ಉಡುಪಿ: ಎಂಟು ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ
Update: 2022-07-20 21:48 IST
ಉಡುಪಿ : ಜಿಲ್ಲೆಯಲ್ಲಿ ಬುಧವಾರ ಎಂಟು ಮಂದಿ ಹೊಸದಾಗಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ೧೦ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಒಟ್ಟು ೨೩ ಸಕ್ರಿಯ ಪ್ರಕರಣಗಳಿವೆ.
ಇಂದು ಪರೀಕ್ಷೆಗೊಳಗಾದ ೪೮೨ ಮಂದಿಯಲ್ಲಿ ಪಾಸಿಟಿವ್ ಬಂದ ಎಂಟು ಮಂದಿಯಲ್ಲಿ ಮೂವರು ಪುರುಷರಾದರೆ ಐವರು ಮಹಿಳೆ. ಸೋಂಕು ಪತ್ತೆಯಾದ ಎಂಟು ಮಂದಿಯಲ್ಲಿ ನಾಲ್ವರು ಉಡುಪಿ ಹಾಗೂ ತಲಾ ಇಬ್ಬರು ಕುಂದಾಪುರ ಮತ್ತು ಕಾರ್ಕಳ ತಾಲೂಕಿನವರು. ಇವರಲ್ಲಿ ಒಬ್ಬರು ಚಿಕಿತ್ಸೆ ಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾದರೆ ಉಳಿದ ಏಳು ಮಂದಿಯೂ ಅವರವರ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ.
ಇಂದು ಉಡುಪಿ ತಾಲೂಕಿನ ೧೮೭, ಕುಂದಾಪುರ ತಾಲೂಕಿನ ೧೭೫ ಹಾಗೂ ಕಾರ್ಕಳ ತಾಲೂಕಿನ ೧೨೦ ಮಂದಿಯನ್ನು ಕೋವಿಡ್‌ಗಾಗಿ ಪರೀಕ್ಷೆಗೊಳ ಪಡಿಸ ಲಾಗಿದೆ. ಇಂದು ೬೮ ಮಂದಿಗೆ ಮೊದಲ ಡೋಸ್, ೧೫೩ ಮಂದಿಗೆ ಎರಡನೇ ಡೋಸ್ ಹಾಗೂ ೬೧೮೭ ಮಂದಿಗೆ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.