ಕಾಳಿಬೀನ್‌ ನದಿಯಿಂದ ನೀರು ಕುಡಿದ ಎರಡು ದಿನದಲ್ಲೇ ಆಸ್ಪತ್ರೆ ಸೇರಿದ ಪಂಜಾಬ್‌ ಸಿಎಂ

Update: 2022-07-21 13:35 GMT
Photo: Twitter/ramanmann1974

ಹೊಸದಿಲ್ಲಿ: ಸುಲ್ತಾನ್‌ಪುರ ಲೋಧಿಯ ಪವಿತ್ರ ನದಿಯಾದ ಕಾಳಿಬೀನ್‌ನಿಂದ ನೇರವಾಗಿ ಒಂದು ಲೋಟ ನೀರು ಕುಡಿದ ಎರಡು ದಿನಗಳ ನಂತರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಂಗಳವಾರ ತಡರಾತ್ರಿ ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಪ್ರಸ್ತುತ, ಅವರನ್ನು ದಿಲ್ಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ indianexpress.com ವರದಿ ಮಾಡಿದೆ.

ಮಂಗಳವಾರ ರಾತ್ರಿ ಚಂಡೀಗಢದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಅವರು ತೀವ್ರ ಹೊಟ್ಟೆನೋವಿನಿಂದ ಅಸ್ವಸ್ಥರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಅಲ್ಲಿಂದ ವಿಮಾನದ ಮೂಲಕ ಕರೆ ತಂ ದಿಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸಂಪೂರ್ಣ ಭದ್ರತಾ ಸಿಬ್ಬಂದಿಯಿಲ್ಲದೆ ಅವರನ್ನು ರಾಜಧಾನಿಗೆ ಧಾವಿಸಿದ್ದರಿಂದ ಅವರ ಅನಾರೋಗ್ಯದ ಸುದ್ದಿಯನ್ನು ಸರ್ಕಾರವು ನಿಕಟವಾಗಿ ಕಾಪಾಡಿಕೊಂಡಿದೆ.

ಮುಖ್ಯಮಂತ್ರಿಗಳ ಕಛೇರಿಯು ಸಿಎಂ ಆಸ್ಪತ್ರೆಗೆ ದಾಖಲಾದುದನ್ನು ದೃಢಪಡಿಸಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರ ಕಾಯಿಲೆಯು ನದಿಯಿಂದ ನೇರವಾಗಿ ನೀರು ಕುಡಿದ ಬಳಿಕ ಸಂಭವಿಸಿದೆ ಎಂದು ವರದಿಗಳು ಸೂಚಿಸಿದೆ.

ಕಾಳಿಬೀನ್ ಸ್ವಚ್ಛತೆಯ 22ನೇ ವಾರ್ಷಿಕೋತ್ಸವದ ಅಂಗವಾಗಿ ರವಿವಾರ ಸಿಎಂ ಸುಲ್ತಾನ್‌ಪುರ ಲೋಧಿಗೆ ಭೇಟಿ ನೀಡಿದ್ದರು. ನದಿಯಿಂದ ಒಂದು ಲೋಟ ನೀರು ಕುಡಿಯುತ್ತಿರುವ ಮುಖ್ಯಮಂತ್ರಿಯ ಚಿತ್ರಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಅದರ ವಿಡಿಯೋ ಕೂಡ ವೈರಲ್ ಆಗಿತ್ತು. ಬೀನ್ ದಡದಲ್ಲಿ ಸಿಎಂ ಸಸಿ ನೆಟ್ಟಿದ್ದು, ಹಳ್ಳದ ನೀರು ಕುಡಿದಿದ್ದಾರೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News