×
Ad

ಯುಪಿ ಸಚಿವ ಜಿತಿನ್ ಪ್ರಸಾದ ದಿಲ್ಲಿಗೆ, ಸಿಎಂ ವಿರುದ್ಧ ವರಿಷ್ಠರಿಗೆ ದೂರು : ಆದಿತ್ಯನಾಥ್ ಸಂಪುಟದಲ್ಲಿ ಸಂಕಟ

Update: 2022-07-20 15:14 IST

ಹೊಸದಿಲ್ಲಿ: ಪ್ರಚಂಡ ಬಹುಮತದಿಂದ ಪುನರಾಯ್ಕೆಯಾದ ಕೆಲವೇ ತಿಂಗಳುಗಳಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ''ತಾನು ದಲಿತ ಎಂಬ ಕಾರಣದಿಂದ ಮೂಲೆಗುಂಪು ಮಾಡಲಾಗಿದೆ" ಎಂದು ದೂರಿ ಉತ್ತರ ಪ್ರದೇಶದ ಸಚಿವರೊಬ್ಬರು ತಮ್ಮ ರಾಜೀನಾಮೆ ಪತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಳುಹಿಸಿದ್ದಾರೆ.

ಮತ್ತೊಬ್ಬ ಸಚಿವ ಜಿತಿನ್ ಪ್ರಸಾದ ಅವರು ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಹಾಗೂ  ಹೊಸದಿಲ್ಲಿಯಲ್ಲಿ ಬಿಜೆಪಿ ನಾಯಕತ್ವವನ್ನು ಭೇಟಿಯಾಗಿದ್ದಾರೆ.

ತಮ್ಮ ಇಲಾಖೆಯ  ಅಧಿಕಾರಿಯೊಬ್ಬರನ್ನು ಮುಖ್ಯಮಂತ್ರಿ ಅಮಾನತು ಮಾಡಿದ್ದಕ್ಕೆ ಜಿತಿನ್ ಪ್ರಸಾದ ಸಿಟ್ಟಿಗೆದ್ದಿದ್ದಾರೆ. ಪ್ರಸಾದ ಕಳೆದ ವರ್ಷ ಉತ್ತರಪ್ರದೇಶ ಚುನಾವಣೆಗೆ ತಿಂಗಳುಗಳ ಮೊದಲು ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದರು.

ಪ್ರಸಾದ ಅವರಿಗೆ ಪ್ರಮುಖ ಸಚಿವಾಲಯ  ಲೋಕೋಪಯೋಗಿ ಇಲಾಖೆಯನ್ನು ನೀಡಲಾಗಿತ್ತು. ಆದರೆ ಈ ಇಲಾಖೆಯು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ. ಮುಖ್ಯಮಂತ್ರಿ ಕಚೇರಿಯು ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ ಮತ್ತು ಹಲವಾರು ಅಧಿಕಾರಿಗಳು ವರ್ಗಾವಣೆಗಾಗಿ ಲಂಚದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಮಂಗಳವಾರ, ಉತ್ತರಪ್ರದೇಶ ಸರಕಾರವು ಇಲಾಖಾ ವರ್ಗಾವಣೆಯಲ್ಲಿ ಗಂಭೀರ ಅಕ್ರಮಗಳ ಮೇಲೆ ಐವರು ಹಿರಿಯ ಪಿಡಬ್ಲ್ಯುಡಿ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ವಿಶೇಷ ಕರ್ತವ್ಯದಲ್ಲಿರುವ ಪ್ರಸಾದ ಅವರ ಆಪ್ತ , ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಅನಿಲ್ ಕುಮಾರ್ ಪಾಂಡೆ, ವರ್ಗಾವಣೆ ಹಾಗೂ  ಪೋಸ್ಟಿಂಗ್‌ಗಾಗಿ ಲಂಚ ಪಡೆದ ಆರೋಪ ಹೊತ್ತಿರುವವರಲ್ಲಿ ಸೇರಿದ್ದಾರೆ.

ಮೂಲಗಳ ಪ್ರಕಾರ ಆದಿತ್ಯನಾಥ್ ಅವರು ಪ್ರಸಾದ ಅವರನ್ನು  ಕರೆಸಿ ಪಾಂಡೆ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರಸಾದ ಅವರನ್ನು ತರಾಟೆಗೆ ತೆಗೆದುಕೊಂಡರು.

ನಂತರ ಪ್ರಸಾದ ಅವರು ತಮ್ಮ ದೂರನ್ನು ಸಲ್ಲಿಸಲು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News