ಸ್ಥೂಲ ಆರ್ಥಿಕ ನೀತಿಯ ಜಾರಿ ತನಕ ಶ್ರೀಲಂಕಾಗೆ ಹೊಸ ಹಣಕಾಸು ನೆರವು ಸಾಧ್ಯವಿಲ್ಲ: ವಿಶ್ವ ಬ್ಯಾಂಕ್

Update: 2022-07-29 15:56 GMT

ನ್ಯೂಯಾರ್ಕ್,ಜು.29: ಶ್ರೀಲಂಕಾವ ಸಮರ್ಪಕವಾದ ಸ್ಥೂಲ ಆರ್ಥಿಕ (ಬಡ್ಡಿದರಗಳು ಮತ್ತು ರಾಷ್ಟ್ರೀಯ ಉತ್ಪಾದಕತೆಯಂತಹ ಅರ್ಥಿಕ ಅಂಶಗಳು)  ನೀತಿಯ ಕಾರ್ಯಚೌಕಟ್ಟನ್ನು ಅನುಷ್ಠಾನಕ್ಕೆ ತರುವ ತನಕ ಆ ದೇಶಕ್ಕೆ ಯಾವುದೇ ಹೊಸ ಹಣಕಾಸು ನಿಧಿಯ ನೆರವನ್ನು ನೀಡಲು ಸಾಧ್ಯವಿಲ್ಲವೆಂದು ವಿಶ್ವಬ್ಯಾಂಕ್ ಗುರುವಾರ ಖಡಾಖಂಡಿತವಾಗಿ ಹೇಳಿದೆ.

  ‌

ಆರ್ಥಿಕ ಸ್ಥಿರೀಕರಣ, ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಗೆ ಮೂಲ ಕಾರಣಗಳಿಗೆ ಪರಿಹಾರ ಮಾರ್ಗವನ್ನು ಕಂಡುಹಿಡಿಯಬೇಕು ಆ ಮೂಲಕ ಶ್ರೀಲಂಕಾದ ಭವಿಷ್ಯದ ಚೇತರಿಕೆ ಹಾಗೂ ಅಭಿವೃದ್ಧಿಯು ಪುಟಿದೇಳುವಂತಹದ್ದಾಗಿದೆ ಹಾಗೂ ಎಲ್ಲರನ್ನೂ ಒಳಗೊಂಡಿರುತ್ತದೆಯೆಂಬುದನ್ನು ಖಾತರಿಪಡಿಸಬೇಕಾಗಿದೆ ಎಂದು ವಿಶ್ವಬ್ಯಾಂಕ್ ಶರತ್ತಿನಲ್ಲಿ ತಿಳಿಸಿದೆ.

  

ಶ್ರೀಲಂಕಾದ ಅಪಾಯಕಾರಿ ಆರ್ಥಿಕ ಸ್ಥಿತಿ ಹಾಗೂ ಅದರಿಂದ ಈ ದ್ವೀಪರಾಷ್ಟ್ರ ಹಾಗೂ ಅದರ ಪ್ರಜೆಗಳ ಮೇಲೆ ಆಗಲಿರುವ ಪರಿಣಾಮಗಳ ಬಗ್ಗೆ ತಾನು ತೀವ್ರಕಳವಳ ಹೊಂದಿರುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ.

  

ಶ್ರೀಲಂಕಾಕ್ಕೆ ಈ ಮೊದಲು ಮಂಜೂರಾಗಿದ್ದ ಸಾಲಗಳನ್ನು ಶ್ರೀಲಂಕಾದಲ್ಲಿ ತಲೆದೋರಿರುವ ಔಷಧಿಗಳು, ಅಡುಗೆ ಅನಿಲ, ರಸಗೊಬ್ಬರ ಮತ್ತಿತರ ಅವಶ್ಯಕ ವಸ್ತುಗಳ ಕೊರತೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದೂಟ ಹಾಗೂ ಬಡ ಮತ್ತು ದುರ್ಬಲ ಕುಟುಂಬಗಳಿಗೆ ನಗದು ವರ್ಗಾವಣೆ ಇತ್ಯಾದಿ ಉದ್ದೇಶಕ್ಕೆ ತಿರುಗಿಸಲಾಗುವುದು ಎಂದು ಅದು ಹೇಳಿದೆ.

  

ತುರ್ತು ಅವಶ್ಯಕತೆಗಳ ಈಡೇರಿಕೆಗಾಗಿ ಶ್ರೀಲಂಕಾಗೆ ಸುಮಾರು 160 ಶತಕೋಟಿ ಡಾಲರ್ಗಳನ್ನು ವಿತರಿಸಲಾಗುವುದು ಎಂದು ವಿಶ್ವಬ್ಯಾಂಕ್ ತಿಳಿಸಿದೆ. ಇದರ ಜೊತೆಗೆ ಅವಶ್ಯಕ ಸೇವೆಗಳು, ಔಷಧಿ ಹಾಗೂ ಔಷಧಿ ಹಾಗೂ ವೈದ್ಯಕೀಯ ಸಾಮಾಗ್ರಿಗಳ ಪೂರೈಕೆ, ಶಾಲಾ ಊಟ ಹಾಗೂ ಬೋಧನಾ ಶುಲ್ಕ ರದ್ದತಿಗೆ ನೆರವಾಗುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಯೋಜನೆಗಳು ಮುಂದುವರಿಯಲಿವೆ ಎಂದು ವಿಶ್ವಬ್ಯಾಂಕ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News