×
Ad

ಚಿಗುರು, ಯುವ ಸೌರಭಕ್ಕೆ ಅರ್ಜಿ ಆಹ್ವಾನ

Update: 2022-07-20 21:54 IST

ಉಡುಪಿ, ಜು.೨೦: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ೮ರಿಂದ ೧೪ವರ್ಷದೊಳಗಿನ ಮಕ್ಕಳ ಪ್ರತಿಭಾ ಪ್ರದರ್ಶನಕ್ಕಾಗಿ ಚಿಗುರು ಕಾರ್ಯಕ್ರಮ ಹಾಗೂ ೧೫ರಿಂದ ೩೦ ವರ್ಷದೊಳಗಿನ ಯುವಕಲಾವಿದರಿಂದ ಯುವ ಸೌರಭ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಕಲಾವಿದರು ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಜನಪದ ಕಲಾ ಪ್ರಕಾರ, ಸುಗಮ ಸಂಗೀತ, ಸಮೂಹ ನೃತ್ಯ, ನಾಟಕ, ಯಕ್ಷಗಾನ ಹಾಗೂ ಏಕಪಾತ್ರಾಭಿನಯಕಲಾಪ್ರಕಾರಗಳಿಗೆ ಜುಲೈ೩೧ರೊಳಗೆ ಅರ್ಜಿ  ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿನಗರ, ಮಣಿಪಾಲ ದೂ.ಸಂಖ್ಯೆ:೦೮೨೦-೨೯೮೬೧೬೮ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News