×
Ad

ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ದಿಢೀರ್ ರಾಜೀನಾಮೆ

Update: 2022-07-30 07:38 IST
ಸ್ವತಂತ್ರ ದೇವ್ ಸಿಂಗ್

ಲಕ್ನೋ: ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ದಿಢೀರ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಲು ಸ್ವತಂತ್ರ ದೇವ್ ಸಿಂಗ್ ನಿರಾಕರಿಸಿದ್ದರೂ, ಮೂರು ದಿನಗಳ ಹಿಂದೆಯೇ ಅವರು ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಿದ್ದರು ಎಂದು ಅವರ ಆಪ್ತ ಮೂಲಗಳು ಹೇಳಿವೆ. ಜುಲೈ 16ರಂದು ಅವರ ಮೂರು ವರ್ಷಗಳ ಅಧಿಕಾರಾವಧಿ ಮುಕ್ತಾಯವಾಗಿತ್ತು.

ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ದಿನೇಶ್ ಖತಿಕ್ ತಮ್ಮ ರಾಜೀನಾಮೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಳುಹಿಸಿದ ಕೆಲವೇ ದಿನಗಳಲ್ಲಿ ಆ ಖಾತೆಯ ಸಂಪುಟ ದರ್ಜೆ ಸಚಿವರೂ ಆಗಿದ್ದ ಸ್ವತಂತ್ರ ದೇವ್ ಸಿಂಗ್ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ದಿನೇಶ್ ಖತೀಕ್ ಅವರು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಜತೆ ಮಾತುಕತೆ ನಡೆಸಿ, ಭಿನ್ನಾಭಿಪ್ರಾಯವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರೆ ಆರೆಸ್ಸೆಸ್ ಜತೆ ನಿಕಟ ನಂಟು ಹೊಂದಿರುವ ಕಾರಣಕ್ಕೆ ಸ್ವತಂತ್ರ ದೇವ್‌ ಸಿಂಗ್ ಪಕ್ಷದ ಅಧ್ಯಕ್ಷದ ಹುದ್ದೆಯನ್ನು ತ್ಯಜಿಸಬೇಕಾಗಿ ಬಂತು ಎಂದು ಬಿಜೆಪಿ ಮೂಲಗಳು ತಿಳಿಸಿರುವುದಾಗಿ timesofindia.com ವರದಿ ಮಾಡಿದೆ.

2014ರ ಬಳಿಕ ಬಿಜೆಪಿ ಕಡೆಗೆ ಒಲವು ತೋರುತ್ತಿರುವ ದಲಿತ ಸಮುದಾಯದವರು ಮತ್ತು ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರ ಜತೆ ಸೌಹಾರ್ದ ಸಂಬಂಧ ಹೊಂದಲು ಪಕ್ಷ ಬಯಸಿದೆ ಎಂದು ಹೇಳಲಾಗಿದೆ. ಸ್ವತಂತ್ರ ದೇವ್ ಸಿಂಗ್ ಅವರಂತೆ ಅರೆಸ್ಸೆಸ್‍ನಿಂದ ವೃತ್ತಿಜೀವನ ಆರಂಭಿಸಿದ ದಿನೇಶ್‌  ಖತೀಕ್ ಅವರು ಹಸ್ತಿನಾಪುರ ಮತ್ತು ಮೀರಠ್ ಮೀಸಲು ಕ್ಷೇತ್ರದಿಂದ 2017 ಮತ್ತು 2022ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News