ಲುಲುಮಾಲ್‌ ನಲ್ಲಿ ನಮಾಝ್‌ ಪ್ರಕರಣ: ಒಟ್ಟು ಐವರನ್ನು ಬಂಧಿಸಿದ ಉತ್ತರಪ್ರದೇಶ ಪೊಲೀಸರು

Update: 2022-07-23 14:57 GMT

ಲಕ್ನೋ: ಲುಲು ಶಾಪಿಂಗ್ ಮಾಲ್ ಆವರಣದಲ್ಲಿ ಅನಧಿಕೃತವಾಗಿ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಶನಿವಾರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಐವರ ಬಂಧನವಾಗಿದೆ.

ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ದಕ್ಷಿಣ) ರಾಜೇಶ್ ಕುಮಾರ್ ಶ್ರೀವಾಸ್ತವ್ ಮಾತನಾಡಿ, ಲಕ್ನೋದ ಚೌಪತಿಯಾ ನಿವಾಸಿ ಮೊಹಮ್ಮದ್ ಆದಿಲ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಮಾಲ್ ಆವರಣದಲ್ಲಿ ಅನುಮತಿಯಿಲ್ಲದೆ ಧಾರ್ಮಿಕ ಪ್ರಾರ್ಥನೆ ಸಲ್ಲಿಸಿದವರಲ್ಲಿ ಬಂಧಿತ ಆರೋಪಿಯೂ ಇದ್ದಾನೆ ಎಂದು ಅವರು ಹೇಳಿದ್ದಾರೆ. ಮೂರು ದಿನಗಳ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತ್ತು.

 ಜುಲೈ 13 ರಂದು ಲುಲು ಮಾಲ್‌ನಲ್ಲಿ ನಮಾಝ್‌ ಮಾಡುತ್ತಿರುವ ತಂಡದ ವಿಡಿಯೋ ಒಂದು ವೈರಲ್‌ ಆಗಿತ್ತು. ಅದರ ಬೆನ್ನಲ್ಲೇ ಬಲಪಂಥೀಯ ಹಿಂದುತ್ವವಾದಿಗಳು ಮಾಲ್‌ ಅನ್ನು ಬಹಿಷ್ಕರಿಸಲು ಅಭಿಯಾನ ಆರಂಭಿಸಿದ್ದರು. ಅಲ್ಲದೆ, ಮಾಲ್‌ನ ಆವರಣದಲ್ಲಿ ಹನುಮಾನ್‌ ಚಾಲಿಸಾ, ರಾಮಾಯಣ ಪಠಿಸಲು ಪ್ರಯತ್ನಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News