ಬ್ರೆಝಿಲ್: ಪೊಲೀಸ್ ದಾಳಿಯ: ಸಂದರ್ಭ 18 ಮಂದಿ ಮೃತ್ಯು

Update: 2022-07-22 16:41 GMT

ರಿಯೊಡಿ ಜನೈರೊ, ಜು.22:: : ಬ್ರೆಝಿಲ್‌ನ ರಿಯೊಡಿಜನೈರೊದ  ಕೊಳೆಗೇರಿ ಪ್ರದೇಶದಲ್ಲಿ ಕ್ರಿಮಿನಲ್ ಕೃತ್ಯಕ್ಕೆ ಸಂಚು ಹೂಡುತ್ತಿದ್ದ ಗ್ಯಾಂಗ್ ನ ಸದಸ್ಯರನ್ನು ಬಂಧಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆ ಸಂದರ್ಭ ನಡೆದ ಘರ್ಷಣೆಯಲ್ಲಿ ಕನಿಷ್ಟ 18 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತರಲ್ಲಿ ಒಬ್ಬ ಪೊಲೀಸ್ ಅಧಿಕಾರಿ, ಕ್ರಿಮಿನಲ್ ಗ್ಯಾಂಗ್‌ನ  16 ಸದಸ್ಯರು ಮತ್ತು ಸ್ಥಳದಲ್ಲಿದ್ದ ಮಹಿಳೆ ಸೇರಿದ್ದಾರೆ.

ಬಂದರುಗಳಿಂದ ಸರಕುಗಳನ್ನು ಕದಿಯುವುದು, ಬ್ಯಾಂಕ್ ದರೋಡೆ ಮುಂತಾದ ಅಪರಾಧ ಕೃತ್ಯದಲ್ಲಿ ತೊಡಗಿದ್ದ ಸಂಘಟನೆಯೊಂದು ಕೊಳೆಗೇರಿ ಪ್ರದೇಶದಲ್ಲಿನ ಮನೆಯೊಂದರಲ್ಲಿ ನೆಲೆಸಿದೆ ಎಂಬ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದ್ದರು . ಸುಮಾರು 400 ಅಧಿಕಾರಿಗಳು, 4 ವಿಮಾನ ಹಾಗೂ 10 ಸಶಸ್ತ್ರ ವಾಹನಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ರಿಯೊಡಿ ಜನೈರೊ ನಗರದ ಇತಿಹಾಸದಲ್ಲೇ ಪೊಲೀಸ್ ಕಾರ್ಯಾಚರಣೆ ಸಂದರ್ಭ ಅತ್ಯಧಿಕ ಸಾವು ಸಂಭವಿಸಿದ ಈ ಪ್ರಕರಣದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಸಾಧ್ಯತೆಯಿದೆ ಎಂದು ಬ್ರೆಝಿಲ್‌ನ ಸಾರ್ವಜನಿಕ ರಕ್ಷಕ ಕಚೇರಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News