×
Ad

ಉಡುಪಿ: ಜು.31ಕ್ಕೆ ಜಿ.ರಾಜಶೇಖರ್‌ಗೆ ನುಡಿನಮನ

Update: 2022-07-28 20:42 IST

ಉಡುಪಿ :  ಜು.20ರಂದು ನಮ್ಮನ್ನಗಲಿರುವ ಜನಪರ ಚಳುವಳಿಗಳ ಒಡನಾಡಿ, ಪ್ರಖರ ಸಮಾಜ ವಿಮರ್ಶಕ ಜಿ.ರಾಜಶೇಖರ್  ಅವರ ವಿಚಾರಗಳು ಹಾಗು ಚಳುವಳಿಯ ಬದ್ಧತೆಗೆ ಋಣಿಯಾಗಿರುವ ಉಡುಪಿಯ ರಥಬೀದಿ  ಗೆಳೆಯರು, ಸಹಬಾಳ್ವೆ ಹಾಗು ದಸಂಸ (ಅಂಬೇಡ್ಕರ್ ವಾದ) ಈ ಸಂಘಟನೆಗಳು ಒಟ್ಟಾಗಿ ಅಗಲಿದ ಹಿರಿಯ ಒಡನಾಡಿಗೆ ಜು.31 ರಂದು ’ನುಡಿ ನಮನ’ ಸಲ್ಲಿಸಲಿವೆ.

ಜು.31ರ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಜಿ.ರಾಜಶೇಖರರ ಒಡನಾಡಿಗಳು ಹಾಗು ಬಂಧುಮಿತ್ರರು ಸಭೆಯಲ್ಲಿ ಉಪಸ್ಥಿತರಿದ್ದು ನುಡಿನಮನ ಸಲ್ಲಿಸುವಂತೆ ಕಾರ್ಯಕ್ರಮ ಸಂಘಟಿಸಿರುವ ಮೂರು ಸಂಸ್ಥೆಗಳ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News