"ಮಾಸ್ಕ್ ಗಳು ನಮ್ಮ ಭಾಷೆಯ ಬಳಕೆಯನ್ನು ಬದಲಿಸಿವೆ, ಮಕ್ಕಳಿಂದ ಮಾತುಗಳ ಗ್ರಹಿಕೆಯ ಮೇಲೆ ಪರಿಣಾಮ ಬೀರುತ್ತಿವೆ"
ಹೊಸದಿಲ್ಲಿ,ಜು.24: ಈಗ ಹಲವಾರು ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲವಾದರೂ ಕೋವಿಡ್ ಹರಡುವಿಕೆಯನ್ನು ಸೀಮಿತಗೊಳಿಸುವ ಸಾಧನವಾಗಿ ಅದು ಬಳಕೆಯಲ್ಲಿದೆ. ಸಂವಹನವನ್ನು ಕಷ್ಟವಾಗಿಸುತ್ತವೆ ಎನ್ನುವುದು ಮಾಸ್ಕ್ ಗಳ ಕುರಿತು ಟೀಕೆಗಳಲ್ಲಿ ಒಂದಾಗಿದೆ. ಉದಾಹರಣೆಗೆ ಅಮೆರಿಕದ ಶಿಕ್ಷಣ ಇಲಾಖೆಯ ಇತ್ತೀಚಿನ ವರದಿಯೊಂದು ಸಾಂಕ್ರಾಮಿಕದ ಸಂದರ್ಭದಲ್ಲಿ ತರಗತಿಗಳಲ್ಲಿ ಮಾಸ್ಕ್ ಧರಿಸಿದ್ದರಿಂದ ಸಂವಹನದ ತೊಂದರೆಗಳು ಉಂಟಾಗುತ್ತವೆ ಎಂದು ಹೇಳಿದೆ.
theconversation.com ಆದಾಗ್ಯೂ ನಡೆಸಿರುವ ಸಂಶೋಧನೆಯು ಯಾವುದೇ ಶ್ರವಣ ಮತ್ತು ಭಾಷೆಯ ತೊಂದರೆಗಳಿಲ್ಲದ ಜನರಿಗೆ ಮಾತುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಾಸ್ಕ್‌ಗಳ ಪರಿಣಾಮವು ಸೌಮ್ಯವಾಗಿದೆ ಎನ್ನುವುದನ್ನು ತೋರಿಸಿದೆ. ಮಾಸ್ಕ್‌ಗಳು ನಾವು ಮಾತುಗಳನ್ನು ಅರ್ಥೈಸಿಕೊಳ್ಳುವುದನ್ನು ನಿಧಾನವಾಗಿಸುತ್ತದೆಯಾದರೂ,ಅವು ತಪ್ಪು ತಿಳುವಳಿಕೆಗಳಿಗೆ ಕಾರಣವಾಗುವುದು ತುಂಬ ಅಪರೂಪ. ಅಲ್ಲದೆ ಮಾಸ್ಕ್ ಎಲ್ಲ ಸಂದರ್ಭಗಳಲ್ಲೂ ನಮ್ಮ ತಿಳುವಳಿಕೆಯ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಸಾಮಾನ್ಯವಾಗಿ ಸಂಭಾಷಣೆಯ ವಿಷಯವು ಅನಿರೀಕ್ಷಿತವಾಗಿದ್ದಾಗ ಮಾತ್ರ ಅವು ಪರಿಣಾಮವನ್ನುಂಟು ಮಾಡುತ್ತವೆ.
theconversation.com ನಡೆಸಿದ್ದ ಅಧ್ಯಯನದಲ್ಲಿ ಯಾವುದೇ ಶ್ರವಣ ಅಥವಾ ಭಾಷೆಯ ತೊಂದರೆಗಳಿಲ್ಲದ 8ರಿಂದ 12 ವರ್ಷ ವಯೋಮಾನದ 26 ಮಕ್ಕಳು ಮತ್ತು 26 ವಯಸ್ಕರು ಪಾಲ್ಗೊಂಡಿದ್ದರು.
ಮಕ್ಕಳು ಮಾಸ್ಕ್ ಧರಿಸಿ ಆಡುವ ಮಾತುಗಳು ಸಾಮಾನ್ಯಕ್ಕಿಂತ ಶೇ.8ರಷ್ಟು ಕಡಿಮೆ ನಿಖರ ಮತ್ತು ಶೇ.8ರಷ್ಟು ಹೆಚ್ಚು ನಿಧಾನವಾಗಿರುತ್ತವೆ ಹಾಗೂ ವಯಸ್ಕರು ಮಾಸ್ಕ್ ಧರಿಸಿ ಆಡುವ ಮಾತುಗಳು ಸಾಮಾನ್ಯಕ್ಕಿಂತ ಶೇ.6.5 ಕಡಿಮೆ ನಿಖರ ಮತ್ತು ಶೇ.18ರಷ್ಟು ಹೆಚ್ಚು ನಿಧಾನವಾಗಿರುತ್ತವೆ ಎನ್ನುವುದು ಸಂಶೋಧನೆಯಲ್ಲಿ ಕಂಡು ಬಂದಿದೆ.ಅಧ್ಯಯನದಲ್ಲಿ ವಯಸ್ಕರು ಮಾತುಗಳಿಗೆ ಮಕ್ಕಳಿಗಿಂತ ಹೆಚ್ಚು ವೇಗವಾಗಿ ಪ್ರತಿಕ್ರಿಯಿಸಿದ್ದರು. ಮಕ್ಕಳಿಗೆ ಹೋಲಿಸಿದರೆ ಅವರ ಗ್ರಹಿಕೆ ಮಾಸ್ಕ್ ಧರಿಸಿ ಆಡಿದ ಮಾತುಗಳಿಗೆ ಶೇ.23ರಷ್ಟು ಮತ್ತು ಸಾಮಾನ್ಯ ಮಾತುಗಳಿಗೆ ಶೇ.29ರಷ್ಟು ಹೆಚ್ಚು ವೇಗವಾಗಿತ್ತು.
ಮಾಸ್ಕ್ ಗಳು ಎರಡು ರೀತಿಯಲ್ಲಿ ನಮ್ಮ ಭಾಷೆಯ ಬಳಕೆಯನ್ನು ಬದಲಿಸುತ್ತವೆ. ಅವು ಮಾತನಾಡುವವನ ಧ್ವನಿಯನ್ನು ಬದಲಿಸುತ್ತವೆ ಮತ್ತು ಅವರ ಮಾತುಗಳು ಧ್ವನಿಗುಂದಿವೆ ಎಂಬ ಭಾವನೆಯನ್ನು ಮೂಡಿಸಬಹುದು. ಹೆಚ್ಚಿನ ಮಾಸ್ಕ್‌ಗಳಲ್ಲಿ ಮಾತನಾಡುವವನ ತುಟಿಗಳ ಚಲನೆಯು ಕಾಣಿಸುವುದಿಲ್ಲ.
ಅಚ್ಚರಿದಾಯಕವಾಗಿ ಸಂಶೋಧನೆಯು ನಾವು ಮಾತನಾಡುವಾಗ ಮಾಸ್ಕ ನಮ್ಮ ಧ್ವನಿಯನ್ನು ಬದಲಿಸುವ ರೀತಿಯು ಮಾತುಗಾರನ ತುಟಿಗಳ ಗೋಚರಕ್ಕೆ ಅಡೆತಡೆಗಿಂತ ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತವೆ ಎನ್ನುವುದನ್ನು ತೋರಿಸಿದೆ. ಮಾತನಾಡುವವನನ್ನು ಆಲಿಸುವಾಗ ಮತ್ತು ನೋಡುತ್ತಿರುವಾಗ ದೃಷ್ಟಿಗೋಚರ ಮಾಹಿತಿಯನ್ನು ಧ್ವನಿಯೊಂದಿಗೆ ಸಂಯೋಜಿಸುವಲ್ಲಿ ಮಕ್ಕಳ ಸಾಮರ್ಥ್ಯ ವಯಸ್ಕರಿಗಿಂತ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಪರಿಣಾಮವಾಗಿ ಮಾಸ್ಕ್ ಧರಿಸಿದ ಮಾತುಗಾರನ ತುಟಿಗಳ ಚಲನೆಯನ್ನು ವೀಕ್ಷಿಸುವುದು ಹೇಳಲಾಗುತ್ತಿರುವುದನ್ನು ಅವರು ಎಷ್ಟು ನಿಖರವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವದರ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.
ಕುತೂಹಲಕಾರಿಯಾಗಿ ಸಂಭಾಷಣೆಯ ವಿಷಯವು ಮುಖ್ಯವಾಗಿರುತ್ತದೆ. ನಮ್ಮ ಎದುರಿನಲ್ಲಿರುವ ವ್ಯಕ್ತಿ ಏನನ್ನು ಹೇಳಲಿದ್ದಾನೆ ಎನ್ನುವುದು ನಾವು ನಿರೀಕ್ಷಿಸಿದ್ದಾಗ ಮಾಸ್ಕ್ ನಮ್ಮ ಅರ್ಥೈಸುವಿಕೆಯ ಮೇಲೆ ಕಡಿಮೆ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಸಂಭಾಷಣೆಯ ಸಂದರ್ಭವು ಗೊತ್ತಿರುವುದು ಭಾಷೆಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ತಿಳಿದುಕೊಳ್ಳಲು ನೆರವಾಗುತ್ತದೆ.
ಸಂದರ್ಭೋಚಿತ ಮಾಹಿತಿಯನ್ನು ನೀಡುವುದರಿಂದ ಮಾಸ್ಕ್ ಧರಿಸಿ ಆಡುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ತೋರಿಸಿದೆ. ಹೆಚ್ಚಿನ ಸಂದರ್ಭೋಚಿತ ಮಾಹಿತಿಗಳಿದ್ದಾಗ ಮಕ್ಕಳು ಮತ್ತು ವಯಸ್ಕರು ಮಾಸ್ಕ್ ಧರಿಸಿ ಆಡುವ ಮಾತುಗಳನ್ನು ಸಾಮಾನ್ಯ ಮಾತುಗಳಿಗಿಂತ ಕೇವಲ ಶೇ.1ರಷ್ಟು ಕಡಿಮೆ ನಿಖರವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಮಾಸ್ಕ್ ಧರಿಸಿ ಸಂವಹನಗಳು ಏಕೆ ಕಷ್ಟವಾಗುತ್ತವೆ ಎನ್ನುವುದನ್ನು ಇದು ವಿವರಿಸುತ್ತದೆ.ಮಾಸ್ಕ್‌ಗಳು ಮಕ್ಕಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು ಎಂಬ ಭೀತಿಗಳಿದ್ದರೂ,ಶಿಕ್ಷಕರು ಸಂದರ್ಭೋಚಿತ ಮಾಹಿತಿಗಳನ್ನು ಹೆಚ್ಚಿಸಲು ಹಲವಾರು ತಂತ್ರಗಳನ್ನು ಬಳಸುತ್ತಾರೆ.
ಈ ತಂತ್ರಗಳು ಏನನ್ನು ಹೇಳಲಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಮತ್ತು ಮಾಸ್ಕ್ ನ ಪರಿಣಾಮಗಳನ್ನು ಸರಿದೂಗಿಸಲು ಮಕ್ಕಳಿಗೆ ನೆರವಾಗುತ್ತವೆ.