×
Ad

ಅಪ್ರಾಪ್ತರಿಗೆ ವಸತಿಗೃಹದ ಕೊಠಡಿ ನೀಡುವಾಗ ದಾಖಲೆ ಪರಿಶೀಲಿಸಿ: ಉಡುಪಿ ನಗರಸಭೆ

Update: 2022-07-28 21:02 IST

ಉಡುಪಿ : ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಬಾಲನ್ಯಾಯ ಕಾಯ್ದೆ ಹಾಗೂ ಫೋಕ್ಸೋ ಕಾಯ್ದೆಯನ್ವಯ ಸೂಕ್ತ ಕಾನೂನು ಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯ  ವಸತಿಗೃಹಗಳಲ್ಲಿ ಅಪ್ರಾಪ್ತ ಮಕ್ಕಳಿಗೆ ವಸತಿಗೃಹದ ಕೊಠಡಿಗಳನ್ನು ಒದಗಿಸುವ ಸಂದರ್ಭದಲ್ಲಿ ಪೂರಕ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಕೊಠಡಿಗಳನ್ನು ಒದಗಿಸಬೇಕು. ದಾಖಲೆ ಪರಿಶೀಲಿಸದೇ ವಸತಿಗೃಹಗಳ ಕೊಠಡಿಗಳನ್ನು ಒದಗಿಸಿದ್ದಲ್ಲಿ ಅಂತಹ ವಸತಿಗೃಹಗಳ ಪರವಾನಿಗೆಯನ್ನು ರದ್ದು ಪಡಿಸ ಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News