು ಮತ್ತು ಅನ್ವಯದ ಅತ್ಯಂತ ಸೂಕ್ತವಾದ ಮಿಲನ ಇಲ್ಲಿ ನಡೆಯುತ್ತಿದೆ. ಉತ್ತಮ ಕಲಿಕಾ ವಾತಾವರಣ, ಉತ್ಕೃಷ್ಟ ತಾಂತ್ರಿಕತೆ ಇರುವ ಕಲಿಕಾ ಕೇಂದ್ರಗಳು ಮತ್ತು ಅನ್ವಯ ಆಧಾರಿತ ಪಠ್ಯಕ್ರಮ ಇಲ್ಲಿನ ವಿದ್ಯಾರ್ಥಿಗಳಲ್ಲಿ ಉನ್ನತ ಕಲಿಕಾ ಮಟ್ಟವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದೆ.
ಮಲೈಬಾರ್ ಫೌಂಡೇಶನ್ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್
ವಿವಿಧ ಅಧ್ಯಯನ ಕ್ಷೇತ್ರಗಳ ನಡುವೆ ಅಕಾಡಮಿಕ್ ಸಂವಾದಗಳನ್ನು ಬೆಳೆಸಲು ಮತ್ತು ಚಾಲ್ತಿಯಲ್ಲಿರುವ ಜ್ಞಾನಗಳಿಗೆ ಹೊಸ ಹೊಳಹುಗಳನ್ನು ನೀಡಲು ಆರಂಭಿಸಲಾದ ಅಧ್ಯಯನ ಪೀಠವಾಗಿದೆ ಮಲೈಬಾರ್. ಕಲೆ, ಸಾಹಿತ್ಯ, ವಾಣಿಜ್ಯ, ವ್ಯವಹಾರ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡಲು ವಿದ್ಯಾರ್ಥಿಗಳನ್ನು ಉತ್ತೇಜಿಸುವಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಪಾರಂಪರಿಕ ಬಳುವಳಿಗಳನ್ನು ಮತ್ತು ಹಸ್ತಲಿಪಿಗಳನ್ನು ಸಂರಕ್ಷಿಸುವ ವ್ಯವಸ್ಥೆಯನ್ನು ಮಲೈಬಾರ್ ನಡೆಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಲೈಬ್ರೆರಿ, ಜನಪದ ಅಧ್ಯಯನ ಕೇಂದ್ರ ಹಾಗೂ ಪ್ರಸಾರಾಂಗ ಮಲೈಬಾರ್‌ನ ಪ್ರಧಾನ ಚಟುವಟಿಕೆಗಳು.
ಮಝ್ರ
ರಾಷ್ಟ್ರದ ಕೃಷಿ ಪ್ರಧಾನ ಇತಿಹಾಸಕ್ಕೆ ಮರು ಉತ್ತೇಜನ ನೀಡುವ ನಿಟ್ಟಿನಲ್ಲಿ ಆರಂಭಿಸಲಾದ ಈ ಸಂಸ್ಥೆ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಕೃಷಿ ಚಟುವಟಿಕೆ ಗಳನ್ನು ನಡೆಸುತ್ತಿದೆ. ಕೃಷಿ ಅಧ್ಯಯನ ಹಾಗೂ ತರಬೇತಿ ಕೇಂದ್ರವನ್ನು ಇದರಡಿಯಲ್ಲಿ ಶೀಘ್ರ ಸ್ಥಾಪಿಸಲು ಬಯಸುತ್ತಿದ್ದು, ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಗಲಿದೆ.
ಫೆಝಿನ್ ಹೊಟೇಲ್
ಮರ್ಕಝ್ ನಾಲೆಜ್ ಸಿಟಿಯ ಹೆಬ್ಬಾಗಿಲಲ್ಲೆ ತಲೆಯೆತ್ತಿ ನಿಂತಿರುವ ಫೋರ್ ಸ್ಟಾರ್ ಹೋಟೆಲ್ ಆಗಿದೆ ಫೆಝಿನ್. ಅತ್ಯಾಧುನಿಕ ಸೌಕರ್ಯಗಳುಳ್ಳ ಈ ಹೋಟೆಲ್‌ನಲ್ಲಿ ನೂರಕ್ಕಿಂತಲೂ ಹೆಚ್ಚು ಡಿಲಕ್ಸ್ ಮತ್ತು ಸ್ಯೂಟ್‌ಗಳಿವೆ.
ಅಲಿಫ್ ಗ್ಲೋಬಲ್ ಸ್ಕೂಲ್
ಅಂತಾರಾಷ್ಟ್ರೀಯ ಗುಣಮಟ್ಟದ ಶಾಲಾ ಶಿಕ್ಷಣವನ್ನು ಒದಗಿಸುವ ಸಂಸ್ಥೆ ಇದು. ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಠ್ಯಕ್ರಮಗಳನ್ನು ಸಂಯೋಜಿಸಿ ಶೈಕ್ಷಣಿಕ ರಂಗದಲ್ಲಿ ಹೊಸ ಭಾಷ್ಯವನ್ನು ಬರೆಯುವತ್ತ ಈ ಸಂಸ್ಥೆ ಮುಂದುವರಿಯುತ್ತಿದೆ. ವಿದ್ಯಾರ್ಥಿಗಳಲ್ಲಿ ಉನ್ನತ ಮಟ್ಟದ ಕಲಿಕಾ ಫಲಿತಾಂಶಗಳನ್ನು ಖಾತರಿಪಡಿಸಲು ಸಿಬಿಎಸ್‌ಇ ಮತ್ತು ಐಜಿಸಿಎಸ್‌ಇ ಪಠ್ಯಕ್ರಮಗಳನ್ನು ಅಳವಡಿಸುವುದರೊಂದಿಗೆ ಉತ್ತಮ ವಾತಾವರಣವನ್ನು ಕೂಡಾ ಒದಗಿಸುತ್ತಿದೆ. ಸ್ಮಾರ್ಟ್ ಕ್ಲಾಸ್ ರೂಂ, ಹವಾನಿಯಂತ್ರಕ ಸವಲತ್ತುಗಳು, ಮನೆಯ ವಾತಾವರಣ, ಸೃಜನಶೀಲ ವೃತ್ತಗಳು ಮುಂತಾದ ವ್ಯವಸ್ಥೆಗಳು ಇಲ್ಲಿವೆ.
ವಿರಾಸ್: ವರ್ಲ್ಡ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಅಡ್ವಾನ್ಸ್ಡ್ ಸಯನ್ಸ್
ಇಸ್ಲಾಮಿಕ್ ಸ್ಟಡೀಸ್ ವಿಭಾಗದಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದೆ ವರ್ಲ್ಡ್ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ ಇನ್ ಅಡ್ವಾನ್ಸ್ಡ್ ಸಯನ್ಸ್. ಯುವ ವಿದ್ವಾಂಸರನ್ನು ಇಸ್ಲಾಮಿಕ್ ದೇವಶಾಸ್ತ್ರ, ಅಧ್ಯಾತ್ಮ, ಕಾನೂನು, ವೈದ್ಯಕೀಯ ಅರ್ಥ ಶಾಸ್ತ್ರ ಮುಂತಾದ ಇಸ್ಲಾಮಿಕ್ ಜ್ಞಾನಶಿಸ್ತುಗಳಲ್ಲಿ ಪಳಗಿಸಲು ಈ ವಿದ್ಯಾಸಂಸ್ಥೆ ಕಟಿಬದ್ಧವಾಗಿದೆ. ಕ್ಲಾಸಿಕಲ್ ಇಸ್ಲಾಮಿಕ್ ಶಿಸ್ತುಗಳು ಹಾಗೂ ಅರೇಬಿಕ್ ಲಿಬರಲ್ ಆರ್ಟ್ಸ್‌ನಲ್ಲಿ ಆಳವಾದ ಅಧ್ಯಯನವನ್ನು ಉತ್ತೇಜಿಸುವ ಜೊತೆಜೊತೆಗೆ ಸಮಕಾಲೀನ ಇಸ್ಲಾಮಿಕ್ ವಿಜ್ಞಾನಗಳಿಗೆ ಹಾಗೂ ಆಧುನಿಕ ಮುಸ್ಲಿಮ್ ಸಮೂಹಗಳಿಗೆ ಸಂಬಂಧಿಸಿದ ವಿಸ್ತೃತ ಅಧ್ಯಯನ ವಿಷಯಗಳನ್ನು ಕೂಡಾ ಇಲ್ಲಿ ಕಲಿಸಲಾಗುತ್ತಿದೆ. ನಾಲೆಜ್ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ಇತರ ಅಧ್ಯಯನ ವಿಭಾಗಗಳ ಸಹಯೋಗದೊಂದಿಗೆ ತೌಲನಿಕ ಕಾನೂನು ಅಧ್ಯಯನ, ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳು, ವ್ಯವಹಾರ ಅಧ್ಯಯನ ಹಾಗೂ ತಾಂತ್ರಿಕ ಅಧ್ಯಯನವನ್ನೂ ಒಳಗೊಳ್ಳುವ ಸಮಗ್ರವಾದ ಬೌದ್ಧಿಕ ವಾತಾವರಣ ಇರುವುದು ವಿರಾಸ್‌ನ ವಿಶೇಷತೆ.
ಟೈಗ್ರೀಸ್ ವ್ಯಾಲಿ
ಕೇಂದ್ರ ಸರಕಾರದ ಮಾನ್ಯತೆ ಇರುವ ಆಯುಷ್ ವಿಧಾನಗಳನ್ನು ಬಳಸಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ನಿರ್ಮಿತ ಸಂಸ್ಥೆಯಾಗಿದೆ ಟೈಗ್ರೀಸ್ ವ್ಯಾಲಿ. ಸೆಂಟ್ರಲ್ ಏಶ್ಯ ಹಾಗೂ ದಕ್ಷಿಣ ಏಶ್ಯ ಸಹಿತ ಜಗತ್ತಿನ ವಿವಿಧೆಡೆ ಲಭ್ಯವಿರುವ ವೈದ್ಯಕೀಯ ಸಂಪ್ರದಾಯಗಳನ್ನು ಆಧರಿಸಿದ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತಿದೆ.
ಮರ್ಕಝ್ ಕಲ್ಚರಲ್ ಸೆಂಟರ್
ಭಾರತದ ಅತ್ಯಂತ ದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದೆ ಮರ್ಕಝ್ ಕಲ್ಚರಲ್ ಸೆಂಟರ್. ಆಧ್ಯಾತ್ಮಿಕ ಕೇಂದ್ರ, ಲೈಬ್ರೆರಿ, ಹೆರಿಟೇಜ್ ಸೆಂಟರ್ ಒಳಗೊಳ್ಳುವ ರೊಟುಂಡ ವಾಸ್ತುಶೈಲಿಯ ಸುಂದರ ಕಟ್ಟಡ ಇದಾಗಿದ್ದು, ಇಂಡೊ, ಪರ್ಶಿಯನ್, ಸಾರ್ಸೆನಿಕ್ ಹಾಗೂ ವಸಾಹತುಶಾಹಿ ವಾಸ್ತುಶಿಲ್ಪ ಮಾದರಿಗಳಿಂದ ಸ್ಫೂರ್ತಗೊಂಡಿದೆ. ಮರ್ಕಝ್ ನಾಲೆಜ್ ಸಿಟಿ ಮುಂದಿಡುವ ದರ್ಶನಗಳು ಹಾಗೂ ಮೌಲ್ಯಗಳು ಮಿಳಿತವಾಗುವಂತೆ ಈ ಸಂಕೀರ್ಣವನ್ನು ನಿರ್ಮಿಸಲಾಗಿದೆ.
ಮರ್ಕಝ್ ಲಾ ಕಾಲೇಜು
ಸಮಾಜದ ಕಟ್ಟಕಡೆಯ ಪ್ರಜೆ ಕೂಡಾ ನ್ಯಾಯಯುತ ಹಕ್ಕುಗಳು ಮತ್ತು ಸಮಾನ ಅವಕಾಶ ಗಳಿಂದ ವಂಚಿತರಾಗಬಾರದು ಎನ್ನುವುದು ಮರ್ಕಝ್‌ನ ಕಾಳಜಿ. ಈ ನಿಟ್ಟಿನಲ್ಲಿ ಭಾರತದ ಸಂವಿಧಾನದ ಪುನರುಜ್ಜೀವನ ಹಾಗೂ ಸಂರಕ್ಷಣೆಯನ್ನು ಖಾತರಿಪಡಿಸಲು ಮರ್ಕಝ್ ಲಾ ಕಾಲೇಜು ದಕ್ಷ ಕಾನೂನು ತಜ್ಞರ ತಲೆಮಾರೊಂದನ್ನು ರೂಪಿಸಲು ಪಣತೊಟ್ಟಿದೆ. ಸದ್ಯ ಪದವಿ ಹಂತದಲ್ಲಿ ಐದು ವರ್ಷದ ಇಂಟೆಗ್ರೇಟೆಡ್ ಬಿ.ಕಾಂ ಎಲ್‌ಎಲ್‌ಬಿ ಮತ್ತು ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸನ್ನು ನೀಡುತ್ತಿದ್ದು, ವಿವಿಧ ವಿಷಯಗಳಲ್ಲಿ ಸ್ಪೆಷಲೈಝೇಶನ್ ಪಡೆಯುವ ಅವಕಾಶವಿದೆ. ಸ್ನಾತಕೋತ್ತರ ಹಂತದಲ್ಲಿ ಸಾಂವಿಧಾನಿಕ ಕಾನೂನು ಮತ್ತು ವಾಣಿಜ್ಯ ಕಾನೂನು ವಿಷಯಗಳಲ್ಲಿ ಎಲ್‌ಎಲ್‌ಎಂ ಕೋರ್ಸ್ ಚಾಲ್ತಿಯಲ್ಲಿದೆ. ಕಾನೂನು ವಿಷಯಕ್ಕೆ ಮಾತ್ರ ಒತ್ತುಕೊಡುವ ಸಂಸ್ಥೆ ಇದಾಗಿದ್ದು, ಉನ್ನತ ಮಟ್ಟದ ಕಾನೂನು ಸಂಶೋ ಧನಾ ಕೇಂದ್ರವಾಗುವತ್ತ ಹೆಜ್ಜೆ ಇಡುತ್ತಿದೆ. ಈಗಾಗಲೇ ಮರ್ಕಝ್ ಲಾ ಕಾಲೇಜು ಸಾಂಸ್ಥಿಕ ಹಾಗೂ ವೈಯಕ್ತಿಕ ಮಟ್ಟದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮಿಂಚಿದೆ. ಇಲ್ಲಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ವಿವಿಧ ರೀತಿಯ ತೌಲನಿಕ ಕಾನೂನು ಅಧ್ಯಯನಗಳಲ್ಲಿ ನಿರತರಾಗುವ ಮೂಲಕ ಅಕಾಡಮಿಕ್ ಹಾಗೂ ಕೈಗಾರಿಕಾ ರಂಗದಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ.
AIMER: ಅವಾನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್
ಇದು ಮರ್ಕಝ್ ನಾಲೆಜ್ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ಬ್ಯುಸಿನೆಸ್ ಸ್ಕೂಲ್. ಮ್ಯಾನೇಜ್‌ಮೆಂಟ್ ಶಿಕ್ಷಣ ಹಾಗೂ ಸಂಶೋಧನಾ ರಂಗದಲ್ಲಿ ಹೊಸತನಗಳನ್ನು ಪ್ರಯೋಗಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಮ್ಯಾನೇಜ್‌ಮೆಂಟ್ ಕ್ಷೇತ್ರದ ಸಮಸ್ಯೆಗಳಿಗೆ ಸ್ಥಳೀಯ ಹಾಗೂ ದೇಶೀಯವಾದ ಪರಿಹಾರಗಳನ್ನು ಬೆಳೆಸಲು ಈ ಸಂಸ್ಥೆ ಉದ್ದೇಶಿಸುತ್ತಿದೆ. ಉದ್ಯಮಿಗಳ ಹಾಗೂ ಹೂಡಿಕೆದಾರರ ತಾಣವಾಗಿ ಈ ಸಂಸ್ಥೆ ಮೂಡಿಬರುತ್ತಿದ್ದು ಹಲವಾರು ಮೌಲಿಕ ಸಂಶೋಧನೆಗಳನ್ನು ಮತ್ತು ಅಧ್ಯಯನಗಳನ್ನು ಹೊರತರಲಿದೆ. ಬ್ಯುಸಿನೆಸ್ ತರಬೇತಿಗಾಗಿ ವಿಶೇಷ ವ್ಯವಸ್ಥೆಗಳು ಇಲ್ಲಿದ್ದು ಪಿಜಿ ಡಿಪ್ಲೊಮ ಹಾಗೂ Sustainable Economic Acceleration Model (SEAM) ಪ್ರೋಗ್ರಾಮ್ ನೀಡುತ್ತಿದೆ.
ಎಂ ಟವರ್
ಕಾರ್ಪೊರೇಟ್ ಕ್ಷೇತ್ರದಲ್ಲಿ ಮರ್ಕಝ್‌ನ ಹೆಗ್ಗುರುತಾಗಿ ಬೆಳೆಯುತ್ತಿರುವ ವಾಣಿಜ್ಯ ಸಂಕೀರ್ಣವಾಗಿದೆ ಎಂ ಟವರ್. ಕಾರ್ಪೊರೇಟ್ ಕಚೇರಿಗಳು, ವಾಸ್ತವ್ಯ, ಕಾರ್ಯಾಗಾರಗಳಿಗೆ ಅನುಗುಣವಾದ ಸವಲತ್ತು ಇಲ್ಲಿ ಲಭ್ಯವಿದ್ದು, ಕಾರ್ಪೊರೇಟ್ ಅಗತ್ಯಗಳಿಗೆ ನೆಚ್ಚಿನ ತಾಣ.
ಮಿಹ್ರಾಸ್ ಹಾಸ್ಪಿಟಲ್
ಕೈಗೆಟುಕುವ ದರದಲ್ಲಿ ಉತ್ಕೃಷ್ಟ ಚಿಕಿತ್ಸೆಯನ್ನು ನೀಡುವ ಸಂಸ್ಥೆಯಾಗಿದೆ ಮಿಹ್ರಾಸ್ ಹಾಸ್ಪಿಟಲ್. ಚಿಕಿತ್ಸೆ ನೀಡುವ ಕಾಯಕಕಷ್ಟೇ ಸೀಮಿತವಾಗದೆ ಆರೋಗ್ಯ ಸುರಕ್ಷೆ ಹಾಗೂ ರೋಗ ನಿರೋಧಕ ಶಕ್ತಿಯ ಬಗ್ಗೆ ಜನಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಕೂಡಾ ಮಿಹ್ರಾಸ್ ಹಾಕಿಕೊಂಡಿದೆ. ಯುನಾನಿ, ಅಲೋಪತಿ, ನ್ಯಾಚುರೋಪತಿ ಸಹಿತ ವಿಭಿನ್ನ ಚಿಕಿತ್ಸಾ ಸಂಪ್ರದಾಯಗಳನ್ನು ಆಧರಿಸಿದ ಶುಶ್ರೂಷೆಗಳು ಇಲ್ಲಿ ಲಭ್ಯವಿದೆ.
ಕ್ವೀನ್ಸ್ ಲ್ಯಾಂಡ್
ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಹಬ್ಬಿಸುವ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಕಾರ್ಯಾಚರಿಸುತ್ತಿರುವ ಶಿಸ್ತುಬದ್ಧ ಅಧ್ಯಯನ ಕೇಂದ್ರವಾಗಿದೆ ಕ್ವೀನ್ಸ್ ಲ್ಯಾಂಡ್. ವೆಲ್ನೆಸ್ ಸೆಂಟರ್, ಕುರ್‌ಆನ್ ಹಾಗೂ ಇಸ್ಲಾಮೀ ಅಧ್ಯಯನ ಕೇಂದ್ರಗಳು, ತಾಂತ್ರಿಕ ಕೌಶಲ್ಯಾಭಿವೃದ್ಧಿ ಘಟಕ, ಡಿಜಿಟಲ್ ಲೈಬ್ರೆರಿ ಹಾಗೂ ಒಳಾಂಗಣ ಕ್ರೀಡಾಂಗಣವನ್ನು ಒಳಗೊಂಡಿರುವ ವಿಶೇಷ ಸಂಸ್ಥೆ ಇದು. ಪ್ರಿಯುನಿವರ್ಸಿಟಿ ಹಾಗೂ ಬ್ಯಾಚುಲರ್ ಹಂತ ದಲ್ಲಿ ಸದ್ಯ ಇಂಟಗ್ರೇಟೆಡ್ ಇಸ್ಲಾಮಿಕ್ ಕೋರ್ಸುಗಳನ್ನು ಕ್ವೀನ್ಸ್ ಲ್ಯಾಂಡ್ ನೀಡುತ್ತಿದೆ.
ಹಿಲ್ ಸಿನಾಯ್ ಸೆಂಟರ್ ಆಫ್ ಎಕ್ಸಲೆನ್ಸ್
ಮಾನವ ಸಂಪನ್ಮೂಲ ಮತ್ತು ಆನಂದ ಎಂಬೆರಡು ಸುಪ್ರಧಾನ ಘಟಕಗಳಲ್ಲಿ ಕೇಂದ್ರೀಕ ರಿಸಿಕೊಂಡು ಮುನ್ನಡೆಯುತ್ತಿರುವ ಈ ಸಂಸ್ಥೆ ತಾಂತ್ರಿಕತೆ ಆಧಾರಿತ ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ನೀಡುತ್ತಿದೆ. ನವೀಕರಣ ಮತ್ತು ಸಂಶೋಧನೆಯನ್ನು ಬಳಸಿಕೊಂಡು ಬೆಳವಣಿಗೆಗೆ ಸಹಾಯಕವಾಗುವ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಈ ಸಂಸ್ಥೆ ನಿರ್ವಹಿಸಲಿದೆ. ತಾಂತ್ರಿಕತೆಯ ಪೂರ್ಣ ಪ್ರಮಾಣದ ಫಲಾನುಭವವನ್ನು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಹಾಗೂ ಇತರರಿಗೆ ದೊರಕಿಸಿಕೊಡುವ ಮೂಲಕ ಸ್ಪರ್ಧಾತ್ಮಕತೆಯಲ್ಲಿ ಮುಳುಗಿದ ಪ್ರಸಕ್ತ ಜಗತ್ತಿನಲ್ಲಿ ಸಾಧನೆಯ ಶಿಖರಗಳನ್ನೇರುವ ತರಬೇತಿ ನೀಡಲಿದೆ. ಭವಿಷ್ಯದ ಅವಕಾಶಗಳಿಗಾಗಿ ಹೊಸ ತಲೆಮಾರನ್ನು ಸಿದ್ಧಪಡಿಸುವ ಹೆಗ್ಗುರಿ ಈ ಸಂಸ್ಥೆಯದ್ದು. ಜಗತ್ತಿನಲ್ಲೇ ಉತ್ಕೃಷ್ಟವಾದ ಕೋಚಿಂಗ್ ಸೆಂಟರ್‌ನ ಸ್ಥಾಪನೆ, ಭವಿಷ್ಯ ಆಧಾರಿತ ಕೌಶಲ್ಯಗಳ ಪೋಷಣೆ, ತಜ್ಞರೊಂದಿಗಿನ ಆಶಯ ವಿನಿಮಯ ಮತ್ತು ಮಾನವೀಯ ಮೌಲ್ಯಗಳ ಬಿತ್ತನೆ ಈ ಸಂಸ್ಥೆಯ ವಿಶೇಷತೆಗಳು.
ಹ್ಯಾಬಿಟಸ್ ಲೈಫ್ ಸ್ಕೂಲ್
ಯುವಜನತೆಗೆ ಅತ್ಯಾಧುನಿಕ ಕೌಶಲ್ಯಗಳನ್ನು ನೀಡುವ ಮೂಲಕ ಅವರನ್ನು ಉದ್ಯೋಗ ಕ್ಷೇತ್ರದ ಉನ್ನತೀಕರಣಗಳಿಗೆ ಸಜ್ಜುಗೊಳಿಸಲು ಮರ್ಕಝ್ ಆರಂಭಿಸಿದ ವಿಶೇಷ ಸಂಸ್ಥೆಯಾಗಿದೆ ಹ್ಯಾಬಿಟಸ್ ಲೈಫ್ ಸ್ಕೂಲ್. ವಿವಿಧ ಕಾರ್ಯಾಗಾರಗಳು, ಆಪ್ತ ಸಮಾಲೋಚನೆಗಳು, ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸುಗಳ ಮೂಲಕ ಯುವಶಕ್ತಿಯನ್ನು ಸಬಲೀಕರಿಸುವ ಹಾದಿಯಲ್ಲಿ ಹ್ಯಾಬಿಟಸ್ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಇಂತಹ ತರಬೇತಿಗಳ ಮೂಲಕ ಯುವಜನತೆ ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸಿಕೊಂಡು ತಮ್ಮ ಕೆರಿಯರ್‌ನಲ್ಲಿ ಪದೋನ್ನತಿ ಪಡೆಯುತ್ತಿದ್ದಾರೆ. ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸುವ ಆಕಾಡಮಿಕ್ ಹಾಗೂ ಇಂಡಸ್ಟ್ರಿಯಲ್ ತಜ್ಞರು ಹ್ಯಾಬಿಟಸ್‌ನಲ್ಲಿ ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ. ಪ್ರಸಕ್ತ ಹಲವಾರು ಫ್ಲ್ಯಾಗ್‌ಶಿಪ್ ಪ್ರೋಗ್ರಾಂಗಳು, ಲೀಡರ್ ಶಿಪ್ ಪ್ರೋಗ್ರಾಂಗಳು ಹಾಗೂ ಸೆಂಟರ್ ಫಾರ್ ವೆಲ್ನೆಸ್ ಆ್ಯಂಡ್ ಹ್ಯಾಪಿನೆಸ್ ವಿಭಾಗಗಳು ಕಾರ್ಯಾಚರಿಸುತ್ತಿವೆ.
ವೆಲೆನ್ಸಿಯ ಗೆಲೆರಿಯ
ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಗುಣವಾದ ಆತಿಥ್ಯ ವ್ಯವಸ್ಥೆ ಇರುವ ಎಕ್ಸಿಬಿಷನ್ ಸೆಂಟರ್ ಇದು. ಎರಡು ಸಾವಿರ ಮಂದಿಗೆ ಸ್ಥಳಾವಕಾಶವಿರುವ ವಿಶಾಲ ಗ್ಯಾಲರಿ ಇದರ ವಿಶೇಷತೆ.
ತೈಬಾ ಗಾರ್ಡನ್
ಹಚ್ಚ ಹಸುರಿನ ಪ್ರಕೃತಿಯ ಮಧ್ಯದಲ್ಲಿ ತಲೆಯೆತ್ತಿ ನಿಂತಿರುವ ರೆಸಿಡೆನ್ಶಿಯಲ್ ಕೇಂದ್ರ ಕೂಡಾ ಮರ್ಕಝ್ ನಾಲೆಜ್ ಸಿಟಿಯಲ್ಲಿದೆ. ಕ್ಲಬ್ ಹೌಸ್, ಈಜುಕೊಳ ಸಹಿತ ಸಂಪೂರ್ಣ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಈ ವಸತಿ ಸಮುಚ್ಚಯ ಶಿಕ್ಷಣಪ್ರಿಯರ ನೆಚ್ಚಿನ ಆವಾಸ ಕೇಂದ್ರವಾಗಿ ಮೂಡಿ ಬರುತ್ತಿದೆ.
ದೇಶಾದ್ಯಂತ ನಾಲೆಜ್ ಸಿಟಿ ಸ್ಥಾಪನೆ ನಮ್ಮ ಗುರಿ
- ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ (ಸ್ಥಾಪಕರು)
ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ ಪ್ರಗತಿಗಾಗಿ ಮತ್ತು ಭಾರತದ ವಿವಿಧೆಡೆ ಇರುವ ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಮರ್ಕಝ್ ಕಾರ್ಯಾ ಚರಿಸುತ್ತಾ ಬಂದಿದೆ. ಹಲವಾರು ಶಕ್ತಿಯುತ ಉತ್ಪನ್ನಗಳನ್ನು ಆ ಕ್ಷೇತ್ರದಲ್ಲಿ ಸಮರ್ಪಿಸುವ ಮೂಲಕ ಯಶಸ್ಸು ಗಳಿಸಲು ನಮಗೆ ಸಾಧ್ಯವಾಗಿದೆ. ಇದೀಗ ನಾಲೆಜ್ ಸಿಟಿ ಎಂಬ ಯೋಜನೆಯ ಮೂಲಕ ಅರಿವು ಮತ್ತು ವಿವೇಕವನ್ನು ಸಂಯೋಜಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ನಮ್ಮೊಂದಿಗೆ ಕೈಜೋಡಿಸಿ ಸ್ವಯಂ ಬೆಳೆದು ಆ ಮೂಲಕ ಸಂಸ್ಥೆಯನ್ನು ಬೆಳೆಸಿದ ಒಂದು ಮಹಾವೃಂದದ ಸಾಮೂಹಿಕ ಪ್ರಯತ್ನವೇ ಈ ಯೋಜನೆಯ ಹಿಂದಿರುವ ಶಕ್ತಿ. ಸಂಸ್ಥೆಯ ಆರಂಭದಿಂದಲೂ ಇಂದಿನ ವರೆಗೆ ಇದುವೇ ನಮ್ಮ ಬಂಡವಾಳ. ನಾಲೆಜ್ ಸಿಟಿಯ ಮೂಲಕ ನಾವು ಬಯಸಿದ ಗುರಿಗೆ ಒಂದು ಹಂತದ ವರೆಗೆ ನಾವು ತಲುಪುತ್ತಾ ಇದ್ದೇವೆ. ಇನ್ನಷ್ಟು ನಾಲೆಜ್ ಸಿಟಿಗಳನ್ನು ರಾಷ್ಟ್ರಾದ್ಯಂತ ನಿರ್ಮಿಸಲ�