×
Ad

ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್ ಗೆ ಪಕ್ಷಾಂತರವಾಗಿದ್ದ ಶಾಸಕನ ಕಂಪೆನಿಗೆ ಈಡಿ ನೋಟಿಸ್

Update: 2022-07-30 10:11 IST
Photo:twitter

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಶಾಸಕರೊಬ್ಬರ ಆಹಾರ ಹಾಗೂ  ಖಾದ್ಯ ತೈಲ ಕಂಪೆನಿ ಹಾಗೂ ಕೋಲ್ಕತ್ತಾ ಮೂಲದ ಎರಡು ಚಾನೆಲ್‌ಗಳ ನಡುವಿನ ಅನುಮಾನಾಸ್ಪದ ಹಣಕಾಸು ವಹಿವಾಟಿನ ಕುರಿತು ಶಾಸಕರ ಕಂಪೆನಿಯು ಜಾರಿ ನಿರ್ದೇಶನಾಲಯದಿಂದ ನೋಟಿಸ್ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮಾನತುಗೊಂಡಿರುವ ತೃಣಮೂಲ ಸಚಿವ ಪಾರ್ಥ ಚಟರ್ಜಿಯವರ ಆಪ್ತೆ, ನಟಿ-ಇನ್‌ಸ್ಟಾಗ್ರಾಮರ್ ಅರ್ಪಿತಾ ಮುಖರ್ಜಿ ಅವರಿಂದ ಕೋಟಿಗಟ್ಟಲೆ ಹಣ ವಶಪಡಿಸಿಕೊಂಡ ಬೆನ್ನಿಗೇ  ಟಿಎಂಸಿ ಪಕ್ಷದ ಮತ್ತೊಬ್ಬ ಶಾಸಕ ಕೃಷ್ಣ ಕಲ್ಯಾಣಿ ಅವರನ್ನು ಕೇಂದ್ರ ತನಿಖಾ ಸಂಸ್ಥೆಯು ಯಾವಾಗ ಬೇಕಾದರೂ ಸಮನ್ಸ್ ನೀಡುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ ಪಕ್ಷಾಂತರ ಮಾಡುವ ಮೊದಲು ಕಲ್ಯಾಣಿ ಬಿಜೆಪಿಯಲ್ಲಿದ್ದರು. ಅವರನ್ನು ತೃಣಮೂಲದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

2002 ರಲ್ಲಿ ಸ್ಥಾಪಿಸಲಾದ ಕಲ್ಯಾಣಿ ಸಾಲ್ವೆಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಆಹಾರ ತಯಾರಿಕಾ ಸಂಸ್ಥೆಯನ್ನು ಹೊಂದಿರುವ ಕಲ್ಯಾಣಿ ಅವರು 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.  ಆದರೆ ವಿಧಾನಸಭೆಗೆ ರಾಜೀನಾಮೆ ನೀಡದೆ ತೃಣಮೂಲಕ್ಕೆ ಪಕ್ಷಾಂತರಗೊಂಡರು.

ಕೋಲ್ಕತ್ತಾ ಮೂಲದ ಎರಡು ಚಾನೆಲ್‌ಗಳೊಂದಿಗೆ ಶಾಸಕರ ಕಂಪನಿಯ ಹಣಕಾಸು ವಹಿವಾಟಿಗೆ ಸಂಬಂಧಿಸಿ ಅವ್ಯವಹಾರದ ಆರೋಪ ಹೊಂದಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಅರ್ಪಿತಾ ಮುಖರ್ಜಿ ಅವರ ಮನೆಯಿಂದ ಕೋಟ್ಯಂತರ ರೂಪಾಯಿ ವಶಪಡಿಸಿಕೊಂಡ ನಂತರ ತೃಣಮೂಲ ಕಾಂಗ್ರೆಸ್ ಮಾಜಿ  ಸಚಿವರಿಂದ ಅಂತರ ಕಾಯ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News