ಸ್ವಂತ ಇಂಟರ್ನೆಟ್ ಸೇವೆ ಹೊಂದಿದ ಮೊದಲ ರಾಜ್ಯ ಕೇರಳ
Update: 2022-07-15 22:57 IST
ತಿರುವನಂತಪುರಂ, ಜು. 15: ತನ್ನದೇ ಸ್ವಂತ ಇಂಟರ್ನೆಟ್ ಸೇವೆಯನ್ನು ಹೊಂದಿದ ದೇಶದ ಮೊದಲ ಮತ್ತು ಏಕೈಕ ರಾಜ್ಯ ಕೇರಳವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ.
ಕೇರಳ ಫೈಬರ್ ಆಪ್ಟಿಕ್ ನೆಟ್ವರ್ಕ್ ಲಿಮಿಟೆಡ್ ದೂರಸಂಪರ್ಕ ಇಲಾಖೆಯಿಂದ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ಐಎಸ್ಪಿ) ಪರವಾನಿಗೆಯನ್ನು ಪಡೆದ ಬಳಿಕ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ.
ಇದರೊಂದಿಗೆ, ಸಮಾಜದಲ್ಲಿರುವ ತಂತ್ರಜ್ಞಾನ ಅಸಮಾನತೆಯನ್ನು ಹೋಗಲಾಡಿಸಲು ರೂಪಿಸಲಾಗಿರುವ ಯೋಜನೆಯು ತನ್ನ ಕೆಲಸವನ್ನು ಆರಂಭಿಸಬಹುದಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.