ಸುಡಾನ್: ಜನಾಂಗೀಯ ಘರ್ಷಣೆ: 105 ಮಂದಿ ಮೃತ್ಯು

Update: 2022-07-20 17:22 GMT

ಖಾರ್ಟೌಮ್, ಜು.20: ಸುಡಾನ್‌ನ ಬ್ಲೂನೈಲ್ ರಾಜ್ಯದಲ್ಲಿ ಸಂಭವಿಸಿದ ಮಾರಣಾಂತಿಕ ಜನಾಂಗೀಯ ಘರ್ಷಣೆಯಲ್ಲಿ 105 ಮಂದಿ ಮೃತಪಟ್ಟಿದ್ದು 291 ಮಂದಿ ಗಾಯಗೊಂಡಿರುವುದಾಗಿ ದೇಶದ ಆರೋಗ್ಯ ಇಲಾಖೆ ಹೇಳಿದೆ. ರಾಜ್ಯದ ದಕ್ಷಿಣದಲ್ಲಿರುವ, ಇಥಿಯೋಪಿಯಾ ಮತ್ತು ದಕ್ಷಿಣ ಸುಡಾನ್ ಗಡಿ ಸನಿಹದಲ್ಲಿರುವ ಗ್ರಾಮದಲ್ಲಿ ಬೆರ್ಟಿ ಮತ್ತು ಹವುಸಾ ಎಂಬ ಎರಡು ಜನಾಂಗೀಯ ಗುಂಪುಗಳ ಮಧ್ಯೆ ಜುಲೈ 11ರಂದು ಘರ್ಷಣೆ ಆರಂಭವಾಗಿದೆ. 

ಬಳಿಕ ಸೇನೆಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದ್ದು ಈಗ ಶಾಂತ ಪರಿಸ್ಥಿತಿ ನೆಲೆಸಿದೆ . ಆದರೆ ಘರ್ಷಣೆಯಿಂದ ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದು ಅವರಿಗೆ ನೆಲೆ ಒದಗಿಸುವ ಸವಾಲು ಎದುರಾಗಿದೆ ಎಂದು ಇಲಾಖೆ ಹೇಳಿದೆ. ಸುಮಾರು 17,000 ಮಂದಿ ಗ್ರಾಮದಿಂದ ಗುಳೇ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News