ಜುಲೈ ತಿಂಗಳಲ್ಲಿ ರೂ 1,48 ಲಕ್ಷ ಕೋಟಿ ದಾಟಿದ ಜಿಎಸ್‍ಟಿ ಸಂಗ್ರಹ !

Update: 2022-08-01 11:51 GMT

 ಹೊಸದಿಲ್ಲಿ : ಜುಲೈ ತಿಂಗಳ ಜಿಎಸ್‍ಟಿ ಸಂಗ್ರಹ  ಕಳೆದ ತಿಂಗಳ ರೂ 1,44,616 ಕೋಟಿಯಿಂದ ರೂ 1,48,995 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಇಂದು ಮಾಹಿತಿ ನೀಡಿದೆ. ಜಿಎಸ್‍ಟಿ ತೆರಿಗೆ ನೀತಿ 2017ರಲ್ಲಿ ಜಾರಿಗೊಳಿಸಿದಂದಿನಿಂದ ತಿಂಗಳೊಂದರಲ್ಲಿ ಸಂಗ್ರಹಿಸಿದ ಎರಡನೇ ಅತಿ ಗರಿಷ್ಠ ತೆರಿಗೆ ಪ್ರಮಾಣ ಇದಾಗಿದೆ.

ಒಂದು ತಿಂಗಳಿನಲ್ಲಿ ಗರಿಷ್ಠ ರೂ 1,67,540 ಕೋಟಿ ತೆರಿಗೆ ಸಂಗ್ರಹ ಎಪ್ರಿಲ್ ತಿಂಗಳಿನಲ್ಲಿ ದಾಖಲಾಗಿತ್ತು. ಜುಲೈ ತಿಂಗಳಿನ ಜಿಎಸ್‍ಟಿ ಸಂಗ್ರಹ ಪ್ರಮಾಣ ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹಿಸಿದ ಜಿಎಸ್‍ಟಿಗಿಂತ ಶೇ 28ರಷ್ಟು ಅಧಿಕವಾಗಿತ್ತು. ಸತತ ಐದು ತಿಂಗಳಿನಿಂದ ಜಿಎಸ್‍ಟಿ ಸಂಗ್ರಹ ರೂ 1.4 ಲಕ್ಷ ಕೋಟಿ ದಾಟಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಜುಲೈ ತಿಂಗಳಲ್ಲಿ ಗಳಿಸಿದ ಒಟ್ಟು ಜಿಎಸ್‍ಟಿಯಲ್ಲಿ ಕೇಂದ್ರ ಜಿಎಸ್‍ಟಿ ರೂ 25,751 ಕೋಟಿ ಆಗಿದ್ದರೆ ರಾಜ್ಯ ಜಿಎಸ್‍ಟಿ ರೂ 32,807 ಕೋಟಿ ಆಗಿದೆ. ಏಕೀಕೃತ ಜಿಎಸ್‍ಟಿಯಿಂದ ಆದಾಯ ರೂ 79,518 ಕೋಟಿ ಆಗಿದೆ.

ಕಳೆದ ವರ್ಷ ಜುಲೈ ತಿಂಗಳಿನ ಜಿಎಸ್‍ಟಿ ಸಂಗ್ರಹಕ್ಕೆ ಹೋಲಿಸಿದಾಗ ಈ ವರ್ಷದ ಜುಲೈನಲ್ಲಿ ಗರಿಷ್ಠ  ಜಿಎಸ್‍ಟಿ ಸಂಗ್ರಹಿಸಿದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯ ಸಂಗ್ರಹಿಸಿದ ಜಿಎಸ್‍ಟಿ ಕಳೆದ ವರ್ಷಕ್ಕೆ ಹೋಲಿಸಿದಾಗ ಜುಲೈನಲ್ಲಿ ಶೇ 45 ರಷ್ಟು ಏರಿಕೆಯಾಗಿತ್ತು. ಉಳಿದಂತೆ ನಂತರದ ಸ್ಥಾನಗಳಲ್ಲಿ ತಮಿಳುನಾಡು (ಶೇ 34), ಕೇರಳ (ಶೇ 29) ಇವೆ. ಲಕ್ಷದ್ವೀಪದಲ್ಲಿ ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದಾಗ ಈ ವರ್ಷದ ಜುಲೈ ತಿಂಗಳಿನಲ್ಲಿ ಶೇ 69 ರಷ್ಟು ಹೆಚ್ಚು ಜಿಎಸ್‍ಟಿ ಸಂಗ್ರಹವಾಗಿದ್ದರೆ ನಂತರದ ಸ್ಥಾನಗಳಲ್ಲಿ ಪುದುಚ್ಚೇರಿ (ಶೇ 54) ಹಾಗೂ ಲಡಾಖ್ (ಶೇ 54) ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News