ಮಟ್ಟು ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Update: 2022-07-17 21:48 IST
ಕಾಪು: ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಕಟಪಾಡಿ ಮಟ್ಟು ಬಳಿಯ ಪಿನಾಕಿನಿ ನದಿಯಲ್ಲಿ ಜು.೧೭ರಂದು ಬೆಳಗ್ಗೆ ಪತ್ತೆಯಾಗಿದೆ.
ಮಟ್ಟು ಪಿನಾಕಿನಿ ನದಿಯ ನೀರಿನಲ್ಲಿ ಪಾಂಗಾಳ ಕಡೆಯಿಂದ ತೇಲಿಕೊಂಡು ಸುಮಾರು ೪೦ ರಿಂದ ೪೫ ವಯಸ್ಸಿನ ಗಂಡಸಿನ ಅಪರಿಚಿತ ದೇಹ ಬಂದಿದ್ದು, ಮೃತ ದೇಹವು ಅರೆ ಕೊಳೆತ ಸ್ಥೀತಿಯಲ್ಲಿರುವುದು ಕಂಡು ಬಂದಿದೆ. ಈ ಮೃತ ವ್ಯಕ್ತಿ ಸುಮಾರು ಒಂದು ವಾರದ ಹಿಂದೆ ಆಕಸ್ಮಿಕವಾಗಿ ಅಥವಾ ಹೊಳೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇರುವುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.