×
Ad

ಮಧ್ಯಪ್ರದೇಶ: 3,419 ಕೋಟಿ ರೂ.ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ಕುಟುಂಬ

Update: 2022-07-28 10:36 IST

ಹೊಸದಿಲ್ಲಿ: ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿಯೊಬ್ಬರು  3,419 ಕೋಟಿರೂ. ವಿದ್ಯುತ್ ಬಿಲ್ ಪಡೆದ ನಂತರ ಆಘಾತಕ್ಕೊಳಗಾಗಿದ್ದು, ಈ ಎಡವಟ್ಟಿಗೆ  ಮಧ್ಯಪ್ರದೇಶದ ಸರಕಾರಿ ವಿದ್ಯುತ್ ಕಂಪನಿಯ ಮೂವರು ಅಧಿಕಾರಿಗಳು ಶಿಸ್ತು ಕ್ರಮವನ್ನು ಎದುರಿಸುತ್ತಿದ್ದಾರೆ.

ಗ್ವಾಲಿಯರ್‌ನ ಶಿವ ವಿಹಾರ್ ಕಾಲೋನಿಯ ನಿವಾಸಿ ಪ್ರಿಯಾಂಕಾ ಗುಪ್ತಾ ಅವರು ಮಾಸಿಕ 3,419,53,25,293 ಕೋಟಿ ರೂ.  ವಿದ್ಯುತ್ ಬಿಲ್ ಪಡೆದ ನಂತರ ಒಂದು ಕ್ಷಣ ಆಘಾತಕ್ಕೊಳಗಾದರು. ಈ ಬಿಲ್ ವಿಚಾರ ತಿಳಿದು ಪ್ರಿಯಾಂಕಾ ಅವರ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು.

ಮಧ್ಯಪ್ರದೇಶ ಸರಕಾರ ನಡೆಸುತ್ತಿರುವ ವಿದ್ಯುತ್ ಕಂಪನಿಯು "ಮಾನವ ದೋಷ" ದಿಂದಾಗಿ ಹೀಗೆ ಆಗಿದೆ ಎಂದು ಹೇಳಿಕೊಂಡಿದ್ದು, ನಂತರ ಸರಿಪಡಿಸಿದ 1,300 ರೂ. ಬಿಲ್ ಅನ್ನು ನೀಡಿತು.

ರಾಜ್ಯ ಸರಕಾರವು ಸಂಬಂಧಪಟ್ಟ ಸಿಬ್ಬಂದಿಯನ್ನು ವಜಾಗೊಳಿಸಿದ್ದು, ವಿದ್ಯುತ್ ಕಂಪನಿಯ ಸಹಾಯಕ ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿದೆ ಹಾಗೂ  ಕ್ಷೇತ್ರದ ಕಿರಿಯ ಎಂಜಿನಿಯರ್‌ಗೆ ಶೋಕಾಸ್ ನೋಟಿಸ್ ನೀಡಿದೆ.

 "ನಾನು ಜುಲೈ 20 ರ ದಿನಾಂಕದ ಬಿಲ್‌ ಮೊತ್ತವನ್ನು  ವಿದ್ಯುತ್ ವಿತರಣಾ ಕಂಪನಿಯ ವೆಬ್‌ಸೈಟ್‌ನಿಂದ ಮರಯ ಪರಿಶೀಲಿಸಿದ್ದೇನೆ, ಆದರೆ ಅದೇ ಬಿಲ್ ಅನ್ನು ಅಲ್ಲಿಯೂ ಅಪ್‌ಲೋಡ್ ಮಾಡಲಾಗಿತ್ತು.  ನನ್ನ ಮಾವ ರಾಜೇಂದ್ರ ಪ್ರಸಾದ್ ಗುಪ್ತಾ ಸೋಮವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ’’ ಎಂದು ಪ್ರಿಯಾಂಕಾ ಅವರ ಪತಿ ಸಂಜಯ್ ಹೇಳಿದ್ದಾರೆ.

ವಿದ್ಯುತ್ ಕಂಪನಿಯ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಆಘಾತಕಾರಿ ಬಿಲ್‌ಗೆ ಸಾಫ್ಟ್‌ವೇರ್ ದೋಷವನ್ನು ದೂಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News