ರಕ್ತದ ಗುಂಪನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಅವಶ್ಯಕ: ಡಾ.ಗಣೇಶ

Update: 2022-07-23 14:36 GMT

ಕಾರವಾರ: ಇತ್ತೀಚಿನ ದಿನಗಳಲ್ಲಿ ಉದ್ಭವಿಸುತ್ತಿರುವ ಕಾಯಿಲೆಗಳು ಹಾಗೂ ಸಂಭವಿಸುತ್ತಿರುವ ಅಪಘಾತಗಳನ್ನು ಪರಿಗಣಿಸಿದಾಗ ಪ್ರತಿಯೊಬ್ಬರೂ ಮುಂಚಿತವಾಗಿ ರಕ್ತದ ಗುಂಪನ್ನು ತಿಳಿದುಕೊಳ್ಳುವುದು ಅಗತ್ಯ. ಏಕೆಂದರೆ ತುರ್ತ ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ರಕ್ತವನ್ನು ನೀಡಿ ಜೀವ ಉಳಿಸಲು ಇದು ಸಹಾಯಕವಾಗುತ್ತದೆ. ಆದ್ದರಿಂದ ಮಕ್ಕಳೂ ಸಹ ತಮ್ಮ ರಕ್ತದ ಗುಂಪನ್ನು ಮುಂಚಿತವಾಗಿಯೇ ತಿಳಿದುಕೊಂಡಿರಬೇಕು. ಇದರಿಂದ ಬೇರೆಯವರಿಗೂ ಸಹಕಾರವಾಗುತ್ತದೆ ಎಂದು ಮಹಿಳಾ ಪದವಿ ಕಾಲೇಜು ಕಾರವಾರದ ಉಪನ್ಯಾಸಕರಾದ ಡಾ.ಗಣೇಶ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಆಝಾದ್ ಯುಥ್ ಕ್ಲಬ್ ಕಾರವಾರದವರು ಸರಸ್ವತಿ ವಿದ್ಯಾಲಯ ಕಾರವಾರದಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡ ಉಚಿತ ರಕ್ತದ ಗುಂಪು ತಪಾಸಣೆಯ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು.ಶೇಖ್ ಮಾತನಾಡಿ ರಕ್ತದಾನವು ಶ್ರೇಷ್ಠ ದಾನವಾಗಿದೆ. ರಕ್ತದ ಗುಂಪನ್ನು ಮುಂಚಿತವಾಗಿಯೇ ತಿಳಿದುಕೊಂಡಿರುವು ದರಿಂದ ಮುಂದೆ ರಕ್ತದ ಅವಶ್ಯಕತೆ ಇದ್ದಾಗ ಹಾಗೂ ದಾನಮಾಡುವಾಗ ಸಹಾಯಕವಾಗುತ್ತದೆ ಜೊತೆಗೆ ಇದು ಜೀವ ಉಳಿಸುವ ಶಕ್ತಿ ಪಡೆದಿದೆ ಎಂದು ಹೇಳಿದರು. ಪ್ರಾರಂಭದಲ್ಲಿ ದೈಹಿಕ ಶಿಕ್ಷಕ ಮಹಾದೇವ ರಾಣೆ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಆಝಾದ್ ಯುಥ್ ಕ್ಲಬ್‍ನ ಅಧ್ಯಕ್ಷ ಮೊಹಮ್ಮದ್ ಉಸ್ಮಾನ್ ಶೇಖ್ ವಂದಿಸಿದರು.

ಇದೇ ಸಂದರ್ಭದಲ್ಲಿ ಸುಮಾರು 78 ಮಕ್ಕಳಿಗೆ ರಕ್ತದ ಗುಂಪು ತಪಾಸಣೆ ಮಾಡಲಾಯಿತು.ಪ್ರಯೋಗ ಶಾಲಾ ತಜ್ಞರಾದ ಸುವರ್ಣಾ ನಾಯ್ಕ ಮತ್ತು ವಿದ್ಯಾ ನಾಯ್ಕ ಸಹಕರಿಸಿದರು. ಈಕಾರ್ಯಕ್ರಮದಲ್ಲಿ ಕ್ಲಬ್‍ನ ಮಾಜಿ ಅಧ್ಯಕ್ಷ ರೋಹನ ಭುಜಲೆ, ಆರೋಗ್ಯ ಇಲಾಖೆಯ ವೈದ್ಯರಾದ ಡಾ.ನಮನ್, ಡಾ.ಮುಸ್ತಾನ್, ಶಾಲೆಯ ಶಿಕ್ಷಕರಾದ ಮಾಯಾ ನಾಯ್ಕ, ಶೀಲಾ ಗಾಂವಕರ್,  ಸುಕನ್ಯಾ ನಾಯ್ಕ, ಶಿವಾನಂದ ಬಡಿಗೇರ, ಪೂಜಾರು ಮತ್ತಿತರರು ಉಪಸ್ಥಿತರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News