×
Ad

ಬಿಜೆಪಿ ಸಹಾಯಕ್ಕೆ ಸದಾ ಸಿದ್ಧವಿರುವ ಕಾಂಗ್ರೆಸ್ ನಾಯಕ ಚೌಧರಿ: ತೃಣಮೂಲ ಕಾಂಗ್ರೆಸ್ ಆರೋಪ

Update: 2022-07-28 14:20 IST

ಹೊಸದಿಲ್ಲಿ: ಕಾಂಗ್ರೆಸ್‌ ಮುಖಂಡ ಅಧೀರ್‌ ರಂಜನ್‌ ಚೌಧರಿಯವರು ಲೋಕಸಭೆಯಲ್ಲಿ ʼರಾಷ್ಟ್ರಪತ್ನಿʼ ಎಂಬ ಹೇಳಿಕೆಯನ್ನು ಉಚ್ಛರಿಸಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಅವರು ಮಾತ್ರವಲ್ಲದೇ ಸೋನಿಯಾ ಗಾಂಧಿ ಕೂಡಾ ಕ್ಷಮೆ ಯಾಚಿಸಬೇಕೆಂದು ಆಡಳಿತ ಪಕ್ಷ ಪಟ್ಟು ಹಿಡಿದಿದೆ. ಈ ನಡುವೆ ತೃಣಮೂಲ ಕಾಂಗ್ರೆಸ್‌ ಕೂಡಾ ಅಧೀರ್‌ ರಂಜನ್‌ ಚೌಧರಿ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿದ ತೃಣಮೂಲ ಕಾಂಗ್ರೆಸ್‌ ಮುಖಂಡ ಸಾಕೇತ್‌ ಗೋಖಲೆ, "ಲೋಕಸಭೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದರ ಕುರಿತು ಅಧೀರ್‌ ರಂಜನ್‌ ಚೌಧರಿಯವರ ಟ್ರ್ಯಾಕ್‌ ರೆಕಾರ್ಡ್‌ ಗಳಿವೆ. ಗೌರವಾನ್ವಿತ ರಾಷ್ಟ್ರಪತಿಗಳನ್ನು ಅವರು ಇಂದು ರಾಷ್ಟ್ರಪತ್ನಿ ಎಂದು ಹೇಳಿದ್ದು ನಿಜಕ್ಕೂ ಶೋಚನೀಯವಾಗಿದ್ದು, ಇದು ಸಂಸದರ ಪ್ರತಿಭಟನೆ ಮತ್ತು ಬೆಲೆಯೇರಿಕೆಯ ಕುರಿತು ದಿಕ್ಕುತಪ್ಪಿಸಿ ಗೊಂದ ಸೃಷ್ಟಿಸುವ ಹವಣಿಕೆಯಾಗಿತ್ತು" ಎಂದು ಸಾಕೇತ್‌ ಗೋಖಲೆ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News