ವಿನಾಶದತ್ತ ಬೃಹದಾಕಾರವಾಗಿ ಬೆಳೆಯುವ ಕ್ಯಾಲಿಫೋರ್ನಿಯಾ ಮರಗಳು: ವರದಿ

Update: 2022-07-22 17:29 GMT

ನ್ಯೂಯಾರ್ಕ್, ಜು.22: ಬೃಹದಾಕಾರವಾಗಿ ಬೆಳೆಯುವ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಮರಗಳು ಕಳೆದ 37 ವರ್ಷಗಳಿಂದ ಕ್ರಮೇಣ ನಶಿಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಕ್ಯಾಲಿಫೋರ್ನಿಯಾದ ಪರ್ವತ ಪ್ರದೇಶಗಳಲ್ಲಿರುವ ಈ ಬೃಹದಾಕಾರದ ಮರಗಳು ವಾತಾವರಣದಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಪ್ರಮಾಣವನ್ನು ಹೀರಿಕೊಂಡು ಜಾಗತಿಕ ತಾಪಮಾನದ ಇಳಿಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. 

ಆದರೆ ಕಾಡ್ಗಿಚ್ಚು ಹಾಗೂ ಇತರ ಸಮಸ್ಯೆಗಳಿಂದಾಗಿ ಈ ವೃಕ್ಷಸಂಪತ್ತು ನಶಿಸುತ್ತಿದೆ. ಅವುಗಳ ಸ್ಥಾನದಲ್ಲಿ ಕೆಲವೇ ಹೊಸ ಗಿಡಗಳು ಹುಟ್ಟುತ್ತಿವೆ ಎಂದು ಕ್ಯಾಲಿಫೋರ್ನಿಯಾ ವಿವಿಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಕಂಡುಬಂದಿದೆ. 1985ರಿಂದ 2021ರ ಅವಧಿಯಲ್ಲಿ ಈ ಮರಗಳ ಪ್ರಮಾಣ ಯಾವ ರೀತಿ ಕಡಿಮೆಯಾಗುತ್ತಾ ಸಾಗುತ್ತಿದೆ ಎಂಬುದನ್ನು ಲ್ಯಾಂಡ್ಸ್ಯಾಟ್ ಉಪಗ್ರಹ ರವಾನಿಸಿದ ಚಿತ್ರಗಳ ಆಧಾರದಲ್ಲಿ ಅಧ್ಯಯನ ನಡೆಸಿ ಜುಲೈ 6ರಂದು ‘ಅಡ್ವಾನ್ಸಿಂಗ್ ಅರ್ಥ್ ಆ್ಯಂಡ್ ಸ್ಪೇಸ್ ಸೈಯನ್ಸ್’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
 
ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿ ಸಂಭವಿಸಿರುವ ಭಾರೀ ಕಾಡ್ಗಿಚ್ಚನ್ನು ಈ ವೃಕ್ಷಗಳು ಎದುರಿಸಲಾರದೆ ಸಾಯುತ್ತಿವೆ. ಕಳೆದ 4 ದಶಕಗಳಲ್ಲಿ ಭಾರೀ ಬದಲಾವಣೆ ಸಂಭವಿಸಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಕಾದಿದೆ ಎಂದು ವರದಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News