ಉಕ್ರೇನ್‍ನ 2ನೇ ಅತಿದೊಡ್ಡ ವಿದ್ಯುತ್ ಘಟಕ ವಶಪಡಿಸಿಕೊಂಡ ರಷ್ಯಾ

Update: 2022-07-28 02:29 GMT
ಫೈಲ್‌ ಫೋಟೊ

ಕೀವ್: ಕಳೆದ ಐದು ತಿಂಗಳಿನಿಂದ ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ, ಉಕ್ರೇನ್‍ನ ಎರಡನೇ ಅತಿದೊಡ್ಡ ವಿದ್ಯುತ್ ಘಟಕವನ್ನು ಬುಧವಾರ ವಶಪಡಿಸಿಕೊಂಡಿದೆ. ಜತೆಗೆ ಉಕ್ರೇನ್ ದಕ್ಷಿಣ ಭಾಗದ ಮೂರು ಪ್ರದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಪಡೆಯನ್ನು ನಿಯೋಜಿಸುತ್ತಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹಿರಿಯ ಸಲಹೆಗಾರರು ಪ್ರಕಟಿಸಿದ್ದಾರೆ.

ಸೋವಿಯತ್ ಯುಗದ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವ ವುಲೇರಿಕ್ ಘಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇದಕ್ಕೂ ಮುನ್ನ ರಷ್ಯಾ ಬೆಂಬಲಿತ ಪಡೆಗಳು ಈ ಮೊದಲು ಪ್ರಕಟಿಸಿದ್ದವು.

"ಅವರ ಪುಟ್ಟ ಆಯಕಟ್ಟಿನ ಲಾಭವನ್ನು ಸಾಧಿಸಿದ್ದು, ಅವರು ವುಲೇರಿಕ್ ಘಟಕ ವಶಪಡಿಸಿಕೊಂಡಿದ್ದಾರೆ" ಎಂದು ಅಧ್ಯಕ್ಷರ ಸಲಹೆಗಾರ ಒಲೆಕ್ಸಿ ಅರೆಸ್ಟೊವಿಚ್, ಯೂಟ್ಯೂಬ್‍ನಲ್ಲಿ ಪೋಸ್ಟ್ ಮಾಡಿದ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News