×
Ad

ಉಡುಪಿ; ಮುಂದುವರೆದ ಮಳೆ, 39 ಮನೆಗಳಿಗೆ ಹಾನಿ: 10.39 ಲಕ್ಷ ರೂ. ನಷ್ಟ

Update: 2022-07-17 21:07 IST

ಉಡುಪಿ: ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ಕಳೆದ ರಾತ್ರಿಯಿಂದ ಸುರಿಯುತ್ತಿರುವ ಗಾಳಿಮಳೆ ಯಿಂದ ಜಿಲ್ಲೆಯ ಒಟ್ಟು 39 ಮನೆಗಳಿಗೆ ಹಾನಿಯಾಗಿ ಸುಮಾರು ೧೦.೩೯ಲಕ್ಷ ರೂ. ನಷ್ಟ ಉಂಟಾಗಿದೆ.

ಕಳೆದ ೨೪ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೯೦.೦ಮಿ.ಮೀ. ಮಳೆ ಯಾಗಿದ್ದು, ಉಡುಪಿ-೭೭.೦ ಮಿ.ಮೀ., ಬ್ರಹ್ಮಾವರ- ೭೩.೪ಮಿ.ಮೀ., ಕಾಪು- ೯೪.೩ಮಿ.ಮೀ., ಕುಂದಾಪುರ- ೭೧.೨ಮಿ.ಮೀ., ಬೈಂದೂರು- ೧೦೦.೧ ಮಿ.ಮೀ., ಕಾರ್ಕಳ- ೧೦೫.೬ಮಿ.ಮೀ.,  ಹೆಬ್ರಿ- ೧೦೭.೭ಮಿ.ಮೀ. ಮಳೆ ಯಾಗಿರುವ ಬಗ್ಗೆ ವರದಿಯಾಗಿದೆ.

ಕಾಪು ತಾಲೂಕಿನ ಎಲ್ಲೂರು ಪ್ರಭಾಕರ ಆಚಾರ್ಯ ಎಂಬವರ ಮನೆ ಸಂಪೂರ್ಣ ಕುಸಿದು ಬಿದ್ದು ೨,೦೦,೦೦೦ರೂ. ಮತ್ತು ಬೈಂದೂರು ತಾಲೂಕಿನ ಯಡ್ತರೆಯ ನರಸಿಂಹ ಎಂಬವವರ ಮನೆ ಸಂಪೂರ್ಣ ಹಾನಿಯಾಗಿ ಒಂದು ಲಕ್ಷ ರೂ. ನಷ್ಟವಾಗಿದೆ.

ಬ್ರಹ್ಮಾವರ ತಾಲೂಕಿನ ಶಿರಿಯಾಳ, ತೋಟತಟ್ಟು ಪಡುಕೆರೆಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿ ಒಟ್ಟು ೫೦ಸಾವಿರ ರೂ., ಕಾಪು ತಾಲೂಕಿನ ಪಾದೆ ಬೆಟ್ಟು, ಮಲ್ಲಾರು, ಊಳಿಯಾರಗೋಳಿಯಲ್ಲಿ ಮೂರು ಮನೆಗಳಿಗೆ ಹಾನಿ ಯಾಗಿ ಒಟ್ಟು ೯೦ಸಾವಿರ ರೂ., ಬೈಂದೂರು ತಾಲೂಕಿನ ನಾವುಂದದಲ್ಲಿ ಒಂದು ಮನೆಗೆ ೧೫,೦೦೦ ರೂ. ಹಾಗೂ ಹೇರೂರು, ಯಳಜಿತ್ ಎಂಬಲ್ಲಿ ಮೂರು ಮನೆಯ ದನದ ಕೊಟ್ಟಿಗೆ ಸಂಪೂರ್ಣ ಹಾನಿ ಒಟ್ಟು ೩೫ಸಾವಿರ ರೂ. ನಷ್ಟ ಉಂಟಾಗಿದೆ.

ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಒಂದು ಮನೆಗೆ ಹಾನಿಯಾಗಿ ೫೦,೦೦೦ರೂ. ಕುಂದಾಪುರ ತಾಲೂಕಿನ ಕಾವ್ರಾಡಿ, ಜಪ್ತಿ, ಬಸ್ರೂರು, ಹೊಸಾಡು, ಉಳ್ಳೂರು, ಹಕ್ಲಾಡಿ, ಚಿತ್ತೂರು, ವಕ್ವಾಡಿ, ಕೋಟೇಶ್ವರ, ಕುಂಭಾಶಿ, ಅಮಾಸೆಬೈಲು, ಬೇಳೂರು, ತ್ರಾಸಿ, ಅಂಪಾರು, ಹೊಸಾಡು, ಶಂಕರನಾರಾಯಣ, ಕುಂದಬಾ ರಂದಾಡಿ, ಮಚ್ಚಟ್ಟು,, ನೂಜಾಡಿ, ಹರ್ಕೂರು ಗ್ರಾಮಗಳಲ್ಲಿ ೨೬ ಮನೆಗಳಿಗೆ ಹಾನಿಯಾಗಿ ಒಟ್ಟು ೯.೯೦ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News