ತೆರಿಗೆಗಳ್ಳತನ ಆರೋಪ: ತಪ್ಪೊಪ್ಪಿಕೊಳ್ಳದ ಪಾಪ್‌ ಗಾಯಕಿ ಶಕೀರಾಗೆ ಜೈಲು ಶಿಕ್ಷೆ ಕೋರಿ ಮನವಿಗೆ ಸ್ಪೇನ್ ಸರಕಾರ ನಿರ್ಧಾರ

Update: 2022-07-29 16:02 GMT

ಕೀವ್,ಜು.29: ತೆರಿಗೆಗಳ್ಳತನದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳುವ ಕುರಿತ ಒಡಂಬಡಿಕೆಯನ್ನು ನಿರಾಕರಿಸಿರುವ ವಿಶ್ವವಿಖ್ಯಾತ ಪಾಪ್ ತಾರೆ ಶಕೀರಾ ಅವರಿಗೆ ಜೈಲು ಶಿಕ್ಷೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಸ್ಪೇನ್ನ ಸರಕಾರಿ ಪರ ವಕೀಲರು ತಿಳಿಸಿದ್ದಾರೆ.

  ತೆರಿಗೆಗಳ್ಳತನಕ್ಕಾಗಿ 45 ವರ್ಷ ವಯಸ್ಸಿನ ಪಾಪ್ ತಾರೆ ಶಕೀರಾಗೆ 24.5 ದಶಲಕ್ಷ ಡಾಲರ್ಗಳ ದಂಡವನ್ನು ವಿಧಿಸುವಂತೆಯೂ ಸ್ಪೇನ್ ಸರಕಾರದ ಪ್ರಾಸಿಕ್ಯೂಟರ್ಗಳು ನ್ಯಾಯಾಲಯದಲ್ಲಿ ದಾವೆ ಹೂಡಲಿದ್ದಾರೆ. 2012 ಹಾಗೂ 2014ರ ನಡುವೆ ತಾನು ಸಂಪಾದಿಸಿರುವ 14.5 ದಶಲಕ್ಷ ಯುರೋ ಮೊತ್ತದ ತೆರಿಗೆಯನ್ನು ಶಕೀರಾ ಅವರು ವಂಚಿಸಿದ್ದಾರೆಂದು ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ.

 ಆದರೆ ತಪ್ಪೊಪ್ಪಿಕೊಳ್ಳುವಂತೆ ಪ್ರಾಸಿಕ್ಯೂಟರ್ಗಳು ನೀಡಿರುವ ಕೊಡುಗೆಯನ್ನು ಶಕೀರಾ ಅವರು ನಿರಾಕರಿಸಿದ್ದು, ತನ್ನ ವಕೀಲರುಗಳಿಗೆ ತನ್ನ ನಿರಪರಾಧಿತ್ವದ ಬಗ್ಗೆ ಸಂಪೂರ್ಣವಾಗಿ ಖಚಿತ ನಂಬಿಕೆಯಿದೆ. ಆದುದರಿಂದ ನ್ಯಾಯಾಲಯದ ಮೆಟ್ಟಲೇರಲು ನಿರ್ಧರಿಸಿರುವುದಾಗಿ ಶಕೀರಾ ಹೇಳಿದ್ದಾರೆ.

 ಆದಾಗ್ಯೂ ವಿಚಾರಣೆಯ ಆರಂಭವಾಗುವವರೆಗೆ ಈ ನಿಟ್ಟಿನಲ್ಲಿ ಒಪ್ಪಂದವೇರ್ಪಡುವ ಸಾಧ್ಯತೆಯನ್ನು ಅಲ್ಲಳೆಯಲು ಸಾಧ್ಯವಿಲ್ಲವೆಂದು ಶಕೀರಾ ಅವರ ನ್ಯಾಯವಾದಿಗಳು ತಿಳಿಸಿದ್ದಾರೆ.

    ತನ್ನ ಗೆಳೆಯ, ಬಾರ್ಸಿಲೋನಾದ ಫುಟ್ಬಾಲ್ ತಾರೆ ಜೆರಾರ್ಡ್ ಪಿಕ್ಯೂ ಜೊತೆಗಿನ ಸಂಬಂಧ ಮುರಿದುಬಿದ್ದ ಬಳಿಕ ಶಕೀರಾ 2011ರಲ್ಲಿ ಸ್ಪೇನ್ನಿಂದ ನಿರ್ಗಮಿಸಿದ್ದರು. ಆದರೆ ತನ್ನ ತೆರಿಗೆ ವಾಸ್ತವ್ಯವನ್ನು ಆಕೆ 2015ರವರೆಗೂ ಉಳಿಸಿಕೊಂಡಿದ್ದರು. ಶಕೀರಾ ಹಾಗೂ ಜೆರಾರ್ಡ್ಗೆ ಎರಡು ಮಕ್ಕಳಿದ್ದು, ಈ ವರ್ಷದ ಜೂನ್ನಲ್ಲಿ ಅವರು ಪ್ರತ್ಯೇಕಗೊಂಡಿದ್ದರು.

ತನ್ನ ವಿರುದ್ಧ ತೆರಿಗೆಗಳ್ಳತನದ ಆರೋಪ ಹೊರಿಸಿರುವುದನ್ನು ಶಕೀರಾ ಬಲವಾಗಿ ಖಂಡಿಸಿದ್ದು, ತನ್ನ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಅವರು ಆಪಾದಿಸಿದ್ದಾರೆ.

    ತನ್ನ ಅಂತಾರಾಷ್ಟ್ರೀಯ ಸಂಗೀತಗೋಷ್ಠಿ ಪ್ರವಾಸಗಳು ಹಾಗೂ ‘ದಿ ವಾಯ್ಸಿ’ ಎಂಬ ರಿಯಾಲಿಟಿ ಶೋದಲ್ಲಿ ತಾನು ತೀರ್ಪುಗಾರಳಾಗಿ ಸಂಪಾದಿಸಿದ ಹಣದಿಂದ ಮೇಲೆ ಸ್ಪೇನ್ನ ಪ್ರಾಸಿಕ್ಯೂಟರ್ಗಳು ಆಗ್ರಹಿಸುತ್ತಿದ್ದಾರೆಂದು ಶಕೀರಾ ಆಪಾದಿಸಿದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News