ನೀವು ಉತ್ತರ ಪ್ರದೇಶದ ಫ್ಯಾಕ್ಟ್ ಚೆಕ್ ಮಾತ್ರ ಯಾಕೆ ಮಾಡ್ತೀರಿ ?

Update: 2022-07-28 13:06 GMT

ಪ್ರಶ್ನೆ: ನೀವು ಬೆಂಗಳೂರಿಗೆ ಮರಳಿದ್ದೀರಿ. ನೀವು ಮನೆಗೆ ಮರಳಿದ ನಂತರ ಪರಿಸ್ಥಿತಿ ಹೇಗಿದೆ?

ಝುಬೈರ್: ತುಂಬಾ ಬಿಝಿ . ನನ್ನನ್ನು ಸಾಕಷ್ಟು ಹಿತೈಷಿಗಳು ಬಂದು ಭೇಟಿ ಮಾಡಿದ್ದಾರೆ.  ಕುಟುಂಬದ ಬಹಳಷ್ಟು ಜನ , ನನ್ನ ನೆರೆಹೊರೆಯವರು ನನ್ನನ್ನು ಭೇಟಿಯಾಗಿದ್ದಾರೆ. ಅವರಲ್ಲಿ ಕೆಲವರಿಗೆ ನಾನು ಝುಬೈರ್‌ ಅಂತಷ್ಟೇ ಗೊತ್ತಿತ್ತು. ಆಲ್ಟ್ ನ್ಯೂಸ್‌ನ ಝುಬೈರ್ ಎಂದು ತಿಳಿದಿರಲಿಲ್ಲ.  ರಾತ್ರಿ 12 ರವರೆಗೆ ಭೇಟಿಗೆ ಜನ ಬರುತ್ತಿದ್ದಾರೆ . ನನ್ನ ಕುಟುಂಬದ ಅನೇಕರಿಗೆ ನನ್ನ ಕೆಲಸದ ನಿಜವಾದ ಸ್ವರೂಪ ತಿಳಿದಿರಲಿಲ್ಲ. ನನ್ನ ಬಂಧನದ ನಂತರವೇ ನಾನು ಏನು ಮಾಡುತ್ತಿದ್ದೇ ನೆ ಎಂಬ ಸಂಪೂರ್ಣ ವಿಷಯ ಅವರಿಗೆ ತಿಳಿಯಿತು.

ಪ್ರಶ್ನೆ: ಅವರಿಂದ ಸಾಕಷ್ಟು ಬೆಂಬಲ ಸಿಕ್ಕಿದೆಯೇ? ಅಥವಾ ತೊಂದರೆಯಿಂದ ಹೊರಗುಳಿಯಲು ನಿಮಗೆ ಸಾಕಷ್ಟು ಉಪದೇಶಗಳು ಬಂತೆ? ನೀವು ಏನು ಬರೆಯುತ್ತೀರಿ, ಏನು ಹೇಳುತ್ತೀರಿ ಇತ್ಯಾದಿಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದು ಕುಟುಂಬ ಹೇಳುತ್ತಿದೆಯೇ ?

ಝುಬೈರ್: ಹೆಚ್ಚಿನ ಜನರು ತುಂಬಾ ಹೆಮ್ಮೆ ಮತ್ತು ಸಂತೋಷಪಟ್ಟಿದ್ದಾರೆ. ನನ್ನನ್ನು ಭೇಟಿಯಾಗಲು ಬಂದ ಎಲ್ಲರಿಗೂ ನನ್ನ ಕೆಲಸದ ಕುರಿತು ಹೆಮ್ಮೆ, ಸಂತೋಷವಿದೆ ಎಂದು ಹೇಳಬಲ್ಲೆ.ಅದಾಗ್ಯೂ, ಪ್ರತಿಯೊಂದು ಕುಟುಂಬದಲ್ಲಿಯೂ ಇರುವಂತೆ, ಕೆಲವು ಹಿರಿಯರು ನನ್ನಲ್ಲಿ ಜಾಗರೂಕರಾಗಿರುವಂತೆ ಹೇಳಿದ್ದಾರೆ.  "ಈ ಸರ್ಕಾರದ ಪರಿಸ್ಥಿತಿ ಹೇಗಿದೆ ಎಂದು ನಿನಗೆ ತಿಳಿದಿದೆ. ನೀವು (ಝುಬೈರ್) ಮಾಡುತ್ತಿರುವುದನ್ನು  ನಿಲ್ಲಿಸಲು ನಾವು ಬಯಸುವುದಿಲ್ಲ ಆದರೆ ನೀವು ಏನು ಹೇಳುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ” ಎಂದು ಸಲಹೆ ನೀಡಿದ್ದಾರೆ. ಆದರೂ, ನನ್ನನ್ನು ತಿಳಿದಿರುವ ಜನರು ತುಂಬಾ ಈ ಬಗ್ಗೆ ಹೆಮ್ಮೆಪಡುತ್ತಾರೆ

ಪ್ರಶ್ನೆ: ನೀವು ಜಾಮೀನು ಪಡೆಯುತ್ತೀರಿ ಎಂದು ನೀವು ಅಂದುಕೊಂಡಿದ್ರಾ? ಅಥವಾ ನೀವು ದೀರ್ಘಾವಧಿಗೆ ಜೈಲಲ್ಲಿ ಇರಬೇಕಾಗಬಹುದೆಂದು ಯೋಚಿಸಿದ್ರಾ?

ಝುಬೈರ್: ಆರಂಭದಲ್ಲಿ, ದಿಲ್ಲಿ ಪೊಲೀಸರು ನನ್ನನ್ನು ಬಂಧಿಸಿದಾಗ, ನಾನು ವಕೀಲರೊಂದಿಗೆ ಮಾತನಾಡಿದ್ದೆ. ಪ್ರಕರಣ  ತುಂಬಾ ದುರ್ಬಲವಾಗಿತ್ತು, ಆದರೂ ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ಖಚಿತವಾಗಿತ್ತು, ಕನಿಷ್ಠ 14 ದಿನಗಳ ನಂತರ ನನಗೆ ಜಾಮೀನು ಸಿಗುತ್ತದೆ ಎಂದುಕೊಂಡಿದ್ದೆ. ನಂತರ ಯುಪಿ ಪೊಲೀಸರ ಪ್ರವೇಶವಾಯಿತು. ಸೀತಾಪುರ ಪ್ರಕರಣವೂ ಸಾಕಷ್ಟು ದುರ್ಬಲವಾಗಿತ್ತು, ನಂತರ ನನ್ನ ವಿರುದ್ಧ ಅನೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ನಾನು ತಿಹಾರ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಎಸ್‌ಐಟಿ ರಚನೆಯಾಗುತ್ತಿದೆ ಎಂದು ಪತ್ರಿಕೆಯಲ್ಲಿ ಓದಿದೆ. ಅವರು ದೀರ್ಘವಾದ ಯೋಜನೆಯನ್ನೇ ಹಾಕಿಕೊಂಡಿದ್ದಾರೆ ಎಂದು ಆಗ ನಾನು ಯೋಚಿಸಿದೆ.

ಪ್ರಶ್ನೆ: ಉತ್ತರ ಪ್ರದೇಶ ಪೊಲೀಸರು ನಿಮ್ಮನ್ನು ಸೀತಾಪುರಕ್ಕೆ ಕರೆದೊಯ್ದರು. ಅದರ ಬಗ್ಗೆ ಸ್ವಲ್ಪ ಹೇಳಿ.

 ಅದು ಸೀತಾಪುರ ಲಾಕಪ್‌ನ ಅದೇ ಕಾಂಪೌಂಡ್‌ನಲ್ಲಿ ಒಂದು ರೀತಿಯ ಕಚೇರಿ ಜಾಗದಲ್ಲಿತ್ತು. ಅವರು ನನ್ನನ್ನು 35-40 ಪೊಲೀಸರಿದ್ದ ಕೋಣೆಗೆ ಕರೆದೊಯ್ದರು. ಅವರು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೂ ನನ್ನನ್ನು ಪ್ರಶ್ನಿಸಿದರು. ಅದು ಸ್ವಲ್ಪ ಆತಂಕಕಾರಿಯಾಗಿತ್ತು. 12 ಜನರು ನನ್ನನ್ನು ಸುತ್ತುವರೆದಿದ್ದರು.  ಪ್ರಶ್ನೆಗಳ ಸುರಿಮಳೆಗೈದರು. ಇಬ್ಬಿಬ್ಬರು ವ್ಯಕ್ತಿಗಳ ಒಂದು ಗುಂಪನ್ನು ರಚಿಸಿದ್ದರು, ನಾನು ಅಂತಹ ಆರು ಗುಂಪುಗಳಿಂದ ಪ್ರಶ್ನೆಗಳನ್ನು ಎದುರಿಸಿದ್ದೇನೆ. ನಡು ನಡುವೆ  ಹಿರಿಯ ಅಧಿಕಾರಿಗಳು ಸಹ ಪ್ರಶ್ನಿಸಿದ್ದರು. ಉನ್ನತ ಅಧಿಕಾರಿಯೊಬ್ಬರು ಒಂದು ಹಂತದಲ್ಲಿ ನನ್ನ ಬಳಿಗೆ ಬಂದು ಚಿಂತಿಸಬೇಡಿ, ವಿಚಾರಣೆಯು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತದೆ, ಅಲ್ಲದೆ, ನಾನು ಬಯಸದಿದ್ದರೆ ನಾನು ಉತ್ತರಿಸಬೇಕಾಗಿಲ್ಲ ಎಂದು ತಿಳಿಸಿದರು.

ಪ್ರಶ್ನೆ: (ನಿಮ್ಮನ್ನು ಕೇಳಿದ) ಪ್ರಶ್ನೆಗಳ ಬಗ್ಗೆ ಹೇಳಿ.

ಬಹುತೇಕ ಎಲ್ಲರದ್ದೂ ಒಂದೇ ರೀತಿಯ ಪ್ರಶ್ನೆ ಇತ್ತು. ಆದರೆ ಅದನ್ನು ಬೇರೆ ಬೇರೆ ರೀತಿಯಲ್ಲಿ ಕೇಳಲಾಯಿತು. ಆರಂಭದಲ್ಲಿ, ನನ್ನ ಬಾಲ್ಯ, ನಾನು ಎಲ್ಲಿ ಜನಿಸಿದೆ, ನನ್ನ ಸ್ನೇಹಿತರು, ನನ್ನ ನೆರೆಹೊರೆಯವರು, ನನ್ನ ಇಂಜಿನಿಯರಿಂಗ್ ದಿನಗಳು, ನನ್ನ ಪ್ರತಿಯೊಬ್ಬ ಸಂಬಂಧಿಕರ ಹೆಸರುಗಳು, ಅವರಲ್ಲಿ ಎಷ್ಟು ಮಂದಿ ವಿದೇಶದಲ್ಲಿದ್ದಾರೆ ... ಎಷ್ಟು ಮಂದಿ ಸೌದಿ ಅಥವಾ ದುಬೈನಲ್ಲಿ ವಾಸಿಸುತ್ತಿದ್ದಾರೆ ಎಂಬ ಬಗ್ಗೆ ಬಹಳ ಸರಳವಾದ ಪ್ರಶ್ನೆಗಳನ್ನು ಕೇಳಲಾಯಿತು.   ಸೌದಿ ಅಥವಾ ಮಧ್ಯಪ್ರಾಚ್ಯದ ಯಾರೊಂದಿಗಾದರೂ ನನಗೆ ಸಂಬಂಧ ಇದೆಯೆಂಬುದನ್ನು ಸ್ಥಾಪಿಸಲು ಬಯಸಿದ್ದರು ಎಂದು ನಾನು ಊಹೆ.

ನಾನು ಜಾಮಿಯಾ ಮತ್ತು ಜೆಎನ್‌ಯುಗೆ ಎಷ್ಟು ಬಾರಿ ಭೇಟಿ ನೀಡಿದ್ದೇನೆ ಎಂದು ನನ್ನನ್ನು ಕೇಳಲಾಯಿತು. ನಾನು ದುಬೈಗೆ ಎಷ್ಟು ಬಾರಿ ಭೇಟಿ ನೀಡಿದ್ದೇನೆ ಎಂದು ಕೇಳಿದ್ದರು. ಅಲ್ಲಿ ನನ್ನ ಸಂಬಂಧಿಕರು ಇದ್ದಾರೆ ಆದರೂ ನಾನು ಭೇಟಿ ಮಾಡಿಲ್ಲ ಎಂದು ತಿಳಿದು ಅವರಿಗೆ ಸ್ವಲ್ಪ ಆಶ್ಚರ್ಯವಾಯಿತು. ಅಲ್ಲದೆ, ನಾನು ಅದನ್ನು (ದುಬೈ ಭೇಟಿಯನ್ನು) ಮರೆಮಾಚುತ್ತಿದ್ದೇನೆಯೇ ಎಂದು ಕೇಳಿದರು.

ನಂತರ ನನ್ನ ಕೆಲಸದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ನಾನು ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಏಕೆ ಪರಿಶೀಲಿಸುತ್ತೇನೆ, ಇತರ ರಾಜ್ಯಗಳ ಬಗ್ಗೆ ಏಕೆ ಪರಿಶೀಲಿಸುವುದಿಲ್ಲ ಎಂದು ಪ್ರಶ್ನಿಸಿದರು.

ಪ್ರಶ್ನೆ: ನಿಜವಾಗಿಯೂ? ಅವರು ಅದನ್ನು ಕೇಳಿದರೇ?

ಹೌದು, ಸ್ವಲ್ಪ ದೇಶಾವರಿ ರೀತಿ.  ನೀವು ಹಿಂದೂಗಳ ಬಗ್ಗೆ ಮಾತ್ರ ಏಕೆ ಫ್ಯಾಕ್ಟ್‌ ಚೆಕ್‌ ಮಾಡುತ್ತೀರಿ? ಕಮಲೇಶ್ ತಿವಾರಿ ಹತ್ಯೆಯಾದಾಗ ನೀವೇಕೆ ಟ್ವೀಟ್ ಮಾಡಲಿಲ್ಲ? ನೀವು ಯಾವಾಗಲೂ ಯುಪಿ ಬಗ್ಗೆ ಏಕೆ ಟ್ವೀಟ್ ಮಾಡುತ್ತೀರಿ? ಕೇರಳ ಅಥವಾ ತಮಿಳುನಾಡು ಕುರಿತು ಏಕೆ ಮಾಡಬಾರದು? ಎಂದು ಕೇಳಿದರು.

ಪ್ರಶ್ನೆ: ಆದರೆ ಅಂತಹ ಪ್ರಶ್ನೆಗೆ ಒಬ್ಬರು ಉತ್ತರಿಸುವುದಾದರೂ ಹೇಗೆ?

ಅಂದರೆ, ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ನಾವು ಹೊರಹಾಕಿದರೆ ಅದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣಕ್ಕೆ ಒಳ್ಳೆಯದು ಎಂದು ನಾನು ಅವರಿಗೆ ಹೇಳಿದೆ. ನಮ್ಮ ಸ್ಟೋರಿಗಳಿಗಾಗಿ ನಾವು ಪೊಲೀಸರೊಂದಿಗೆ ಮಾತನಾಡುತ್ತೇವೆ. ಆದರೆ ನಾನು ಮುಸ್ಲಿಂ ಮೂಲಭೂತವಾದಿಗಳ ಬಗ್ಗೆ ಸಾಕಷ್ಟು ಮಾತನಾಡುವುದಿಲ್ಲ ಎಂದು ಅವರು ನನ್ನನ್ನು ಪ್ರಶ್ನಿಸಿದರು. ಟಿವಿ ಚಾನೆಲ್‌ಗಳಿಗೆ ನಿಯಮಿತವಾಗಿ ಭೇಟಿ ನೀಡುವ ಮತ್ತು ಹಿಂದೂಗಳನ್ನು ನಿಂದಿಸುವ ಅಥವಾ ಪಂಚಿಂಗ್ ಬ್ಯಾಗ್‌ಗಳಾಗುವ ಇಸ್ಲಾಮಿಕ್ ವಿದ್ವಾಂಸರನ್ನು ನಾನು ಹೇಗೆ ಟೀಕಿಸಿದ್ದೇನೆ ಎಂಬುದರ ಉದಾಹರಣೆಯನ್ನು ನಾನು ಅವರಿಗೆ ನೀಡಿದ್ದೇನೆ . ಅವರು ಒಂದು ರೀತಿಯಲ್ಲಿ ದ್ವೇಷದ ಭಾಷಣವನ್ನು ಹೇಗೆ ಸಕ್ರಿಯಗೊಳಿಸುತ್ತಾರೆ ಎಂಬುದರ ಬಗ್ಗೆ ತೋರಿಸಿಕೊಟ್ಟೆ. ಆದರೆ ನಾನು ಅವರಿಗೆ  ಮನವರಿಕೆ ಮಾಡಲು ಸಾಧ್ಯವಾಯಿತೇ ಎಂದು ನನಗೆ ತಿಳಿದಿಲ್ಲ. ಒಂದು ಕುತೂಹಲಕಾರಿ ವಿಷಯವೆಂದರೆ ಜಾರ್ಜ್ ಸೊರೊಸ್ ಆಲ್ಟ್ ನ್ಯೂಸ್‌ಗೆ ಧನಸಹಾಯ ನೀಡುವುದರ ಬಗ್ಗೆ ಅವರು OpIndia ಲೇಖನಗಳನ್ನು ಉಲ್ಲೇಖಿಸಿ ನನ್ನನ್ನು ಪ್ರಶ್ನಿಸಿದ್ದಾರೆಂದು ನಾನು ಭಾವಿಸುತ್ತೇನೆ

ಪ್ರಶ್ನೆ: ಯುಪಿ ಪೊಲೀಸರು ಜಾರ್ಜ್ ಸೊರೊಸ್‌ನನ್ನು ಎಳೆದು ತಂದಿರುವುದು  ಬಲಪಂಥೀಯರ ವಾದ ಸರಣಿಯ ಭಾಗವಲ್ಲವೇ ?

ಹೌದು, ನಾನು ನಗುತ್ತಾ, ಬಲಪಂಥೀಯ ಸಿದ್ಧಾಂತವಾದಿಯೊಬ್ಬರ  ಟ್ವಿಟ್ಟರ್‌ ಥ್ರೆಡ್ ಅನ್ನು ಉಲ್ಲೇಖಿಸುತ್ತಿದ್ದೀರಾ ಎಂದು ಕೇಳಿದೆ. ಅವರು ವೈರಲ್ ಆಗಿರುವ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ ಎಂದು ನನಗೆ ನೆನಪಿದೆ. ನಾನು ಯಾರನ್ನು ಉಲ್ಲೇಖಿಸುತ್ತಿದ್ದೇನೆಂದು ಅವರು ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗಾದರೆ ದೇಣಿಗೆ ಪಡೆದಿರುವುದು ಜಾರ್ಜ್ ಸೊರೊಸ್ ಅವರಿಂದ ಅಲ್ಲವೇ? ಆದರೆ ನೀವು ವಿದೇಶಿ ಹಣವನ್ನು ಪಡೆಯುವುದು ನಿಜವೇ? ಎಂದು ಪ್ರಶ್ನಿಸಿದರು.

ಭಾರತದಲ್ಲಿ ದಿನಪತ್ರಿಕೆಗೆ 10 ರೂಪಾಯಿ ನೀಡದ ಜನರು ಆಲ್ಟ್ ನ್ಯೂಸ್‌ಗೆ 1,000 ರೂಪಾಯಿಗಳನ್ನು ಏಕೆ ನೀಡುತ್ತಾರೆ ಎಂದು ಅವರು ಆಶ್ಚರ್ಯಪಟ್ಟರು.


ಪ್ರಶ್ನೆ: ಹಾಗಾದರೆ ನೀವು ಅವರಿಗೆ ದೇಣಿಗೆ/ಚಂದಾದಾರಿಕೆ ಮಾದರಿಯನ್ನು ವಿವರಿಸಬೇಕಾಯಿತೇ?

ಹೌದು [ನಗು]. ನನ್ನ ಪ್ರಕಾರ, ʼಭಾರತ್ ಇತ್ನಿ ಗರೀಬ್ ಕಂಟ್ರಿ ಹೈ, ಕೋಯಿ ಭಿ ಆಪ್ಕೋ ಪೈಸೆ ಕ್ಯೂಂ ದೇಗಾ ಸಿರ್ಫ್ ಫ್ಯಾಕ್ಟ್ ಚೆಕ್ ಕರ್ನೇ ಕೆ ಲಿಯೇ‌ʼ (ಭಾರತ ಇಷ್ಟೊಂದು ಬಡ ದೇಶ, ಕೇವಲ ಸತ್ಯ ಪರಿಶೀಲನೆ ಮಾಡೊದಿಕ್ಕೆ ಯಾರು ನಿಮಗೆ ದುಡ್ಡು ಕೊಡುತ್ತಾರೆ?) ಎಂಬಂತೆ ಪ್ರಶ್ನೆಯ ಸಾಲು ಇತ್ತು. ಆದರೂ ನಾನು ಬಿಜೆಪಿ ವಿರುದ್ಧ ಬರೆಯುವ ಬಗ್ಗೆ ನನ್ನನ್ನು ಪ್ರಶ್ನಿಸಿದಾಗ, ಹಿರಿಯ ಅಧಿಕಾರಿಯೊಬ್ಬರು ಅದನ್ನು ಮಧ್ಯದಲ್ಲಿ ತಡೆದು ನಿಲ್ಲಿಸಿದರು.

ಆದರೆ ನಾವು ನಿಗೂಢ ವಿದೇಶಿ ಘಟಕದಿಂದ ಹಣವನ್ನು ಪಡೆಯುತ್ತಿದ್ದೇವೆ ಎನ್ನುವುದು ಕೇವಲ ಆಲ್ಟ್ ನ್ಯೂಸ್ ವಿರುದ್ಧ ಮಾತ್ರವಲ್ಲದೆ ಸ್ಥಾಪಿತ ಹಿತಾಸಕ್ತಿಯ ವಿರೋಧಿಯಾಗಿ ಕಾಣುವ ಯಾರ ವಿರುದ್ಧವೂ ಒಂದು ರೀತಿಯ ರೆಡಿಮೇಡ್ ಪಿತೂರಿ ಸಿದ್ಧಾಂತವಾಗಿದೆ.

ಪ್ರಶ್ನೆ: ಇದು ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗಿದೆ, ಆದರೆ ಇದು ನಿಮ್ಮ ಜೊತೆ ಆಗಿರುವುದು  ತಮಾಷೆಯಲ್ಲ.

ನಾನು ಏನು ಹೇಳಿದರೂ ಮಾಧ್ಯಮಗಳಲ್ಲಿ ಬರುವುದಿಲ್ಲ ಎಂದು ನನಗೆ ಗೊತ್ತಿತ್ತು. ಉದಾಹರಣೆಗೆ, Razorpay ವಿಷಯದಲ್ಲಿ, ಭಾರತೀಯ ಬ್ಯಾಂಕ್ ಖಾತೆಯನ್ನು ಹೊಂದಿರದ ಯಾರೊಬ್ಬರಿಂದಲೂ ನಾವು ಹೇಗೆ ದೇಣಿಗೆಗಳನ್ನು ತೆಗೆದುಕೊಳ್ಳುವುದಿಲ್ಲ  ಎಂಬುದರ ಕುರಿತು ನಾನು ತುಂಬಾ ಸ್ಪಷ್ಟವಾಗಿದ್ದೆ . ಇದು ತಾಂತ್ರಿಕವಾಗಿ ಅಸಾಧ್ಯ. ಜನರು ದೇಣಿಗೆ ನೀಡಿದಾಗ ನಾವು ಅವರ ಪ್ಯಾನ್ ಸಂಖ್ಯೆಯನ್ನು ಸಹ ತೆಗೆದುಕೊಳ್ಳುತ್ತೇವೆ.  ಪೊಲೀಸ್ ಅಧಿಕಾರಿಗಳು ಸಹ ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ನನಗೆ  ಬಹಳ ಸ್ಪಷ್ಟವಾಗಿತ್ತು   . ಆದರೆ ನಂತರ ನಾನು ಪತ್ರಿಕೆಗಳನ್ನು ನೋಡಿದಾಗ, ಮಾಧ್ಯಮಗಳು ಪಾಕಿಸ್ತಾನ, ಸಿರಿಯಾ ಮತ್ತು ಇತರ ದೇಶಗಳಿಂದ ನಾವು ಹೇಗೆ ಹಣವನ್ನು ಪಡೆಯುತ್ತೇವೆ ಎಂಬುದರ ಕುರಿತು ಸುದ್ದಿಗಳನ್ನು ನೀಡುತ್ತಿವೆ. ನಾನು ಹೇಳಿದ್ದು ಸುದ್ದಿಯಾಗಲಿಲ್ಲ... ಹಾಗಾಗಿ ಮೇ ಕುಚ್ ಭಿ ಬೋಲುನ್ ಫರಕ್ ನಹೀಂ ಪಡ್ತಾ (ನಾನು ಏನೇ ಹೇಳಿದರೂ  ಏನೂ ವ್ಯತ್ಯಾಸ ಆಗಲ್ಲ)  ಅಂತ ಅರ್ಥವಾಯಿತು.

ಪ್ರಶ್ನೆ: ನೀವು ಪ್ರತಿ ಟ್ವೀಟ್‌ಗೆ ಎರಡು ಕೋಟಿ ಸಂಭಾವನೆ ಪಡೆಯುತ್ತೀರಾ ಎಂಬ ಪ್ರತಿಪಾದನೆ ಹೇಗೆ ಬಂತು?

ನನಗೆ ತಿಳಿದಿಲ್ಲ . ಅಂತಹ ಪ್ರಶ್ನೆಯನ್ನು ಕೇಳಲಾಗಿಲ್ಲ. ಆಲ್ಟ್ ನ್ಯೂಸ್‌ಗೆ ಸೇರಿದ ಬಗ್ಗೆ ನನಗೆ ಪ್ರಶ್ನೆಗಳನ್ನು ಕೇಳಲಾಯಿತು, ಪ್ರತೀಕ್ ನನಗೆ ಹೇಗೆ ಗೊತ್ತು... ನನಗೆ ಮುಕುಲ್ ಸಿನ್ಹಾ ಅವರ ಮೋದಿ ವಿರೋಧಿ ಚಟುವಟಿಕೆಯ ಬಗ್ಗೆ ತಿಳಿದಿದೆಯೇ ಎಂದು ಕೇಳಲಾಯಿತು. ಅದರ ಬಗ್ಗೆ ನನಗೆ ತಿಳಿದಿರುವ ಕಾರಣ ನಾನು ಆಲ್ಟ್ ನ್ಯೂಸ್‌ಗೆ ಸೇರಿದ್ದೇನೆಯೇ? ಎಂದು ಕೇಳಲಾಯಿತು. ಆದರೆ ನಾನು ಟ್ವೀಟ್‌ಗೆ 2 ಕೋಟಿ ರೂಪಾಯಿ ಸ್ವೀಕರಿಸಿದ್ದೇನೆ ಎಂಬ ಆರೋಪದ ಬಗ್ಗೆ ನನ್ನನ್ನು ಕೇಳಲಿಲ್ಲ. ಯಾರಿಗಾದರೂ ಟ್ವೀಟ್‌ ಮಾಡಲಿಕ್ಕೆಂದೇ ಎರಡು ಕೋಟಿ ರುಪಾಯಿ ಕೊಡುತ್ತಾರೆ ಎಂದು ಯಾರಾದರೂ ಹೇಗೆ ಯೋಚಿಸಬಹುದು? ನನಗೆ ಗೊತ್ತಿಲ್ಲ. ಬಿಜೆಪಿ ಐಟಿ ಸೆಲ್ ಕೂಡ ಇಂತಹ ಹೇಳಿಕೆ ನೀಡುವ ಮೊದಲು ಎರಡು ಬಾರಿ ಯೋಚಿಸುತ್ತದೆ.

ಪ್ರಶ್ನೆ: ಇದೆಲ್ಲ ನಡೆಯುವಾಗ ನಿಮಗೆ ಏನನಿಸುತ್ತಿತ್ತು ?

Alt News ಫಂಡಿಂಗ್ ಮತ್ತು ಹಣಕಾಸಿನ ಬಗ್ಗೆ ಮಾತನಾಡುವುದು ಸುಲಭವಾಗಿತ್ತು. ಪ್ರತೀಕ್, ನಿರ್ಝರಿ ಆಂಟಿ  ಮತ್ತು ನಾನು ಆಗಾಗ್ಗೆ ಇದನ್ನು ಚರ್ಚಿಸುತ್ತಿದ್ದೆವು, ಅದರಲ್ಲೂ ವಿಶೇಷವಾಗಿ ನಮ್ಮ ನಿಧಿಯ ಬಗ್ಗೆ  ಅಪಪ್ರಚಾರಗಳು ನಡೆದದ್ದರಿಂದ ನಾವು ಎಲ್ಲವನ್ನೂ ಅತ್ಯಂತ ಪಾರದರ್ಶಕವಾಗಿ  ಇರಿಸಿದ್ದೇವು. ನನ್ನ UnofficialSubramaniyanswamy ಫೇಸ್‌ಬುಕ್ ಪ್ರೊಫೈಲ್ ಕುರಿತು ಪ್ರಶ್ನೆಗಳಿದ್ದವು.  ಅದರಲ್ಲಿ ನಾನು ಆಗಾಗ್ಗೆ ವಂಗ್ಯ ಮಾಡುತ್ತೇನೆ. ಉದಾಹರಣೆಗೆ, ಮಹಾಭಾರತದ ಸಮಯದಲ್ಲಿ ಇಂಟರ್ನೆಟ್ ಇತ್ತು ಎಂದು ಹೇಳುವ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ ಪೋಸ್ಟ್‌ಗಳು. ನೀವು ಅದನ್ನು ಸಂದರ್ಭಕ್ಕೆ ಅನುಸಾರವಾಗಿ ನೋಡದಿದ್ದರೆ, ಅದು ಮುಸ್ಲಿಂ ವ್ಯಕ್ತಿಯೊಬ್ಬ ಮಹಾಭಾರತ ಅಥವಾ ಹಿಂದೂ ದೇವರನ್ನು ಗೇಲಿ ಮಾಡುತ್ತಿರುವಂತೆ ತೋರುತ್ತದೆ. ಆದರೆ ಅದು ಹಾಗಿರಲಿಲ್ಲ.

ಕುತೂಹಲಕಾರಿ ಎಂಬಂತೆ, ಅಲ್ಲಿನನ್ನನ್ನು ಭೇಟಿಯಾದ  ಒಬ್ಬ ಪೊಲೀಸ್ ಅಧಿಕಾರಿ 2015 ರಲ್ಲಿಯೇ ನನ್ನ ಪುಟವನ್ನು ಫಾಲೋ ಮಾಡಿದ್ದಾರೆ  ಮತ್ತು ಅದನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ ಎಂದು ಹೇಳಿದರು.

ಪ್ರಶ್ನೆ: ನೀವು ಹಿಂದೂಗಳನ್ನು ತಮಾಷೆ ಮಾಡುತ್ತೀರಿ ಎಂಬ ಧಾಟಿಯಲ್ಲೇ ಪ್ರಶ್ನೆಗಳಿದ್ದವೇ ?

‌ಝುಬೈರ್: ಸೀತಾಪುರದಲ್ಲಿ, ಬಜರಂಗ ಮುನಿಯ ಕ್ಷಮೆಯಾಚನೆಯನ್ನು ನಾನು ಏಕೆ ಟ್ವೀಟ್ ಮಾಡಲಿಲ್ಲ ಎಂದು ಅವರು ನನ್ನನ್ನು ಕೇಳಿದರು. ನಾನು ಆತನ ಅತ್ಯಾಚಾರ ಬೆದರಿಕೆಯನ್ನು ಮಾತ್ರ ಟ್ವೀಟ್ ಮಾಡಿದ್ದೇನೆ, ಆದರೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ ಗಂಟೆಗಳ ನಂತರ ಆತ ಕ್ಷಮೆಯಾಚನೆ ಮಾಡಿದ ವೀಡಿಯೊ ಟ್ವೀಟ್‌ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು. ನಾನು ಅದು ಯಾಕೆ ಮಾಡಬೇಕು? ಎಂದು ಪ್ರಶ್ನಿಸಿದೆ. ಆತನ ವೀಡಿಯೊದಲ್ಲಿ ಆತ ಕ್ಷಮೆಯಾಚಿಸುವಂತೆ ನನಗೆ ಕಾಣಿಸಲಿಲ್ಲ ಎಂದು ಹೇಳಿದೆ.

15 ಉದ್ಯೋಗಿಗಳ ಆಲ್ಟ್ ನ್ಯೂಸ್ ತಂಡದಲ್ಲಿ ನಾನು ಸೇರಿದಂತೆ ಮೂವರು ಮುಸ್ಲಿಮರು ಮಾತ್ರ ಇದ್ದಾರೆ ಎಂದು ಅವರು ತುಂಬಾ ಆಘಾತಕ್ಕೊಳಗಾಗಿದ್ದರು. ನಾನು ಎಲ್ಲಾ ಉದ್ಯೋಗಿಗಳನ್ನು ಹೆಸರಿಸಬೇಕೆಂದು ಅವರು ಬಯಸಿದ್ದರು, ಹಾಗಾಗಿ ನಾನು ಅವರಿಗೆ ಹೆಸರನ್ನೆಲ್ಲಾ ಹೇಳಿದೆ. ಅವರಲ್ಲಿ (ಪೊಲೀಸರಲ್ಲಿ) ಕನಿಷ್ಠ ಇಬ್ಬರು ಅಥವಾ ಮೂವರು (ಆಲ್ಟ್‌ ನ್ಯೂಸ್‌ನ) ಬಹುತೇಕ ಎಲ್ಲರೂ ಹಿಂದೂಗಳು ಎಂದು ಆಘಾತಕ್ಕೊಳಗಾದರು. "ಹಿಂದೂಗಳಾಗಿ, ನೀವು ಹಿಂದೂಗಳ ವಿರುದ್ಧ ಬರೆಯುತ್ತೀರಾ" ಎಂದು ಪ್ರಶ್ನಿಸಿದರು. ನಾವು ಹಾಗೆ ಮಾಡುವುದಿಲ್ಲ... ತಪ್ಪು ಮಾಹಿತಿ ಹರಡುವವರ ವಿರುದ್ಧ ಮಾತ್ರ ಬರೆಯುತ್ತೇವೆ ಎಂದು ನಾನು ಹೇಳಿದೆ. ಇದಲ್ಲದೆ, ನಮ್ಮ ದಾನಿಗಳಲ್ಲಿ ಹೆಚ್ಚಿನವರು ಹಿಂದೂಗಳು ಎಂದು ಹೇಳಿದೆ.

ದಿಲ್ಲಿ ಪ್ರಕರಣದಲ್ಲಿ, ನಾನು ಚಲನಚಿತ್ರ ದೃಶ್ಯವನ್ನು ಮಾತ್ರ ಟ್ವೀಟ್ ಮಾಡಿದ್ದೇನೆ ಮತ್ತು ಅದೇ ಚಿತ್ರವನ್ನು ಟ್ವೀಟ್ ಮಾಡಿದ ಸರ್ಕಾರದ ಬೆಂಬಲಿಗರ ಉದಾಹರಣೆಗಳಿವೆ ಎಂದು ವಿವರಿಸಿದೆ. ನಾನು 2014 ಅನ್ನು ಉಲ್ಲೇಖಿಸಿರುವುದು ಅವರಿಗೆ ಇಷ್ಟವಾಗಲಿಲ್ಲ. ಶೀಘ್ರದಲ್ಲೇ, ಅವರು Alt News ಫಂಡಿಂಗ್‌ಗೆ ವಿಷಯ  ಬದಲಾಯಿಸಿದರು. ಹಿಂದಿನ ಎಲ್ಲಾ ಪ್ರಕರಣಗಳಲ್ಲಿಯೂ ನನ್ನ ಅನುಭವ ಇದೇ ಆಗಿತ್ತು. ಪ್ರಶ್ನೆಗಳು Alt News ಫಂಡಿಂಗ್ ಬಗ್ಗೆಯಾಗಿತ್ತು. ಅವರು ನನಗೆ ದಾನಿಗಳ ಪಟ್ಟಿಯನ್ನು ತೋರಿಸಿದರು. ಜನರು 40,000 ಅಥವಾ ಅದಕ್ಕಿಂತ ಹೆಚ್ಚಿನದನ್ನು ಏಕೆ ದಾನ ಮಾಡುತ್ತಾರೆ ಎಂದು ನನ್ನನ್ನು ಕೇಳಿದರು.

ಅವರು ನಿಜವಾಗಿಯೂ ನನಗೆ ಜೊತೆ ತುಂಬಾ ಉತ್ತಮವಾಗಿ ವರ್ತಿಸಿದ್ದರು. ಆದರೆ ಪಟಿಯಾಲ ನ್ಯಾಯಾಲಯದಲ್ಲಿ ಅವರು ನಾವು  ವಿದೇಶಿ ನಿಧಿಯನ್ನು ಪಡೆಯುತ್ತಿದ್ದೇವೆ,  ನಾನು ನೇರವಾಗಿ ನನ್ನ ಖಾತೆಗೆ ಹಣವನ್ನು ಪಡೆಯುತ್ತಿದ್ದೇನೆ ಎಂದು ಆರೋಪಿಸಿದಾಗ ನಾನು ಸ್ವಲ್ಪ ಆಘಾತಕ್ಕೊಳಗಾಗಿದ್ದೆ. ನಾವು ಪಡೆದಿರುವ ಹಣವು ಭಾರತೀಯ ಖಾತೆಗಳ ಮೂಲಕವೇ ಬಂದಿದೆ ಎಂಬುದು ವಿಚಾರಣೆಯ ಸಮಯದಲ್ಲಿ ಅವರಿಗೆ ಮನವರಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ. Razorpay ಅಥವಾ Instamojo ಇರಲಿ, ಅದರಲ್ಲಿ ನೀವು ವಿದೇಶಿ ಕಾರ್ಡ್‌ಗಳನ್ನು ನಮೂದಿಸಲು ಸಾಧ್ಯವಿಲ್ಲ. 

ಪ್ರಶ್ನೆ: ಪ್ರಭಾವಿಗಳನ್ನು ಎದುರು ಹಾಕಿಕೊಳ್ಳುವ ಹಲವು ಪತ್ರಕರ್ತರು ಸಿಬಿಐ, ಇಡಿ ಅಥವಾ ಐಟಿ ದಾಳಿಯನ್ನು ನಿರೀಕ್ಷಿಸುತ್ತಿರುತ್ತಾರೆ. ಆದರೆ ಅದು ನಡೆಯುವವರೆಗೂ ನೀವದಕ್ಕೆ ಸಿದ್ಧವಾಗಿರುವುದಿಲ್ಲ. ಅಲ್ಲವೇ ?

೨೦೨೦ ರ ಕೇಸಲ್ಲಿ ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಸ್ನೇಹಿತರ ಜೊತೆ ಚರ್ಚಿಸಿದ್ದು ನೆನಪಿದೆ. ಏಕೆಂದರೆ ದಿಲ್ಲಿ ಹೈಕೋರ್ಟ್ ಅದರಲ್ಲಿ ನನಗೆ ಬಂಧನದಿಂದ ರಕ್ಷಣೆ ನೀಡಿತ್ತು. ಆದರೆ ಜಿಗ್ನೇಶ್ ಪ್ರಕರಣದಲ್ಲಿ ಆದಂತೆ ಅವರು ಹೊಸ ಎಫ್ ಐ ಆರ್ ದಾಖಲಿಸಿದರೆ ಏನು ಮಾಡೋದು ಎಂಬ ಪ್ರಶ್ನೆ ಕೇಳಿದಾಗ ನನಗೆ ಅಷ್ಟೆಲ್ಲ ಚಿಂತೆ ಮಾಡಬೇಡ ಎಂದು ಸಲಹೆ ನೀಡಿದರು. ಇನ್ನೂ ಪರಿಸ್ಥಿತಿ ಅಷ್ಟು ಹಾಳಾಗಿಲ್ಲ ಎಂದು ಹೇಳಿದರು. ಆದರೆ... 

ಪ್ರಶ್ನೆ: ಕುಟುಂಬವನ್ನು ಬಿಟ್ಟು ನಾನು ಜೈಲಿನಲ್ಲಿದ್ದೇನೆ ಎಂಬ ಭಾವನೆಯೇ ನಮ್ಮನ್ನು ಚಿಂತೆಗೀಡು ಮಾಡುತ್ತದೆ. ಇದೆಲ್ಲ ಬೇಕಾ ಎಂಬ ಭಾವನೆ ಬರುತ್ತದೆ . ನಿಮಗೆ ಹಾಗೇನಾದರೂ ತೋಚಿದೆಯೇ?

ಝುಬೈರ್:‌ ಒಂದು ಬಾರಿ ಆರೀತಿಯ ಆಲೋಚನೆ ನನ್ನ ಮನಸ್ಸನ್ನೂ ಹಾದು ಹೋಗಿರಬಹುದು. ನಾನು ಆಲ್ಟ್‌ ನ್ಯೂಸ್‌ ನಲ್ಲಿ ಇಲ್ಲದೇ ಇರುತ್ತಿದ್ದರೆ ಜಪಾನ್‌ ನಲ್ಲಿ ಇರುತ್ತಿದೆ. ನಾನು ಮೊದಲು ನೋಕಿಯಾದಲ್ಲಿ ಕೆಲಸ ಮಾಡುತ್ತಿದ್ದೆ. ಇನ್ನೂ ಹೆಚ್ಚಿನ ಸಂಪಾದನೆ ಮಾಡಬಹುದಿತ್ತು ಎಂದು ನನ್ನ ಹೆತ್ತವರು ಹೇಳುತ್ತಾರೆ. ಆದರೆ ಆಲ್ಟ್‌ ನ್ಯೂಸ್‌ ನಲ್ಲಿದ್ದು ನಾನು ಮಾಡುತ್ತಿರುವ ಕೆಲಸ ನಿಜಕ್ಕೂ ಅತ್ಯಂತ ತೃಪ್ತಿ ನೀಡುತ್ತದೆ. ಜೈಲಿಗೆ ಹೋದ ನಂತರ ನನಗೆ ಸಿಕ್ಕ ಬೆಂಬಲದಿಂದಾಗಿ ನನ್ನ ನಂಬಿಕೆ ಮತ್ತಷ್ಟು ಬಲಗೊಂಡಿದೆ. ಈಗ, ನಾನು ಇಂಜಿನಿಯರಿಂಗ್ ಅಲ್ಲ ಮಾಸ್ ಕಮ್ಯುನಿಕೇಷನ್ ಮಾಡಬೇಕಿತ್ತು ಎಂದು ನಾನು ಭಾವಿಸುತ್ತೇನೆ.

ಇಲ್ಲಿ ತಪ್ಪು ಮಾಹಿತಿ ಹರಡುವ ಸಮಸ್ಯೆ ಇದೆ. ಆದರೆ ದೊಡ್ಡ ಸಮಸ್ಯೆ ಎಂದರೆ ಹೆಚ್ಚಿನ ತಪ್ಪು ಮಾಹಿತಿಯು ಮುಸ್ಲಿಂ ಸಮುದಾಯದ ಕಡೆಗೆ ಗುರಿ ಮಾಡಲಾಗಿದೆ. ಇದು ಆತಂಕಕಾರಿಯಾಗಿದೆ. ಹೆಚ್ಚಿನ ಪ್ರೈಮ್‌ಟೈಮ್ ಚರ್ಚೆಗಳು ಹಿಂದೂ ವರ್ಸಸ್ ಮುಸ್ಲಿಂ ಬಗ್ಗೆ ಆಗಿರುತ್ತದೆ. ನನ್ನ ಸಮುದಾಯವು ಏನನ್ನು ಎದುರಿಸುತ್ತಿದೆ, ಅವರು ಹೇಗೆ ಗುರಿಯಾಗುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಪತ್ರಿಕೋದ್ಯಮ ಮಾಡುವುದರೊಂದಿಗೆ, ನಾನು ಇದನ್ನೂ ಎತ್ತಿ ತೋರಿಸಬೇಕು ಎಂದು ನನಗೆ ಯಾವಾಗಲೂ ಅನಿಸುತ್ತದೆ.

ಪ್ರಶ್ನೆ: ವೈಯಕ್ತಿಕವಾಗಿ ಆ ಡಿಬೇಟ್‌ ಅನ್ನು ನೋಡುವಾಗ ನನಗೆ ಅದು ಪ್ರಭಾವ ಬೀರುವುದಕ್ಕಿಂತಲೂ ಹೆಚ್ಚು ನಿಮಗೆ ಅದರ ಪ್ರಭಾವ ನೇರವಾಗಿರುತ್ತದೆ. ಯಾಕೆಂದರೆ ನೀವು ಮುಸ್ಲಿಂ.

ಝುಬೈರ್: ಹೌದು, ವಿಶೇಷವಾಗಿ ಸುದ್ದಿ ವಾಹಿನಿಗಳು...ಅವರು ಬಳಸುವ ಹ್ಯಾಶ್‌ಟ್ಯಾಗ್‌ಗಳು ನೋವುಂಟುಮಾಡುತ್ತದೆ... ನನಗಷ್ಟೇ ಅಲ್ಲ... ನಾನು ನೂಪುರ್ ಶರ್ಮಾ ಅವರ ಕ್ಲಿಪ್ ಅನ್ನು ಹಂಚಿಕೊಂಡಾಗ, ಇದನ್ನು ಹೈಲೈಟ್ ಮಾಡುವುದು ನನ್ನ ಉದ್ದೇಶವಾಗಿತ್ತು. ಇಲ್ಲಿ ಪ್ರವಾದಿ ಅಥವಾ ಧರ್ಮವನ್ನು ನಿಂದಿಸುವುದು ಇದೇ ಮೊದಲಲ್ಲ. ನನ್ನ ಪ್ರಕಾರ ಹಲವಾರು ಜನರು ನನ್ನ ಟೈಮ್‌ಲೈನ್‌ನಲ್ಲಿ ಬಂದು ಧರ್ಮ, ಪ್ರವಾದಿ ಮತ್ತು ಮುಂತಾದವುಗಳ ಬಗ್ಗೆ ಎಲ್ಲಾ ರೀತಿಯ ವಿಷಯವನ್ನು ಹೇಳುತ್ತಾರೆ, ನಾನು ಅದರ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ.

ಈ ಸಂದರ್ಭದಲ್ಲಿ, ದೊಡ್ಡ ರಾಷ್ಟ್ರೀಯ ಪಕ್ಷದ ವಕ್ತಾರರು ದೊಡ್ಡ ಸುದ್ದಿ ವಾಹಿನಿಯೊಂದಕ್ಕೆ ಹೋಗುತ್ತಾರೆ, ಅವರು ತಮಗೆ ತೋ�

Writer - ಮನೀಷಾ ಪಾಂಡೆ, newslaundry.com

contributor

Editor - ಮನೀಷಾ ಪಾಂಡೆ, newslaundry.com

contributor

Similar News