ಮಾಸ್ಕೊ: ಬಹುಅಂತಸ್ತಿನ ಕಟ್ಟಡದಲ್ಲಿ ಬೆಂಕಿ ದುರಂತ; ಕನಿಷ್ಠ 8 ಮೃತ್ಯು

Update: 2022-07-29 16:07 GMT

ಮಾಸ್ಕೊ,ಜು.29: ರಶ್ಯದ ರಾಜಧಾನಿ ಮಾಸ್ಕೋದಲ್ಲಿ ಮಧ್ಯರಾತ್ರಿ 15 ಅಂತಸ್ತುಗಳ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಬೆಂಕಿ ಅಪಾಯದ ಮುನ್ನೆಚ್ಚರಿಕೆಯ ಗಂಟೆ ವಿಫಲವಾದುದೇ ಸಾವುನೋವಿನ ಸಂಖ್ಯೆ ಹೆಚ್ಚಾಗಲು ಕಾರಣವೆಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

   ಮಾಸ್ಕೋದ ಆಗ್ನೇಯ ಭಾಗದ ನೆಲಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡ ಬೆಂಕಿ ಇತರ ಅಂತಸ್ತುಗಳಿಗೂ ಹರಡಿತ್ತು. ಮಧ್ಯರಾತ್ರಿಯ ವೇಳೆಗೆ ಬೆಂಕಿಯನ್ನು ನಂದಿಸಲಾಗಿದ್ದು, 200ಕ್ಕೂ ಅಧಿಕ ಮಂದಿಯನ್ನು ಕಟ್ಟಡದಿಂದ ತೆರವುಗೊಳಿಸಲಾಯಿತು.

      ಕಟ್ಟಡದಲ್ಲಿದ್ದ ಹಾಸ್ಟೆಲ್ನಲ್ಲಿ ದ್ದ ಬೆಂಕಿ ಅಪಾಯದ ಮುನ್ನೆಚ್ಚರಿಕೆಯ ಗಂಟೆಯು ಕೆಟ್ಟುಹೋಗಿತು ಹಾಗೂ ಕಿಟಕಿಗಳಿಗೆ ಬಲಿಷ್ಠವಾದ ಲೋಹದ ಕಂಬಿಗಳನ್ನು ಹಾಕಿದ್ದರಿಂದ ಅಲ್ಲಿದ್ದವರಿಗೆ ಹೊರಬರಲು ಸಾಧ್ಯವಾಗದೆ ಸಿಕ್ಕಿಹಾಕಿಕೊಂಡರೆಂದು ಹಿರಿಯ ತುರ್ತುಸ್ಥಿತಿ ಅಧಿಕಾರಿಯೊಬ್ಬಪರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕ್ರಿಮಿನಲ್ ಸ್ವರೂಪದ ನಿರ್ಲಕ್ಷ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News