×
Ad

ಇಪಿಎಫ್ ದೇಣಿಗೆಗೆ ತೆರಿಗೆ ರಿಯಾಯಿತಿ: ಹಲವು ಹೊಸ ತಿದ್ದುಪಡಿಗಳು

Update: 2022-07-16 19:56 IST

ಹೊಸದಿಲ್ಲಿ,ಜು.16: ನೌಕರರ ಭವಿಷ್ಯ ನಿಧಿ (ಇಪಿಎಫ್)ಗೆ ನೀಡುವ ದೇಣಿಗೆಗಳಿಂದ ಉದ್ಯೋಗಿಗಳು ಹಾಗೂ ಮಾಲಕರಿಗೆ ಲಭ್ಯವಾಗುವ ತೆರಿಗೆ ರಿಯಾಯಿತಿ ಸೌಲಭ್ಯಗಳಿಗೆ ಕೇಂದ್ರ ಸರಕಾರವು 2022ರ ಎಪ್ರಿಲ್ 1ರಿಂದ ಅನ್ವಯವಾಗುವಂತೆ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಭವಿಷ್ಯ ನಿಧಿಯ ಖಾತೆಗಳನ್ನು ತೆರಿಗೆ ಅರ್ಹವಾದ ಹಾಗೂ ತೆರಿಗೆ ರಹಿತವಾದ ಖಾತೆಗಳೆಂದು ವರ್ಗೀಕರಿಸಲಾಗಿದೆ. 2021ರ ಬಜೆಟ್ನಲ್ಲಿ ಕೇಂದ್ರ ಸರಕಾರವು ಇಪಿಎಫ್ಗೆ ಲಭ್ಯವಿದ್ದ ತೆರಿಗೆಯ ಲಾಭಗಳ್ನು ಕಡಿಮೆಗೊಳಿಸಲು ನಿರ್ಧರಿಸಿದೆ. ಇಪಿಎಫ್ನ ಕೆಲವು ಪ್ರಮುಖ ತಿದ್ದುಪಡಿಗಳು ಹೀಗಿವೆ.

  ‌
1.2021-22ನೇ ಸಾಲಿನಲ್ಲಿ ಇಪಿಎಫ್ಓ ಬಡ್ಡಿಯದ ದರವನ್ನು ನಾಲ್ಕು ದಶಕಗಳಲ್ಲೇ ಅತ್ಯಂತ ಕನಿಷ್ಠ ಅಂದರೆ ಶೇ.8.1 ಕ್ಕೆ ಇಳಿಸಿದೆ.

2.ವಾರ್ಷಿಕವಾಗಿ 2.5 ಲಕ್ಷಕ್ಕಿಂತ ಅಧಿಕ ಮೊತ್ತದ ದೇಣಿಗೆಗೆ ತೆರಿಗೆ ವಿಧಿಸಲಾಗುವುದು.

3.ಒಂದು ವೇಳೆ ಮಾಲಕನು, ತನ್ನ ನೌಕರನ ಇಪಿಎಫ್ ಗೆ ದೇಣಿಗೆಯನ್ನು ನೀಡುತ್ತಿಲ್ಲವಾದಲ್ಲಿ ದೇಣಿಗೆಯ ಗರಿಷ್ಠ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.
  
 4. ನಿಗದಿತ ಮಿತಿಗಿಂತ ಅಧಿಕವಾಗಿರುವ ದೇಣಿಗೆಗೆ ಮಾತ್ರವೇ ತೆರಿಗೆಯನ್ನು ವಿಧಿಸಲಾಗುತ್ತದೆಯೇ ಹೊರತು ಒಟ್ಟು ದೇಣಿಗೆಗಲ್ಲ. ಹೆಚ್ಚುವರಿ ದೇಣಿಗೆಗಳು ಹಾಗೂ ಅದರ ಮೇಲಿನ ಸಂಚಿತ ಬಡ್ಡಿಯನ್ನು ಇಪಿಎಫ್ಓ ಜೊತೆಗಿನ ಪ್ರತ್ಯೇಕ ಖಾತೆಯಲ್ಲಿ ನಿರ್ವಹಿಸಲಾಗುತ್ತದೆ. 

5.ಭವಿಷ್ಯ ನಿಧಿಗೆ ಮಾಲಕನ ದೇಣಿಗೆ, ರಾಷ್ಟ್ರೀಯ ಪಿಂಚಣಿ ಯೋಜನೆ ಹಾಗೂ ನಿವೃತ್ತಿಯ ಸಂದರ್ಭದಲ್ಲಿ ದೊರೆಯುವ ಧನ ಇವುಗಳ ಒಟ್ಟು ಮೊತ್ತದಲ್ಲಿ 7.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಲಾಗುವುದು.

6.ಸಂಚಿ ಬಡ್ಡಿ ಆಧಾರಿತ ತೆರಿಗೆ ವಿಧಿಸುವುದನ್ನು ತಡೆಯಬೇಕಾದರೆ, ಈ ವಿವರಗಳನ್ನು ಫಾರಂ 16 ಹಾಗೂ ಫಾರಂ 12ಬಿಎಗಳಲ್ಲಿ ಭರ್ತಿ ಮಾಡಬೇಕಾಗುತ್ತದೆ.
  
7.ಹದಿನೈದು ಸಾವಿರ ರೂ.ವರೆಗೆ ಮಾಸಿಕ ಆದಾಯವಿರುವ ಉದ್ಯೋಗಿಗಳಿಗೆ ಅವರ ಮಾಲಕರು ಕಡ್ಡಾಯವಾಗಿ ಇಪಿಎಫ್ ದೇಣಿಗೆಗಳನ್ನು ಪಾವತಿಸುವುದು ಕಡ್ಡಾಯಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News