ಬೊಳ್ಜೆ ಸಂತೋಷ ಸುವರ್ಣ ಬಿಜೆಪಿಗೆ ರಾಜೀನಾಮೆ
Update: 2022-07-28 20:45 IST
ಉಡುಪಿ : ಸುಳ್ಯ ಬೆಳ್ಳಾರೆಯ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಬೊಳ್ಜೆ ಸಂತೋಷ್ ಸುವರ್ಣ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪ್ರವೀಣ್ ನೆಟ್ಟಾರುನಂಥ ನಿಷ್ಠಾವಂತ ಕಾರ್ಯಕರ್ತನಿಗೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೇ ಸರಕಾರ ಇರುವಾಗಲೂ ರಕ್ಷಣೆ ನೀಡಲು ಸಾಧ್ಯವಿಲ್ಲದ್ದನ್ನು ನೋಡಿ ಮನಸ್ಸಿನ ಬಹಳ ನೋವಾಗಿದೆ. ಕಾರ್ಯಕರ್ತರಿಗೆ ಸ್ಪಂಧಿಸುವ, ಇಂತಹ ಸಂದರ್ಭದಲ್ಲಿ ನ್ಯಾಯ ನ್ಯಾಯ ಒದಗಿಸುವ, ತತ್ವ, ಆದರ್ಶ, ಸಿದ್ಧಾಂತವನ್ನು ಮರೆತು ಆಡಳಿತ ನಡೆಸುವ ನಮ್ಮ ನಾಯಕರು ಬದಲಾಗುವವರೆಗೆ ನನ್ನ ಸಂಚಾಲಕ ಹುದ್ದೆಗೆ ರಾಜೀನಾಮೆ ನೀಡುತಿದ್ದೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.