×
Ad

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆ

Update: 2022-07-20 12:50 IST

ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ ಎಂದು NDTV  ವರದಿ ಮಾಡಿದೆ.

ಶ್ರೀಲಂಕಾದ 8ನೇ ಅಧ್ಯಕ್ಷರಾಗಿ ಆಯ್ಕೆಯಾದ ವಿಕ್ರಮಸಿಂಘೆ ಒಟ್ಟು 134 ಮತಗಳನ್ನು ಪಡೆದರು. 223 ಸಂಸದರು ಮತ ಚಲಾಯಿಸಿದ್ದು, 4 ಮತಗಳು ಅಸಿಂಧುವಾಗಿದ್ದವು.

ಕಳೆದ ವಾರ ನಡೆದ ವ್ಯಾಪಕ ಪ್ರತಿಭಟನೆಯ ನಂತರ ದೇಶದಿಂದ ಪಲಾಯನ ಗೈದಿದ್ದ ಗೊತಬಯ ರಾಜಪಕ್ಸ ರಾಜೀನಾಮೆ ನೀಡಿದರು.ಆಗ ವಿಕ್ರಮಸಿಂಘೆ ಅವರನ್ನು ಸ್ಪೀಕರ್ ಅವರು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು.

ಬಿಕ್ಕಟ್ಟಿನಿಂದ ಪೀಡಿತ ಲಂಕಾದ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಬುಧವಾರ ಶ್ರೀಲಂಕಾದ ಸಂಸತ್ತಿನಲ್ಲಿ ಮತದಾನ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News